ಇತ್ತೀಚೆಗೆ ಭಾರತಕ್ಕೆ ಬಂದ ಹೊಸ ನೆಟ್ವರ್ಕ್ Virgin mobile ಎಲ್ಲ ಬಸ್ಸ್ಟ್ಯಾಂಡು, ಗೋಡೆ, ಪರದೆ, ಎಲ್ಲವುಗಳ ಮೇಲೆ ತನ್ನ ಆಗಮನದ ಮಾಹಿತಿಯನ್ನ, ಜಾಹೀರಾತನ್ನ ಹಾಕಿದೆ. ಈ ಬರಹದ ಜೊತೆ ಅದನ್ನೂ ಮೇಲೆ ಲಗತ್ತಿಸಿದ್ದೇನೆ. ಅದರಲ್ಲಿ ಕಾಲೇಜಿಗೆ ಹೋಗೋ ಥರ ಇರೋ ‘Virgin ಯುವತಿ’ ಪುಸ್ತಕಗಳನ್ನ(ಕಾಲೇಜಿನವು ಅಂದುಕೊಳ್ಳಬಹುದು) ಮಡಿಚಿದ ಸ್ಟೈಲಿಷ್ ಕೈಯ್ಯಲ್ಲಿ ಹಿಡಿದಿದ್ದಾಳೆ. ಇನ್ನೊಂದು ಕೈ ವರ್ಣಿಸೋಣ ಅಂದರೆ, ಅದು ಮೊಣಕೈವರೆಗೆ ಅಷ್ಟೇ ಇರೋದು. ಹಾಗಾಗಿ ಚಾನ್ಸ್ ಇಲ್ಲ..! ಈಗ ‘ನೇರವಾಗಿ’ ವಿಷಯಕ್ಕೆ ಬರೋಣ. ಈ ಮೊಬೈಲ್ ನೆಟ್ವರ್ಕನ್ನ ಪ್ರಮೋಟ್ ಮಾಡಲಿಕ್ಕೆ ಆಕೆ ಫೋನ್ ಮಾಡಲಿಕ್ಕೆ ಹೇಳಬೇಕಲ್ಲ ಈ ಜಾಹೀರಾತು ನೋಡಿದವರಿಗೆ..? ಫೋನ್ ನಂಬರ್ರು ಆಕೆ ಧರಿಸಿದ ಟೀ ಶರ್ಟ್ ಮೇಲಿದೆ. ಎಲ್ಲರೂ ಇಲ್ಲಿಗೆ ಫೋನಾಯಿಸಿ ಅಂತಾ Editorial(‘ಎದಿತೋರಿಯಲ್’..!??) ಬರೆದುಕೊಂಡಿದ್ದಾಳೆ. ಹುಡುಗರು ಜಾಹೀರಾತಲ್ಲಿ ಹುಡುಗಿ ಚಿತ್ರ ಹಾಕಿದ್ರೆ, ಮೊದಲು ಮುಖ ನೋಡ್ತಾರೋ ಇಲ್ವೋ ಆದ್ರೆ ಎಲ್ಲಿ ನೋಡ್ತಾರೋ ಅಲ್ಲಿನೇ ಫೋನ್ ನಂ. ಹಾಕಿದ್ದಾರೆ. ಇದೇ ಅಲ್ವಾ ಬಿಸಿನೆಸ್ಸು ಅಂದ್ರೆ..??
ಅಲ್ಲಿಗೆ ಹುಡುಗರನ್ನ ಸೆಳೆದಿದ್ದಾಯಿತು. ಇನ್ನ ಹುಡುಗಿಯರಿಗೆ ಈ ಹೆಸರೇ ಆಪ್ಯಾಯಮಾನವಾಗಿರುವಂತೆ ಇಟ್ಟಿದ್ದಾರೆ. ಹುಡುಗಿಯರಿಗೆ Virgin ಅಂದ್ರೆ ಏನೋ ಹೆಮ್ಮೆ, ಗೌರವ, ಆತ್ಮಾಭಿಮಾನ, ಇಲ್ಲಿಯವರೆಗೂ ಅಖಂಡ ಬ್ರಹ್ಮಚರ್ಯ(ಇಲ್ಲಿ ಬ್ರಹ್ಮನೇ ಯಾಕೆ..? ಸ್ತ್ರೀಲಿಂಗ ಇಲ್ವಾ?) ಪಾಲಿಸಿದ್ದರ ಧ್ಯೋತಕವಾದ virginal ಹೆಸರು. ಅಲ್ಲಿಗೆ ಹುಡುಗಿಯರಿಗೂ ಪ್ರೀತಿಪಾತ್ರವಾದ ಮೊಬೈಲಾಗುವ ಸಕಲ ಅರ್ಹತೆಗಳನ್ನೂ ಪಡೆದುಕೊಂಡಂತಾಯಿತು. ತಮಗೆ ‘Virgin ಹುಡುಗಿಯರೇ’ ಬೇಕೆಂದು ಬಯಸುವ ಹುಡುಗರಿಗೆ ಆಕಾಶಕ್ಕೆ ಒಂದು ನ್ಯಾನೋಮೀಟರ್ ಉಳೀತು ಅಷ್ಟೇ. ಇಬ್ಬಂದಿತನವೆಂದರೆ, Virginity is not a dignity. Its a loss of opportunity ಅಂತಾ ಛೇಡಿಸುವ ಹುಡುಗರೂ ‘ಕನ್ಯೆ’ಯರನ್ನೇ ಮದುವೆಯಾಗಬಯಸುತ್ತಾರೆ..!
ಸಾಮಾನ್ಯವಾಗಿ ಹುಡುಗರು ಹುಡುಗಿಯರಿಗೆ* ಫೋನಾಯಿಸುತ್ತಾರೆ. ತಮ್ಮ ಪ್ರಿಯತಮೆಯಾಗಿರಬಹುದು, ಗೆಳತಿಯಾಗಿರಬಹುದು, ಜತೆಗಾರ್ತಿಯಾಗಿರಬಹುದು ಅಥವಾ ಸಂಗಾತಿಯಾಗಿರಬಹುದು. ಗಮನಿಸತಕ್ಕ ಅಂಶವೆಂದರೆ, ಹುಡುಗರು ಹುಡುಗಿಯರಿಗೆ call ಮಾಡುವುದು ಹುಡುಗಿಯರು ಹುಡುಗರಿಗೆ ಫೋನಾಯಿಸುವುದಕ್ಕಿಂತ ಜಾಸ್ತಿ. ‘ಮೀಟರ್’ ಹಾಗಾಗಿ ಜಾಸ್ತಿ ಆಗ್ತಿರ್ತದೆ. ಇದನ್ನೇ ಗಮನಿಸಿ, ಮೊಬೈಲ್ ಕಂಪನಿಯವರು ತಾರುಣ್ಯಭರಿತ ಯುವತಿಯ ಜಾಹೀರಾತು ಹಾಕಿದ್ದಾರೆ. ಎಷ್ಟೇ ಆಗಲಿ ಅನ್ಯಲಿಂಗ ಆಕರ್ಷಣೆ ಇಲ್ಲದಿರುತ್ತದೆಯೇ? ಹುಡುಗರಂತೂ ಬಲೆಗೆ ಬೀಳ್ತಾರೆ ಅಂತಾ ಗೊತ್ತು. ಸ್ತ್ರೀ ದ್ವೇಷಿಗಳು, I mean ಒಬ್ಬ ಹುಡುಗಿಯನ್ನ ಕಂಡರೆ ಮತ್ತೊಬ್ಬ ಹುಡುಗಿಗಾಗುವುದಿಲ್ಲವಲ್ಲ ಅವರು, ಈ ಮೊಬೈಲನ್ನ ಖರೀದಿಸದೇ ಹೋಗಬಹುದು. ಇಲ್ಲಿ ಇನ್ನೊಂದು possibility ಇದೆ. ತಮಗೆ ‘Virgin’ ಹುಡುಗಿ ಬೇಕೆಂದು ಹಟ ಹಿಡಿಯುವ ಹುಡುಗರು, ತಮ್ಮ ಹುಡುಗಿಗೇ ಈ ಮೊಬೈಲನ್ನ ಕೊಡಿಸಿ virgin ಆಗಿಸಬಹುದು. ಮೊಬೈಲನ್ನ ಕೊಡಿಸಲು ಇನ್ನೊಂದು ಕಾರಣವೂ ಇದೆ. ಈ virgin mobile ಗೆ ಬರುವ ಒಳಬರುವ ಕರೆಗಳಿಗೆ ನಿಮಿಷಕ್ಕೆ 10ಪೈಸೆ ಬರುತ್ತದೆ. ಹಾಗಾಗಿ ಗಂಟೆಗಟ್ಟಲೇ ಮೀಟರ್ ಹೊಡೆದು ತಮ್ಮ ದುಡ್ಡು ಖರ್ಚು ಮಾಡಿಕೊಂಡು, ಪ್ರಣಯ ಸಲ್ಲಾಪ ನೆಡೆಸುವ ಯುವಕರು, ತಮ್ಮ incoming call ನಿಂದಾದರೂ ತಮ್ಮ ಹುಡುಗಿಯ ಮೊಬೈಲಿಗೆ ಹಣಸಂದಾಯವಾಗಲೆಂಬ ಮಹದಾಸೆ..! ಯಾಕಂದ್ರೆ, ಬಹಳ ಸಲ, ತಾವೇ ಕರೆನ್ಸಿ ಹಾಕಿಸಿಕೊಡಬೇಕಲ್ಲ..!!
(* conditions apply ಹುಡುಗಿಯರು ಗೊತ್ತಿದ್ದರೆ).
ಉಳಿದೆಲ್ಲ ನೆಟ್ವರ್ಕ್ಗಳಿಗೆ ಕನ್ನಡೀಕರಣ ಮಾಡಿದ ಹೆಸರುಗಳಿವೆ
Airtel – ಗಾಳಿದೂರವಾಣಿ
Spice – ಮಸಾಲೆ ದೂರವಾಣಿ
Vodaphone – ವಡೆ ದೂರವಾಣಿ
ಇಲ್ಲಿ ಗಂಭೀರ ಸಮಸ್ಯೆ ಎದುರಾಗಿರೋದು ಸದರಿ ಫೋನಿನ ಕನ್ನಡೀಕರಣದ್ದು. ಹಾಗಾಗಿ, ಎಲ್ಲ ಅಂತರ್ಜಾಲ ಕನ್ನಡಿಗರು, ಬ್ಲಾಗಮಂಡಲಾಧಿಪತಿಗಳು, ಕನ್ನಡ ‘ಪ್ರೇಮಿಗಳು’ ಇರುವ ಗಂಭೀರ ಚರ್ಚೆಗಳನ್ನೆಲ್ಲಾ ಇರುವಲ್ಲಿಯೇ ಬಿಟ್ಟು ಬರಬೇಕಿದೆ. ಇದಕ್ಕೆ ‘ಕನ್ಯಾ ದೂರವಾಣಿ’ ಎಂದು ಹೆಸರಿಸಬೇಕೋ ಇಲ್ಲಾ ‘ಕನ್ಯತ್ವ ದೂರವಾಣಿ’ ಅನ್ನಬೇಕೋ ತಿಳಿಯದಾಗಿದೆ. ಯಾಕೆಂದರೆ ಇದೊಂದು ರೀತಿ ಅನನ್ಯತೆ ಹೊಂದಿದೆ. ಹಾಗಾಗಿ ಕನ್ಯಾನನ್ಯ ದೂರವಾಣಿ ಎಂದು ನಾಮಕರಣ ಮಾಡಬಹುದೇನೋ ಎಂಬ ಬಗ್ಗೆ ಅನುಮಾನವಿದೆ. ಓದುಗರು suggest ಮಾಡಿದರೆ ಒಳ್ಳೇದು.
ಇಲ್ಲಿ ಇನ್ನೊಂದು ಸ್ವಾರಸ್ಯಕರ ಸಂಗತಿ ಇದೆ. Call me 09250362436 ಅಂತಾ ಎದೆಯ ಮೇಲೆ ಧರಿಸಿರುವ ಯುವತಿ, ಅಖಂಡ ಬ್ರಹ್ಮಚಾರಿಣಿ, ಕನ್ಯತ್ವ ಪರಿಭಾಷಿಣಿ ಹೀಗೆ ಒಮ್ಮಿಂದೊಮ್ಮೆಲೇ ‘ಕಾಳ್ ಮಿ’ ಎಂದರೆ ತುಂಟ ಹುಡುಗರು ‘ಕಾಳು ಹಾಕುವುದಕ್ಕೆ’ ಸಕಲ ತಯಾರಿ ಮಾಡಿಕೊಳ್ಳಲು ತಲೆ ಕೆರೆದುಕೊಳ್ಳುವಂತೆ ಮಾಡಿದ್ದೇಕೆ?
ಗಣೇಶ, ನಿನಗೆ ಇಂಥ ವಿಷಯಗಳು ಎಲ್ಲಿಂದ ಸಿಗುತ್ತೋ ದೇವ್ರೇ ಬಲ್ಲ… ಸಖತ್ತಾಗಿ ಬರೀತೀಯ…
yOchisabEkAda sangati. sakAlika baraha.
teera muktavAgi mAtADuva geLeyanobba `virgin’ hesaru, `Get paid for incomming’ slOgannu, Ede mElina `call me’ ellavannU pONisi pOli mAtADi nakkidda. hareyada avanu hELiddellavU A vayassina grahikege sariyAgE ittu.
bahuSaha company yavara adakkAgE hAgella hesariTTu, advtize mADtidArenO….
ಹಿಂಗೇ ಭಾಳಾ ಯೋಚನೆ ಮಾಡೀ ಮಾಡೀ, ಗಂಭೀರ ಚರ್ಚೆ ಮಾಡೀ ಮಾಡಿ, ಸಾಕಾಗೋಗಿತ್ತು. ಹಿಂಗೇ ಸ್ವಲ್ಪ ಛೇಂಜ್ ಇರ್ಲಿ ಅಂತಾ..! 😉
ಹರೀಶ, ತುಂಟ ಯೋಚನೆಗಳಿಗೇನೋ ಬರ..? ಅದನ್ನ ನೋಡೋ ದೃಷ್ಟಿಕೋನದಲ್ಲಿದೆ.
ಚೇತನಾ,
ನೀವ್ ಹೇಳಿದ್ದು ಸರಿ. ಗ್ರಹಿಕೆ ಮೇಲೆನೇ ಕಂಪನಿಗಳು ಜಾಹೀರಾತು ತಯಾರಿಸೋದು. ಯುವ ಜನರ ಮಾರುಕಟ್ಟೆಯನ್ನೇ ದೃಷ್ಟಿಕೋನ ಹೊಂದಿ, ಯುವಜನರ ದೃಷ್ಟಿಕೋನದಲ್ಲಿ ಬರಬೇಕಾದ ವಸ್ತುಗಳನ್ನೇ ತಯಾರಿಸುತ್ತಾರೆ. ಈ ಬರಹದಲ್ಲಿ ತುಂಟಾಟ ಎಷ್ಟಿದೆಯೋ ಅಷ್ಟೇ ವಾಸ್ತವದ ವ್ಯಂಗ್ಯವಿದೆ. ನಿಮ್ಮ ಕಾಳಜಿ ನನಗೆ ಅರ್ಥವಾಗುತ್ತೆ. ಆದರೆ, ತುಂಟ ಬರಹಗಳನ್ನೂ ನೀವು ಗಂಭೀರವಾಗೇ ವಿಮರ್ಶೆ ಮಾಡ್ತೀರಲ್ಲ..? ನೀವ್ ನಗೋದೇ ಇಲ್ವಾ.? ಖುಷಿ ಪಡೋದೇ ಇಲ್ವಾ..? 🙂 ಇರಲಿ. ನಿಮ್ಮ ಅಭಿಪ್ರಾಯಕ್ಕೆ ನನ್ನ ಅಭಿಮತವಿದೆ. ನಿಮ್ಮ ಪ್ತತಿಕ್ರಿಯೆಗಳು ಸದಾ ಇರಲಿ.
ನಿಮ್ಮವ
ಗಣೇಶ್.
Oooo, idu neevu tunTatanakke barediddUnta arthavAglilla.
modala sArti advt. nODidAga sakhat irritate Agidde. nammanammalli mAtADvAga ee vishaya charchege bandittu.
ee vakya, pada, slOgannugaLa sannivEsha bere idre nAnU nagtiddenEnO…
haudu.. nAnu nagOdu kadime.
ಚೇತನಾರವರೇ,
ಸಂತೋಷವಾಗಿರೋದೇ ಜೀವನದ ಬಹು ಮುಖ್ಯ ಅಂಶವಲ್ಲವಾ..? ಚಿಕ್ಕ ಚಿಕ್ಕ ಸಂತೋಷಗಳನ್ನೂ ಅನುಭವಿಸಬೇಕು. ನಾನು ಎಷ್ಟು ಗಂಭೀರ ಚರ್ಚೆಯಲ್ಲಿ ತೊಡಗಿಸಿಕೊಳ್ಳಬಲ್ಲೆನೋ ಅಷ್ಟೇ ಉಡಾಫೆ ಕೂಡ ಇದೆ. ಪಂಚ್ ಲೈನ್, ಪ್ರತಿಸ್ಪಂದನ ಪರಸ್ಪರ ವೈರುಧ್ಯ ಹೊಂದಿರುವ ಬರಹಗಳ ನನ್ನ ಎರಡು ತಾಣಗಳು. ಪಂಚ್ ಲೈನ್ ಮೊನಚಿಗೆ, ವ್ಯಂಗ್ಯಕ್ಕೆ, ವಿಡಂಬನೆಗೆ ಇದ್ದರೆ, ಪ್ರತಿಸ್ಪಂದನ ಚರ್ಚೆ, ಸಂವಾದ, ವೈಚಾರಿಕತೆ , ಸ್ವಾರಸ್ಯ, ವಿನೋದ, ಹಾಸ್ಯಕ್ಕೆ ಮೀಸಲು. ವೈಚಾರಿಕತೆ, ಹಾಸ್ಯ ಒಂದನ್ನೊಂದು ಬಿಟ್ಟಿರದೆ ಇರೋದು ಸೋಜಿಗ ಅನ್ನಿಸುತ್ತೆ. ಎ.ಎನ್.ಮೂರ್ತಿರಾಯರು, ಹೆಚ್.ನರಹಿಂಹಯ್ಯನವರು ಪ್ರಖರ ವೈಚಾರಿಕತೆಗೆ ಹೆಸರಾದವರು. ಆದರೆ, ಅಷ್ಟೇ ವಿನೋದಪ್ರಿಯರು. ಎಲ್ಲವನ್ನೂ ಅಳೆದೂ ಸುರಿದೂ ತೂಗೀ ನೋಡ್ತಾ ಹೋದ್ರೆ, ಜೀವನ ನಿಸ್ಸಾರವಾಗುತ್ತದೆ ಅನ್ನಿಸೋಲ್ವಾ..? ಈ ಅನುಭೂತಿಯೇ ನಮ್ಮನ್ನ, ನಮ್ಮ ಮನಸ್ಸು ಹೃದಯಗಳನ್ನ ಸುಸ್ಥಿತಿಯಲ್ಲಿ ಇಡುತ್ತವೆ. ಇನ್ಮೇಲಾದ್ರೂ ನೀವು ಸ್ವಾರಸ್ಯ, ತುಂಟಾಟ, ಹಾಸ್ಯ, ಬದುಕಿನ ಸಂತೋಷಗಳನ್ನ ಬೆರಗುಗಣ್ಣಿನಿಂದ, ಸೋಜಿಗದ ಸಂಗತಿಯೆಂಬಂತೆ ನೋಡುತ್ತೀರೆಂದು ಆಶಿಸಬಹುದೇ..?:-)
ನಿಜ್ವಾಗ್ಲೂ ಗಣೇಶ್, ಕೆಟ್ದಾಗಿದೆ ನಿಮ್ಮ ಅನಲೈಸೇಶನ್!
ನಾನು ನೀವಂದ್ಕೊಂಡ ಹಾಗೆ ಘನಘೋರ ಗಂಭೀರಳಲ್ಲಪ್ಪಾ! ಅಲ್ಲಾ, ನೀವು ಹಾಗೆ ಗಂಭೀರವಾದ ಸಂಗತಿ ಬರೆದು ಲಘುವಾಗ್ ತೊಗೋಳಿ ಅಂತಿರೋದು ಯಾಕೆ ಗೊತ್ತಾಗ್ಲಿಲ್ಲ. ಒಂದ್ ಲೆವೆಲ್ಲಲ್ಲಿ ತೀರಾ ವಲ್ಗರ್ ಅನ್ನಿಸೋ ವಾಕ್ಯಗಳು ಅದರಲ್ಲಿವೆ. ಅದಕ್ಕೆ ನಾನು ಅದ್ನ ಸೀರಿಯಸ್ಸಾಗಿ ಪರಿಗಣಿಸ್ದೆ. ಹೆಣ್ಣುಮಕ್ಕಳನ್ನ ‘ಜೋಕ್’ ಆಗಿ ತೊಗೋಳಿ, ಯಾರು ಬೇಡ ಅಂತಾರೆ? ಆದ್ರೆ ಅದು ಅಶ್ಲೀಲ ಆಗಬಾರದಲ್ವಾ?
ಇರಲಿ. ಪರಸ್ಪರ ಪರಿಚಯವಿಲ್ಲದ ಕಾರಣ ಹೀಗೆ ನೀವು ತಿಳಿಯೋದರಲ್ಲಿ ತಪ್ಪೆನಿಲ್ಲ.
ಹಾ! ನಿಮ್ಮ ಉಪದೇಶ ಓದಿ ಮಾತ್ರ ನಾನು ಹೊಟ್ಟೆಹಿದಿದು ನಕ್ಕೆ! ಪಕ್ಕದಲ್ಲಿ ಅಣ್ಣ ಛೇಡಿಸ್ತಿದ್ದ, ಅದಕ್ಕೆ!!
ಕೆಟ್ದಾಗಿದೆ ನಿಮ್ಮ ಅನಲೈಸೇಶನ್- ಇದು ತಮಾಷೆಗೆಂದೇ ಬರೆದ ಮಾತು. ಬೇರೆಯದೆ ಬಗೆಯಲ್ಲಿ ಭಾವಿಸ್ಬೇಡಿ ಮತ್ತೆ!
ಹೋಗ್ಲಿ ಬಿಡಿ…,
ಒಟ್ನಲ್ಲಿ ನೀವ್ ನಕ್ಕ್ರಲ್ಲ…!!!!
ನೀವು ಹಾಸ್ಯವನ್ನೂ ಉಪದೇಶದ ರೀತೀಲಿ ಹೇಳಿದ್ರೆ ಮಾತ್ರ ನಗೋದು ಅನ್ನೋದು ಈಗ confirm ಆಯಿತು ಬಿಡಿ..!! 🙂 ಅದಕ್ಕೇ ಅತಿಯಾದ ತತ್ವವನ್ನ, ಉಪದೇಶವನ್ನ ಹೇಳಿದ್ದು..! ವರ್ಕ್ ಔಟ್ ಆಯಿತು…!
ವಲ್ಗರಿಸಿದ ವಾಕ್ಯಗಳನ್ನ ಈಮೇಲಿಸಿ. ಮುಂದೆ ಹಾಗಾಗದಂತೆ ಎಚ್ಚರವಹಿಸುವೆ. adult ಅಥವಾ adultrated content ಬಗ್ಗೆ ವಿಷಾದವಿದೆ. ಆದರೆ, ಕೌಟುಂಬಿಕ ಬ್ಲಾಗು ಬರಿಯೋದು ತುಂಬಾ ಕಷ್ಟ..! ಮನೆಮಂದಿಯೆಲ್ಲ್ಲ ಓದಬಹುದಾದ ಅನ್ನೋ ಒಕ್ಕಣಿಕೆ ಕೊಡೋದು ಇನ್ನೂ ಕಷ್ಟ..!
ಇನ್ನೊಂದ್ ಇಪ್ಪತ್ ವರ್ಷ ಆದಮೇಲೆ ಬರಿಬೋದೇನೋ..!
ಇನ್ನು ಮೇಲೆ ಇಂಥ ಲೇಖನಗಳನ್ನ ‘ಎ’ ಸರ್ಟಿಫಿಕೇಟು ಕೊಟ್ಟು ಪಬ್ಲಿಷ್ ಮಾಡಬೇಕು..!
ಗಣೇಶ್,
ಈಗಂತೂ ಸಿಕ್ಕಾಪಟ್ಟೆ ನಗ್ತಿದೀನಿ, ನಿಮ್ಮ ಪ್ರತಿಕ್ರಿಯೆ ಓದ್ತಾ…
ನಿಜ್ವಾಗ್ಲೂ 🙂