ಪುಕ್ಸಟೆ ಯಾಕ್ ಬರೀಬೇಕು ವರ್ಡ್ ಪ್ರೆಸ್ ನಲ್ಲಿ ?
ನಾವು ಬರೆಯುವ ಪ್ರತಿಯೊಂದು ಬರಹಗಳಿಗೂ ಸರ್ವಿಸ್ ಪ್ರೊವೈಡರ್, ಸರ್ಚ್ ಎಂಜಿನ್ ಗಳು ಎಲ್ಲವೂ ದುಡ್ಡು ಸಂಪಾದಿಸುತ್ತವೆ. ಎಲ್ಲರಿಗೂ ಇಂತಿಷ್ಟು ಹಣ ಅಂತಾ ಹೋಗುತ್ತದೆ. ಇಲ್ಲಿ ನಮ್ಮ ಶ್ರಮ, ಪ್ರತಿಭೆ, ಅಮೂಲ್ಯ ಸಮಯ ಎಲ್ಲವನ್ನು ಎನ್ಕ್ಯಾಶ್ ಮಾಡಿಕೊಳ್ತಾ ಇದಾರೆ ಅಷ್ಟೇ. ಅದೂ wordpress.com ನಲ್ಲಿ ನೀವು ಯಾವುದೇ ಜಾಹಿರಾತುಗಳನ್ನು ಹಾಕಲಿಕ್ಕೆ ಆಗುವುದಿಲ್ಲ. ಹಾಕಬೇಕೆಂದರೆ, wordpress.org ಒಂದು ಡೊಮೈನ್ ಕೊಂಡುಕೊಳ್ಳಬೇಕು. ಬೇರೆ ಬೇರೆ ಕಂಪನಿಗಳು ಡೊಮೈನ್ ಕೊಡ್ತವೆ. ಅದಕ್ಕೆ ವರ್ಷಕ್ಕೆ ೨೦೦ರಷ್ಟು ಕಟ್ಟಬೇಕು. ನಿಮ್ಮ ದಾಖಲೆಗಳನ್ನ, ಬರಹಗಳನ್ನ ಶೇಖರಣೆ ಮಾಡಿಕೊಳ್ಳಲಿಕ್ಕೆ, ವೆಬ್ ಸ್ಪೇಸ್ ಕೊಂಡುಕೊಳ್ಳಬೇಕು. ಅದಕ್ಕೆ ವರ್ಷಕ್ಕೆ ೧೦೦೦ ದಿಂದ ೪೦೦೦ದ ವರೆಗೂ ಕಟ್ಟಬೇಕು.
ಬೀಚಿ ಒಂದು ಮಾತಾಡಿದ್ದಾರೆ. ನಾನು ದುಡ್ಡಿಗಾಗಿ ಬರೆದಿಲ್ಲ. ಆದರೆ, ಬರೆದಿದ್ದಕ್ಕೆಲ್ಲಾ, ದುಡ್ಡು ಪಡೆದಿದ್ದೇನೆ. ಸುಮ್ನೆ ನಮ್ಮ ಭಾವನೆಗಳನ್ನ ಹಂಚಿಕೊಳ್ಳಲಿಕ್ಕೆ, ಪ್ರತಿಭೆಗೆ ವೇದಿಕೆ ದೊರೆಯಲಿಕ್ಕೆ ಬ್ಲಾಗಿಂಗ್ ಶುರು ಮಾಡಿರಬಹುದು. ಆದರೆ, ನಿಮ್ಮತನವನ್ನ ಬೇರೆಯವರು ಎನ್ಕ್ಯಾಶ್ ಮಾಡಿಕೊಳ್ಳಲಿಕ್ಕೆ ಯಾಕೆ ಅವಕಾಶ ಕೊಡಬೇಕು. ಹೋದ ವರ್ಷ ಜುಲೈ ನಿಂದಲೂ ಇದರ ಬಗ್ಗೆ ತದಕಾಡಿದ್ದೇನೆ. ಏನೂ ದೊರೆತಿಲ್ಲ. ವಿವರಗಳಿಗಾಗಿ ಇಲ್ಲಿ ನೋಡಿ. http://forums.digitalpoint.com/showthread.php?t=1159929
ಬ್ಲಾಗ್ ಸ್ಪಾಟ್ ನಲ್ಲಿ ಜಾಹಿರಾತಿನ ಅವಕಾಶವಿದೆ. ಇದಕ್ಕೆ ಇನ್ನೊಂದು ಕಾರಣವೂ ಇದೆ. ಬ್ಲಾಗ್ ಸ್ಪಾಟ್ ಮತ್ತು ಗೂಗಲ್ ad ಸೆನ್ಸ್ ಎರಡೂ ಗೂಗಲ್ ಕಂಪನಿಯವೇ. https://www.google.com/adsense/
ಗೆ ಹೋಗಿ ನೀವು ಜಾಹಿರಾತಿನ ಅವಕಾಶಗಳನ್ನ ಒಮ್ಮೆ ಪರಿಶೀಲಿಸಬಹುದು. http://www.google.com/analytics/ ಈ ವಿಳಾಸ ಬಳಸಿ, ನಿಮ್ಮ ಗೂಗಲ್ ಅಕೌಂಟ್ ನೊಂದಿಗೆ ನಿಮ್ಮ ಬ್ಲಾಗನ್ನ, ವೆಬ್ ಸೈಟ್ ನ್ನ ಎಷ್ಟ್ ಜನ ನೋಡ್ತಾರೆ ಅಂತಾ ಗಮನಿಸಬಹುದು.
ಹಾಗಾಗಿ, ವರ್ಡ್ ಪ್ರೆಸ್ ಬಳಸುವುದು ಪರಕೀಯತೆ ಅನುಭವಿಸಿದಂತೆ ಅನ್ನಿಸತೊಡಗಿದೆ. ನೀವು ಬರಹಗಳನ್ನ ಹಾಕದಿದ್ದರೆ, ಈ ವೆಬ್ ಸೈಟ್ ನೋಡಲಿಕ್ಕೆ ಯಾರು ಬರುವುದಿಲ್ಲ. ಶ್ರಮ, ಸಮಯ, ಪ್ರತಿಭೆ, ಬುದ್ಧಿ ನಮ್ಮದು, ದುಡ್ಡು ಅವರಿಗೆ. ನನ್ನೆಲ್ಲ ಬರಹಗಳನ್ನ ಬ್ಲಾಗ್ ಸ್ಪಾಟ್ ಗೆ ವರ್ಗಾವಣೆ ಮಾಡುವತ್ತ, ಅಥವಾ, ಇಲ್ಲಿ ಬರೆದು ಅದಕ್ಕೆ ಲಿಂಕಿಸುವ ಕೆಲಸದ ಬಗ್ಗೆ ಚಿಂತಿಸುತ್ತಿದ್ದೇನೆ. ಬ್ಲಾಗ್ ಸ್ಪಾಟ್ ನಲ್ಲಿ ಜಾಹಿರಾತಿಗೆ ಅವಕಾಶವಿದೆ. wordpress.com ನಿಮಗೆ ನಿಮ್ಮ ಬರಹಗಳನ್ನ ಪ್ರಕಟಿಸಲಿಕ್ಕೆ ಅವಕಾಶ ನೀಡಬಹುದು. ಆದರೆ, ಜಾಹಿರಾತು ಪ್ರಕಟಿಸುವ ಸ್ವಾತಂತ್ರವನ್ನಲ್ಲ.
ನಿಮ್ಮ ಅಭಿಪ್ರಾಯಕ್ಕೆ ನನ್ನ ಸಹಮತವಿದೆ. ಸುಘೋಷ್ ಎಸ್. ನಿಗಳೆ
ಹಿಂದೊಮ್ಮೆ ನಾನು ಕನ್ನಡ ಬ್ಲಾಗಿನಲ್ಲಿ ಜಾಹೀರಾತುಗಳ ಬಗ್ಗೆ ಬರೆದಿದ್ದೆ.
ಬ್ಲಾಗ್ ಸ್ಪಾಟಿನಲ್ಲಿ ಕನ್ನಡದ ಕಂಟೆಟ್ ಇರುವ ಬ್ಲಾಗಿಗೆ adsense ಸಪೋರ್ಟ್ ಇಲ್ಲ. ವರ್ಡ್ ಪ್ರೆಸ್ ಉಚಿತವಾಗಿ ನೀಡುತ್ತಿರುವ ಈ ಸ್ಟೋರೇಜ್ ಸ್ಪೇಸ್ ಹಾಗೂ ಬ್ಲಾಗಿಂಗ್ ಸರ್ವೀಸ್ ನಿಮಗೆ ಉಚಿತವಾಗಿ ಎಲ್ಲಿ ಸಿಕ್ಕುತ್ತೆ? ನೇರವಾಗಿ ಅವರು ನಮ್ಮ ಬ್ಲಾಗುಗಳಲ್ಲಿ ಜಾಹೀರಾತು ಹಾಕಿ ಹಣ ಸಂಪಾದಿಸುತ್ತಿಲ್ಲವಲ್ಲ?
ಸುಪ್ರೀತ್, ಇದರ ಬಗ್ಗೆ, ಪ್ರಾಂತೀಯ ಭಾಷಾ ನಿರ್ವಹಣೆ ಹೊತ್ತಿರುವ ಗೂಗಲ್ ಅಧಿಕಾರಿಯನ್ನ ಸಂಪರ್ಕಿಸಬೇಕು. ಕನ್ನಡದಲ್ಲೂ ಸಾವಿರಗಟ್ಲೇ ಬ್ಲಾಗುಗಳಿವೆ. ವೆಬ್ಸೈಟುಗಳಿವೆ. ಕನ್ನಡದಲ್ಲಿರುವ ಕಂಟೆಂಟು, ಓದುಗರ ವಲಯವೇನೂ ಕಡಿಮೆ ಇಲ್ಲ. ಅವರು ಇಲ್ಲಿ ಕೂಡಾ ಜಾಹೀರಾತುಗಳನ್ನ ಪಡೆಯಬಹುದು. ನಮ್ಮ ಪ್ರಯತ್ನವನ್ನ ಮಾಡೋಣ.
ವಿಕಾಸ್, ಕನ್ನಡ ಬ್ಲಾಗುಗಳನ್ನ ರೆಕಗ್ನೈಸ್ ಮಡುವುದಿಲ್ಲ ಅಂದರೇನು. ಸ್ಪಲ್ಪ ತಿಳಿಸಿ.
ಅಂದರೆ ಬ್ಲಾಗ್ ಸ್ಪಾಟಿನಲ್ಲಿ ಕನ್ನಡದ ಕಂಟೆಟ್ ಇರುವ ಬ್ಲಾಗಿಗೆ adsense ಸಪೋರ್ಟ್ ಇಲ್ಲ ಎಂದು ಅರ್ಥ.
blogspot ನಲ್ಲೂ ಪುಕ್ಸಟ್ಟೆನೇ ಬರೀಬೇಕು. ಎರಡಕ್ಕೂ ಹೆಚ್ಚು ವ್ಯತ್ಯಾಸವೇನಿಲ್ಲ. blogspot adsense ನಿಂದ ಯಾವ ಉಪಯೋಗವೂ ಇಲ್ಲ. ಕನ್ನಡ ಬ್ಲಾಗ್ ಗಳನ್ನ ಅದು recognise ಮಾಡುವುದೂ ಇಲ್ಲ!