ಪ್ರತಿಸ್ಪಂದನ – Pratispandana

‘ಮುಂಗಾರು ಮಳೆ’ನಾ ಇಲ್ಲಾ ‘ಹನಿ ಹನಿ’ನಾ ನೀವೇ ನಿರ್ಧರಿಸಿ…!

April 11, 2008 · 1 Comment

      ಮೊನ್ನೆ ಮೊನ್ನೆ ಬಸವೇಶ್ವರ ನಗರದಿಂದ ಕಾರ್ಡ್ ರೋಡ್ ಕಡೆ ನಡಕೊಂಡು ಬರ್ತಾ ಇದ್ದೆ. ಎಡಗಡೆ ಒಂದು ಗೋಡೆಗೆ ಇತ್ತೀಚೆಗೆ ಬಿಡುಗಡೆಯಾದ ‘ಹನಿ ಹನಿ’ ಚಿತ್ರದ ಪೋಸ್ಟರ್ ಅಂಟಿಸಿದ್ದರು. ಗೋಡೆಗೆ ಒಬ್ಬಾತ ಕುಳಿತು ‘ಜಲಬಾಧಿತ’ ಜಲಧಾರೆ ಹರಿಸುತ್ತಿದ್ದ. ಆ ಗೋಡೆಯ ಮೇಲಿನ ಚಿತ್ರದಲ್ಲಿ ಹನಿ ಹನಿ ಚಿತ್ರದ ಹೀರೋ, ಹೀರೋಯಿನ್(ಪೂಜಾ ಗಾಂಧಿ) ಗಾಡಿ ಮೇಲೆ ಕುಂತಿರೋ ಚಿತ್ರ ಇತ್ತು. ನನಗೆ ಇನ್ನೊಂದು ವಿಷಯದ ಬಗ್ಗೆ ಸಮಜಾಯಿಷಿ ಬೇಕಿದೆ. ಅಲ್ಲಾ, ಎಲ್ಲಾ ಸಾಲದಾಗಿ ಈ ಚಿತ್ರ ಪ್ರಚಾರಕರು ಪೋಸ್ಟರ್‍ಗಳನ್ನ ‘ಸಾರ್ವಜನಿಕ ಬಯಲು ಶೌಚಾಲಯ’ಗಳ ಬಳಿಯಲ್ಲಿಯೇ ಯಾಕೆ ಹಚ್ಚುತಾರೆ ಅನ್ನೋದು ನನಗೆ ಕಾಡುವ ಪ್ರಶ್ನೆ. ಇಲ್ಲಾಂದ್ರೆ, ಅಲ್ಲಿ ಪೋಸ್ಟರ್ ಹಚ್ಚಿರುವ ಕಡೆ ಹೋಗಿಯೇ ಜಲಬಾಧೆ ತೀರಿಸಿಕೊಳ್ಳುತ್ತಲೇ ಪುಕ್ಕಟೆ ಮನೋರಂಜನೆ ಪಡೆಯುವ ‘ಜಲಬಾಧಿತರ’ ಇರಾದೆಯೋ..? ಗೊತ್ತಿಲ್ಲ..!

     ಆದರೆ, ಈ ಪ್ರಸಂಗದಲ್ಲಿ ಗೋಡೆ ಮೇಲಿರೋ ಪಾಪ ಪೂಜಾ ಗಾಂಧಿ, ಏನಂತ ಅಂದುಕೊಳ್ಳಬೇಕು ’ಮುಂಗಾರು ಮಳೆ’ಯಾ ಇಲ್ಲಾ ’ಹನಿ ಹನಿ’ಯಾ..? ಬಹುಷಃ ಮೊದಲನೆಯದಾದ ನಂತರ ಎರಡನೆಯದು ಅಂದುಕೊಂಡಿರಬಹುದು…!!!!

Categories: ಸ್ವಾರಸ್ಯ · ಹಾಸ್ಯ
Tagged: , , ,

1 response so far ↓

  • M G Harish // April 23, 2008 at 4:10 am | Reply

    ಆದರೆ, ಈ ಪ್ರಸಂಗದಲ್ಲಿ ಗೋಡೆ ಮೇಲಿರೋ ಪಾಪ ಪೂಜಾ ಗಾಂಧಿ, ಏನಂತ ಅಂದುಕೊಳ್ಳಬೇಕು ’ಮುಂಗಾರು ಮಳೆ’ಯಾ ಇಲ್ಲಾ ’ಹನಿ ಹನಿ’ಯಾ..? ಬಹುಷಃ ಮೊದಲನೆಯದಾದ ನಂತರ ಎರಡನೆಯದು ಅಂದುಕೊಂಡಿರಬಹುದು…!!!!

    LOL!!!

Leave a Comment