Aap muslim hai kya..?!!

ಆವತ್ತು ಕನ್ನಡರಾಜ್ಯೋತ್ಸವ. ಮೊನ್ನೆ ಮೊನ್ನೆ ನೆಡೆದ ನವೆಂಬರ್ ಒಂದರ ಕನ್ನಡ ರಾಜ್ಯೋತ್ಸವವೇ. ರೂಂ ಮುಂದಿನ ದರ್ಶನಿ ಹೊಟೇಲ್‌ನಲ್ಲಿ ಮದ್ಯಾಹ್ನ ಊಟ ಮಾಡುತ್ತಿದ್ದೆ. ಊಟ ಮುಗಿಸುವ ವೇಳೆಗೆ ಒಬ್ಬಾತ ಟೇಬಲ್ ಒರೆಸುವ ಹೋಟೆಲ್ ಮಾಣಿ ಬಂದು ನೀರು ತಂದಿಟ್ಟ. ನಂತರ “ಆಪ್ ಮುಸ್ಲಿಮ್ ಹೈ ಕ್ಯಾ?” ಅಂತಾ ಕೇಳಿದ. ನನಗೆ ಆಶ್ಚರ್ಯವಾಯಿತು. ನಾನು,”ನಹೀ” ಅಂದೆ. ನಂತರ ಆತ ಮತ್ತೊಂದು ಟೇಬಲ್ ಒರೆಸಲೋಸುಗವಾಗಿ, ಜನಜಂಗುಳಿಯಲ್ಲಿ ಮರೆಯಾದ. ಮತ್ತೆ ಊಟ ಮುಗಿಸಿ ಕೈತೊಳೆದುಕೊಂಡು ಹೊರಟಾಗ ಇನ್ನೊಂದು ಟೇಬಲ್ ಒರೆಸುತ್ತಾ ಇದ್ದ. ನಾನು “ಕ್ಯೋಂ ಪೂಛಾ?” ಅಂದೆ. ಆತ “ಕುರ್ತಾ ಪಹನೇಥೇನಾ ಇಸ್ಲಿಯೇ ಪೂಛಾ” ಅಂದ. ನಾನು ಮುಗುಳ್ನಕ್ಕು ಹೊರಬಂದೆ. ಅಂದು ಕನ್ನಡ ರಾಜ್ಯೋತ್ಸವವಾದ್ದರಿಂದ ನಾನು ಕುರ್ತಾ ಹಾಕಿಕೊಂಡು ಪಕ್ಕಾ ಸಾಹಿತಿಯ ಗೆಟಪ್ಪಿನಲ್ಲಿದ್ದೆ(ಇನ್ನೂ ಆ ರೀತಿ ದೊಡ್ಡ ಸಾಹಿತಿಯಾಗಿಲ್ಲ ಎಂದು ತಿಳಿಸಲು ವಿಷಾದಿಸುತ್ತೇನೆ..!). ಕೆಲವು ಸಂಗೀತ ಕಾರ್ಯಕ್ರಮಗಳು ಸಾಹಿತ್ಯ ಪರಿಷತ್ತಿನಲ್ಲಿ ಇದ್ದದ್ದರಿಂದ ಹೊರಟಿದ್ದೆ.

ನನಗೆ ವಿಚಿತ್ರವೆನಿಸಿತು. ನಾನು ಮುಸ್ಲೀಮನಾಗಿದ್ದಿದ್ದರೆ ಆತ ನನಗೆ ಇನ್ನಷ್ಟು ಹತ್ತಿರದಿಂದ ನೋಡುತ್ತಿದ್ದನೋ ಏನೋ! ಆದರೆ, ನಾನೇನೂ ಹಾಗೆ ಧಾರ್ಮಿಕವಾಗಿ, ಮತ ಪಂಗಡಗಳ ಮೇಲೆ ಜನರನ್ನು ನೋಡುವಂಥವನಲ್ಲ. ಆದರೆ, ಮಾತಾಡಿದ ದಿನವೇ, ಮಾತಿನ ಮೊದಲೆರಡು ವಾಕ್ಯಗಳಲ್ಲೇ ಜಾತಿ, ಧರ್ಮ ಗಮನಿಸುವ ವ್ಯಕ್ತಿಗಳನ್ನು ಕಂಡರೆ ಕಡು ಕೋಪ ಬರುತ್ತದೆ. ಹಿರಿಯರು, ಅದರೆಲ್ಲೂ ತಾಯಂದಿರು ಈ ರೀತಿ ಮಾಡುವುದು ನನಗೆ ಸುತಾರಾಂ ಹಿಡಿಸುವುದಿಲ್ಲ. ವ್ಯಕ್ತಿಯನ್ನು ಆತನ ನಿಷ್ಕಳಂಕ ಮಸ್ಸಿನಿಂದ, ಪ್ರಾಮಾಣಿಕತೆಯಿಂದ, ಭಾವನಾತ್ಮಕತೆಯಿಂದ, ತೋರುವ ಪ್ರೀತಿ – ವಿಶ್ವಾಸಗಳಿಂದ, ನೀಡುವ ಗೆಳೆತನದಿಂದ ಅಳೆಯಬೇಕು. ನನಗೆ ಬ್ರಾಹ್ಮಣ ಗೆಳೆಯರಿದ್ದಾರೆ, ಮುಸ್ಲಿಮ್ ಗೆಳೆಯರಿದ್ದಾರೆ, ಲಿಂಗಾಯಿತ ಗೆಳೆಯರಿದ್ದಾರೆ, ಗೌಡರಿದ್ದಾರೆ. ಆದರೆ, ನಾನು ಅವರನ್ನು ನೋಡುವುದು ಆತ್ಮೀಯತೆಯ ನೆಲೆಗಟ್ಟಿನಲ್ಲಿ.

ಹೋಟೆಲ್ ಮಾಣಿ ಅಪರಿಚಿತ ಊರಿನಲ್ಲಿ ತನಗೊಬ್ಬ ತಮ್ಮ ಭಾಷೆಯ ವ್ಯಕ್ತಿಯ ಸಾಂಗತ್ಯ ಸಿಗುತ್ತದೆಯೆಂದು ಈ ರೀತಿ ಪ್ರಶ್ನಿಸಿದ್ದಲ್ಲಿ ನನ್ನ ತಕರಾರಿಲ್ಲ. ಆದರೆ, ಧರ್ಮದ ನೆಲೆಗಟ್ಟಿನಲ್ಲಿ ಕೇಳಿದ್ದರೆ ಖಂಡಿತ ನನ್ನ ವಿರೋಧವಿದೆ. ಭಾಷೆ ಧರ್ಮದೊಂದಿಗೆ ಗುರುತಿಸಿಕೊಳ್ಳಬಾರದು. ಉರ್ದು ಶಾಯರಿಗಳು, ಖವ್ವಾಲಿಗಳು, ರುಬಾಯಿಗಳು ಮುಂತಾದವುಗಳಿಂದ ಸಮೃದ್ಧವಾದ ಭಾಷೆ. ಭಾಷೆಗೆ ಜಾತಿ, ಧರ್ಮ ಕಟ್ಟಬಾರದು ಎಂಬುದು ನನ್ನ ನಿಲುವು. ಹಾಗೆ ಮಾಡಿದರೆ ಜನಿವಾರ ನೋಡಿ ಯಾವ ಬ್ರಾಹ್ಮಣ ಸಮುದಾಯದವರು ಸ್ಮಾರ್ಥರಾ? ವೈಷ್ಣವರಾ? ಮಾಧ್ವರಾ? ಎಂದು ಕೇಳುವ ಮಂದಿಗೂ, ಶಿವದಾರ ನೋಡಿ, ಕರಡಿಗೆ ಲಿಂಗ ನೋಡಿ ಸಾದರಾ? ಬಣಜಿಗರಾ? ಪಂಚಮಸಾಲಿಗಳಾ? ಅಂತಾ ಕೇಳುವ ಮಂದಿಗೂ ವ್ಯತ್ಯಾಸವೇ ಕಾಣುವುದಿಲ್ಲ.

Advertisements

ತಮ್ಮ ಪ್ರತಿಕ್ರಿಯೆಯ ಅಭಿವ್ಯಕ್ತಿಗೆ ಧನ್ಯವಾದಗಳು. ಬ್ಲಾಗಿಗೆ ಗ್ರಾಹಕರಾಗಿ ಹೊಸ ಬರಹ ಬಂದಾಗ ಈಮೇಲ್‍ನಲ್ಲಿ ತಿಳಿಯಿರಿ.

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s