‘ಮುಂಗಾರು ಮಳೆ’ನಾ ಇಲ್ಲಾ ‘ಹನಿ ಹನಿ’ನಾ ನೀವೇ ನಿರ್ಧರಿಸಿ…!

      ಮೊನ್ನೆ ಮೊನ್ನೆ ಬಸವೇಶ್ವರ ನಗರದಿಂದ ಕಾರ್ಡ್ ರೋಡ್ ಕಡೆ ನಡಕೊಂಡು ಬರ್ತಾ ಇದ್ದೆ. ಎಡಗಡೆ ಒಂದು ಗೋಡೆಗೆ ಇತ್ತೀಚೆಗೆ ಬಿಡುಗಡೆಯಾದ ‘ಹನಿ ಹನಿ’ ಚಿತ್ರದ ಪೋಸ್ಟರ್ ಅಂಟಿಸಿದ್ದರು. ಗೋಡೆಗೆ ಒಬ್ಬಾತ ಕುಳಿತು ‘ಜಲಬಾಧಿತ’ ಜಲಧಾರೆ ಹರಿಸುತ್ತಿದ್ದ. ಆ ಗೋಡೆಯ ಮೇಲಿನ ಚಿತ್ರದಲ್ಲಿ ಹನಿ ಹನಿ ಚಿತ್ರದ ಹೀರೋ, ಹೀರೋಯಿನ್(ಪೂಜಾ ಗಾಂಧಿ) ಗಾಡಿ ಮೇಲೆ ಕುಂತಿರೋ ಚಿತ್ರ ಇತ್ತು. ನನಗೆ ಇನ್ನೊಂದು ವಿಷಯದ ಬಗ್ಗೆ ಸಮಜಾಯಿಷಿ ಬೇಕಿದೆ. ಅಲ್ಲಾ, ಎಲ್ಲಾ ಸಾಲದಾಗಿ ಈ ಚಿತ್ರ ಪ್ರಚಾರಕರು ಪೋಸ್ಟರ್‍ಗಳನ್ನ ‘ಸಾರ್ವಜನಿಕ ಬಯಲು ಶೌಚಾಲಯ’ಗಳ ಬಳಿಯಲ್ಲಿಯೇ ಯಾಕೆ ಹಚ್ಚುತಾರೆ ಅನ್ನೋದು ನನಗೆ ಕಾಡುವ ಪ್ರಶ್ನೆ. ಇಲ್ಲಾಂದ್ರೆ, ಅಲ್ಲಿ ಪೋಸ್ಟರ್ ಹಚ್ಚಿರುವ ಕಡೆ ಹೋಗಿಯೇ ಜಲಬಾಧೆ ತೀರಿಸಿಕೊಳ್ಳುತ್ತಲೇ ಪುಕ್ಕಟೆ ಮನೋರಂಜನೆ ಪಡೆಯುವ ‘ಜಲಬಾಧಿತರ’ ಇರಾದೆಯೋ..? ಗೊತ್ತಿಲ್ಲ..!

     ಆದರೆ, ಈ ಪ್ರಸಂಗದಲ್ಲಿ ಗೋಡೆ ಮೇಲಿರೋ ಪಾಪ ಪೂಜಾ ಗಾಂಧಿ, ಏನಂತ ಅಂದುಕೊಳ್ಳಬೇಕು ‘ಮುಂಗಾರು ಮಳೆ’ಯಾ ಇಲ್ಲಾ ‘ಹನಿ ಹನಿ’ಯಾ..? ಬಹುಷಃ ಮೊದಲನೆಯದಾದ ನಂತರ ಎರಡನೆಯದು ಅಂದುಕೊಂಡಿರಬಹುದು…!!!!

1 thought on “‘ಮುಂಗಾರು ಮಳೆ’ನಾ ಇಲ್ಲಾ ‘ಹನಿ ಹನಿ’ನಾ ನೀವೇ ನಿರ್ಧರಿಸಿ…!

  1. ಆದರೆ, ಈ ಪ್ರಸಂಗದಲ್ಲಿ ಗೋಡೆ ಮೇಲಿರೋ ಪಾಪ ಪೂಜಾ ಗಾಂಧಿ, ಏನಂತ ಅಂದುಕೊಳ್ಳಬೇಕು ’ಮುಂಗಾರು ಮಳೆ’ಯಾ ಇಲ್ಲಾ ’ಹನಿ ಹನಿ’ಯಾ..? ಬಹುಷಃ ಮೊದಲನೆಯದಾದ ನಂತರ ಎರಡನೆಯದು ಅಂದುಕೊಂಡಿರಬಹುದು…!!!!

    LOL!!!

ತಮ್ಮ ಪ್ರತಿಕ್ರಿಯೆಯ ಅಭಿವ್ಯಕ್ತಿಗೆ ಧನ್ಯವಾದಗಳು. ಬ್ಲಾಗಿಗೆ ಗ್ರಾಹಕರಾಗಿ ಹೊಸ ಬರಹ ಬಂದಾಗ ಈಮೇಲ್‍ನಲ್ಲಿ ತಿಳಿಯಿರಿ.

Please log in using one of these methods to post your comment:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s