ಯಡ್ಡಿ ಅಭಿನಂದನಾ ಸಮಾವೇಶ : ಚೆಡ್ಡಿ ಪತ್ರಿಕೆಯ ಯಡ್ಡಿ ಚೇಲಾಗಿರಿ..?

Yaddyurappa banner - Abhinandana samarambha - hubli -  march 11, 2012

Yaddyurappa banner - Abhinandana samarambha - hubli - march 11, 2012

ಯಡಿಯೂರಪ್ಪನ ಗುಣಗಾನದ ಪುರವಣಿ, ಯಡ್ಯೂರಪ್ಪ ಸಂಪೂರ್ಣ ಆರೋಪ ಮುಕ್ತ ಅಂತಾ ದೊಡ್ಡದಾಗಿ ಸಾರಿ, ಮುಖಪುಟವನ್ನೇ ಆತನಿಗಾಗಿ ಮೀಸಲಿಡುವುದು, ಬೇರೆ ಯಾವ ಸುದ್ದಿಗೂ ಪ್ರಾಧಾನ್ಯ ನೀಡದೇ ಇರುವುದು ಇವೆಲ್ಲಾ ಏನನ್ನ ತೋರಿಸುತ್ತವೆ? ಯಡ್ಯೂರಪ್ಪನ ಮೇಲೆ ಇನ್ನೂ ೮ ಕೇಸುಗಳು ಬಾಕಿ ಇರುವಾಗ ಅದರ ಪ್ರಸ್ತಾಪವೇ ಇಲ್ಲ. ಇದೇನಾ ರಾ(ಭ್ರ)ಷ್ಟ್ರಜಾಗೃತಿ?

ಇದು ಹುಬ್ಬಳ್ಳಿಯಿಂದ ಸಾಕ್ಷಾತ್ ವರದಿ.
ಹೊಸ ದಿಗಂತ ತನ್ನನ್ನ ತಾನು ಅಕ್ಷರಶಃ “ಮಾರಿಕೊಂಡಿದೆ”. ಯಡಿಯೂರಪ್ಪನ ಸಮಾವೇಶದಲ್ಲಿ ಪಾಂಪ್ಲೇಟ್‍ಗಳಂತೆ ಹಂಚಲಿಕ್ಕೆ ಹೊಸ ದಿಗಂತದ ಕಟ್ಟುಗಳನ್ನ ತಂದಿದ್ದಾರೆ. ವಿಭಾಗೀಯ ಪೀಠದ ತೀರ್ಪು ಅಂತಾ ಮುಖಪುಟದ ಅರ್ಧ ಭಾಗವನ್ನ ಮೀಸಲಿಟ್ಟಿದೆ. ಕೊನೆಯ ರಕ್ಷಾಪುಟವನ್ನ ಪೂರಾ ವಿನಿಯೋಗಿಸಿದೆ. ಕೋರ್ಟು, ಕಟ್ಟಳೆಗಳು, ಆ ಆರ್ಟಿಕಲ್ಲು,

Main page of Hosa diganta

Main page of Hosa diganta

ಈ clause ಇದೂ ಅಂತಾ “ವಿಭಾಗೀಯ ಪೀಠದ ತೀರ್ಪಿನ ಸಾರಾಂಶ” ಅಂತಾ ಸಾರಿದೆ. ಸಾರಾಂಶವನ್ನೇ ಒಂದೂವರೆ ಪುಟ ಪ್ರಕಟಿಸುವ ಆಸ್ಥೆ..! ಜೊತೆಗೆ ಯಡ್ಡಿಯನ್ನ ಹಾಡಿ ಹೊಗಳುವ ಒಂದು ವಿಶೇಷ ಪುರವಣಿ.  ಬೇರೆಲ್ಲಾ ಪತ್ರಿಕೆಗಳಲ್ಲಿ

Hosa diganta bundles

Hosa diganta bundles for free distribution

ಅಖಿಲೇಶ್ ಮುಖ್ಯಮಂತ್ರಿಯಾದ ಸುದ್ದಿ ಮುಖಪುಟದಲ್ಲಿ ರಾರಾಜಿಸಿದ್ದರೆ, ಹೊಸ ದಿಗಂತದಲ್ಲಿ ಅದರ ಸುಳಿವೇ ಇಲ್ಲ, ಮುಖಪುಟದಲ್ಲಿ.

Abhinandana samavesha - Hubli - Yaddyurappa

Vedike

ಮೊದಲ ಪುಟದ ವರದಿಯಲ್ಲಿ ೪೦ ಸಾವಿರ ಜನರಿಗೆ ಆಸನ ವ್ಯವಸ್ಥೆ ಅಂತ ಬರೆದಿದೆ. ಬರೆದ ವರದಿಗಾರನ ಹೆಸರು ನೋಡಿದೆ. ಪ್ರಕಟವಾಗಿಲ್ಲ. ಈ ಎಲ್ಲಾ ವರದಿಗಳಲ್ಲಿ ಬರೀ ಉತ್ಪ್ರೇಕ್ಷೆಯ ಘಮಲು ಇರುತ್ತೆ ಅಂತಾ ಗೊತ್ತಿತ್ತು. ಎಷ್ಟು ಕುರ್ಚಿಗಳ ಸಾಲುಗಳಿವೆ ಅಂತಾ ಎಣಿಸಿದೆ. ಮುಖ್ಯ ವೇದಿಕೆಯ ಎಡಭಾಗದಲ್ಲಿ ಮತ್ತು ಬಲಭಾಗದಲ್ಲಿ ಸುಮಾರು ೬೦ರಂತೆ ಕಂಬ ಸಾಲುಗಳಿವೆ. ಅಲ್ಲಿಗೆ ಒಟ್ಟು ೧೨೦ ಕಂಬ ಸಾಲುಗಳಾದವು. ಅಡ್ಡ ಸಾಲುಗಳು ಸುಮಾರು 120 ಇವೆ. ಅಲ್ಲಿಗೆ 120*120=14,400 ಕುರ್ಚಿಗಳಾದವು. ವೇದಿಕೆಯ ಮುಂದೆ ಒಂದು ಹತ್ತು ಸಾಲುಗಳ ಲೆಕ್ಕವನ್ನ ಹಿಡಿದರೆ, 1 ಸಾವಿರ ಹೆಚ್ಚಿಗೆ ಸೇರಿಸಿ. ಅಲ್ಲಿಗೆ 15,400 ಕುರ್ಚಿಗಳು. ಇನ್ನು ನೆಹರು ಕ್ರೀಡಾಂಗಣದಲ್ಲಿ ಪ್ರೇಕ್ಷಕರ ಗ್ಯಾಲರಿ ವಿಷಯ. ಅಲ್ಲೆಲ್ಲಾ ರಣ ರಣ ಬಿಸಿಲು ಸುರಿಯುತ್ತಿದೆ. ಅಲ್ಲಿರುವ ನೆರಳಿನಲ್ಲಿ ಒಂದಿಷ್ಟು ಮಂದಿ ಕೂತರೂ 2000ಕ್ಕಿಂತ ಜಾಸ್ತಿ ಆಗಲ್ಲ. ನೆನಪಿರಲಿ. ಕುರ್ಚಿ ಹಾಕಿರುವೆಡೆಯಲ್ಲಿ ಮಾತ್ರ ಪೆಂಡಾಲ್ ಇದೆ. ಹುಬ್ಬಳ್ಳಿ ಈಗಿರುವ ಬಿಸಿಲಿಗೆ ಹೊರಗೆ ನಿಂತು ಭಾಷಣ ಕೇಳಲಿಕ್ಕಂತೂ ಸಾಧ್ಯವೇ ಇಲ್ಲ. ಅದು ಹೇಗೆ ೪೦ ಸಾವಿರ ಅಂತಾ ಒಬ್ಬ ಪತ್ರಕರ್ತ ಬರೀತಾನೆ? 15ಸಾವಿರ ಕುರ್ಚಿಗಳು ಮತ್ತು 2 ಸಾವಿರ ಪ್ರೇಕ್ಷಕ ಗ್ಯಾಲರಿ ಸೇರಿದರೆ, 17-18 ಸಾವಿರ ಮಂದಿ ಕೂರಲಿಕ್ಕೆ ವ್ಯವಸ್ಥೆ ಆಯಿತು. 40 ಸಾವಿರ ಜನಕ್ಕೆ ಆಸನ ವ್ಯವಸ್ಥೆ ಅನ್ನೋದು ಬರೀ ಉತ್ಪ್ರೇಕ್ಷೆ ಮತ್ತು ಚೇಲಾಗಿರಿ. ಅಷ್ಟೂ ಜ್ಞಾನ ಬೇಡವಾ? ಭಾರತೀಯ ಸಂಸ್ಕೃತಿಯ ಬಗ್ಗೆ ಮಾತೆತ್ತಿದರೆ ನಮ್ಮ ಇತಿಹಾಸದಲ್ಲಿ ಈಗಿನ ಎಲ್ಲ ಅಡ್ವಾನ್ಸ್ ‍ಡ್ ಮ್ಯಾಥೆಮ್ಯಾಟಿಕ್ಸ್ ನಮ್ಮ ವೇದಕಾಲದ ವೇದಗಣಿತದಲ್ಲೇ ಇತ್ತು ಅಂತಾ ಕೊಚ್ಚಿಕೊಳ್ಳುವ ಇವರು, ಸಧ್ಯಕ್ಕೆ ವೇದಗಣಿತ ಬೇಡ,  ಗಣಿತ ಕಲಿಯಲಿ ಸಾಕು..!

Hosa diganta, last page, March 11, 2012

Hosa diganta, last page, March 11, 2012

ಲಕ್ಷ ಜನ ಸೇರುವ ನಿರೀಕ್ಷೆ ಅಂತಾ ಬರೆದಿದೆ. 15 ಸಾವಿರ ಚೇರುಗಳಲ್ಲಿ , ಒಂದೊಂದು ಕುರ್ಚಿಗೆ 6 ಜನರನ್ನ ಕೂರಿಸುವ ಹೊಸ ವ್ಯವಸ್ಥೆಯೇನಾದರೂ ಇದೆಯಾ? ಹೊಸ ದಿಗಂತ ಮತ್ತು ಯಡ್ಡಿ ಪಟಾಲಂ ನ ಕೇಳಬೇಕು..!

ಇವಿಷ್ಟೂ ರಾಷ್ಟ್ರ‍ ಜಾಗೃತಿಯ ಪತ್ರಿಕ, ಹೊಸ ದಿಗಂತದ “ರಾಷ್ಟ್ರ ಜಾಗೃತಿ”ಯ ಝಲಕುಗಳು..!

10 thoughts on “ಯಡ್ಡಿ ಅಭಿನಂದನಾ ಸಮಾವೇಶ : ಚೆಡ್ಡಿ ಪತ್ರಿಕೆಯ ಯಡ್ಡಿ ಚೇಲಾಗಿರಿ..?

    • ಪ್ರೊ. ನರೇಂದ್ರ ನಾಯಕ್‍ರವರಿಗೆ “ಪ್ರತಿಸ್ಪಂದನ”ಕ್ಕೆ ಸ್ವಾಗತ. ನಾನು ನಿಮ್ಮ “ಇಂಡಿಯನ್ ಸ್ಕೆಪ್ಟಿಕ್” ಬರಹಗಳ ಅಭಿಮಾನಿ.

      ನಮ್ಮ ಪತ್ರಿಕೆಗಳು ಎಷ್ಟು ಉತ್ಪ್ರೇಕ್ಷೆ ಮಾಡ್ತವೆ ಅನ್ನೋದಕ್ಕೆ ಇದೊಂದು ಉದಾಹರಣೆ. ಅದಕ್ಕೇನೇ ಲೆಕ್ಕವನ್ನ ಹರವಿಟ್ಟಿದ್ದೇನೆ. ಯಾರಾದರೂ ವಾದ ಮಾಡುವವರು ಇದ್ದರೆ ಮಾಡಲಿ ಅಂತಾ.

  1. ಗೆಳೆಯರೇ ಇದೇ ನೆಹರೂ ಮೈದಾನದಲ್ಲಿ ನಾನು ಹಲವಾರು ಬಾರಿ ಉದಯ ಟಿವಿ. ಯ ಆದರ್ಶ ದಂಪತಿ ಕಾರ್ಯಕ್ರಮ ನಡೆಸಿದ್ದೇನೆ ಇದರ ಕೆಪಾಸಿಟಿ ಕೇವಲ 10 ಸಾವಿರ ಮಾತ್ರ. ಸುತ್ತ ಮುತ್ತಲಿನ ಮೆಟ್ಟಿಲು ಸೇರಿಸಿಕೊಂಡರೆ, 15 ಸಾವಿರವಾಗುತ್ತೆ.
    ಜಗದೀಶ್ ಕೊಪ್ಪ, ಧಾರವಾಡ

ತಮ್ಮ ಪ್ರತಿಕ್ರಿಯೆಯ ಅಭಿವ್ಯಕ್ತಿಗೆ ಧನ್ಯವಾದಗಳು. ಬ್ಲಾಗಿಗೆ ಗ್ರಾಹಕರಾಗಿ ಹೊಸ ಬರಹ ಬಂದಾಗ ಈಮೇಲ್‍ನಲ್ಲಿ ತಿಳಿಯಿರಿ.

Please log in using one of these methods to post your comment:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s