ನಗರ ದೊಡ್ಡದಾಯಿತು. ಮಾತು ಕಡಿಮೆಯಾದವು. ಹೃದಯ ಚಿಕ್ಕದಾಯಿತು. ಬರೀ ಧಾವಂತ. ಸ್ವಾರ್ಥ ಕ್ರೌರ್ಯ.

Image courtesy of [image creator name] / FreeDigitalPhotos.net

ಹೋದ ಡಿಸೆಂಬರ್ ನಲ್ಲಿ ಹೂವಿನ ಹಡಗಲಿಗೆ ಪರೀಕ್ಷಕನಾಗಿ ಹೋಗಿ ಬರುತ್ತಿದ್ದೆ. ಪರೀಕ್ಷೆ ಮುಗಿಸಿದವನು ಹೂವಿನ ಹಡಗಲಿಯಿಂದ ಡೈರೆಕ್ಟ್ ಬಸ್ ಸಿಗದೇ ಇದ್ದುದರಿಂದ ಹೂವಿನ ಹಡಗಲಿಯಿಂದ ಮುಂಡರಗಿ ಬಸ್ಸೇರಿ ಮುಂಡರಗಿ ತಲುಪಿದಾಗ ಸಂಜೆ 7.30. ಅಲ್ಲಿಂದ ಗದಗ್ ಬಸ್ ಕಾಯುತ್ತ ನಿಂತೆ. ಒಂದು ಖಾಸಗಿ ಬಸ್ಸು ಬಂತು. ಅಲ್ಲಿಂದ ಒಂದು ಒಂದೂವರೆ ತಾಸಿನ ಪ್ರಯಾಣ ಗದಗಿಗೆ. ಬಸ್ಸಿಗಾಗಿ ಹತ್ತಾರು ಜನ ಕಾಯುತ್ತಿದ್ದರು. ನಾನು ಸೀಟು ಸಿಗುತ್ತೋ ಇಲ್ಲವೋ ಅಂತಾ ದೌಡಾಯಿಸಿ ಮೊಟ್ಟಮೊದಲಿಗೆ ಹತ್ತಿದೆ. ಆದರೆ, ನನಗೆ ಆಶ್ಚರ್ಯ ತಂದಿದ್ದು ಅಲ್ಲಿನ ಜನರ ಸೀಟು ಹಿಡಿಯುವಲ್ಲಿನ ಅನಾಸಕ್ತಿ. ನಾವು ಹತ್ತದೇ ಬಸ್ಸು ಹೋಗಲ್ಲ ಅನ್ನುವ ಭಾವವೋ ಇಲ್ಲಾ ಅಷ್ಟೆಲ್ಲಾ ಹೊಡೆದಾಡಿ ದೌಡಾಯಿಸಿ ಸೀಟು ಹಿಡಿದು ಮನೆ ಸೇರಿ ಮಾಡುವುದಾದರೂ ಏನು ಅನ್ನುವ ಭಾವವೋ ಗೊತ್ತಿಲ್ಲ. ಜನ ಪ್ರಶಾಂತರಾಗಿದ್ದರು. ನನ್ನ ನಂತರ ಬಂದವರು ನಿಂತೇ ಪ್ರಯಾಣಿಸಿದರು. ಪುಟ್ಟ ಮಗು ಹೊತ್ತ ಒಬ್ಬ ಹೆಣ್ಣು ಮಗಳಿಗೆ ನನ್ನ ಪಕ್ಕದ ಯುವಕ ಸೀಟು ಬಿಟ್ಟು ಕೊಟ್ಟ. ಒಂದಿಷ್ಟು ಶ್ರಮಜೀವಿಗಳು ಸ್ವಲ್ಪ ದೂರದಲ್ಲಿ ಇರುವ “ಬರದೂರು” ಎಂಬಲ್ಲಿ ಇಳಿದರು. ಬರದೂರು ಬರುವವರೆಗೂ ಅಷ್ಟು ಜನ ತಮಾಷೆ, ಕಾಲೆಳೆಯುವಿಕೆಯಲ್ಲಿ ತೊಡಗಿದ್ದರು. ಕುಡಿದು ಬಂದ ಮುದುಕನನ್ನ ಪ್ರೀತಿಯಿಂದ ಗೋಳು ಹೊಯ್ದುಕೊಳ್ಳುತ್ತಿದ್ದರು. ಅಲ್ಲಿನ ಜನರಿಗೆ ಸೀಟು ಹಿಡಿದು ಕೂರುವುದಕ್ಕೆ ಪ್ರಾಧಾನ್ಯವನ್ನೇ ಕೊಟ್ಟಿರಲಿಲ್ಲ. ಅದೇ ಬೆಂಗಳೂರಿನಲ್ಲಿ ಬಿ.ಎಮ್.ಟಿ.ಸಿ ಬಸ್ಸು ಬಂದರೆ, ಕಾದ ಕಾವಲಿಯಮೇಲೆ ನೀರು ಹೊಯ್ದಂತೆ. ಎದ್ದೆನೋ ಬಿದ್ದೆನೋ ಎಂಬ ಧಾವಂತ. ಬೆಳಗಿನಿಂದ ಸಂಜೆಯವರೆಗೂ ತಮ್ಮ ಕೆಲಸದ, ಟ್ರಾಫಿಕ್ಕಿನಿಂದ ತಲೆ ಬಿಸಿ ಮಾಡಿಕೊಂಡವರು ತಮ್ಮ ಕ್ರೌರ್ಯವನ್ನ ಸೀಟು ಹಿಡಿಯುವುದರಲ್ಲಿ ತೋರಿಸುತ್ತಾರೆ. ಸೀಟು ಹಿಡಿದು ಕುಂತಾದಮೇಲೆ ಒಂಥರಾ ಅವ್ಯಕ್ತ ಆನಂದ. ಯಾರ ಮುಖದಲ್ಲೂ ನಗುವಿಲ್ಲ. ಲೇವಡಿಗಳಿಲ್ಲ. ಮಾತುಗಳಿಲ್ಲ. ಅಸಲಿಗೆ ಪರಿಚಯವೇ ಇಲ್ಲ..! ಪರಿಚಯ ಮಾಡಿಕೊಳ್ಳುವ ಜರೂರತ್ತೂ ಇಲ್ಲ..! ಜನರಿಗೆ ಬೆಳಗಿನ, ರಾತ್ರಿಯ ಅನಿವಾರ್ಯ ಕರ್ಮಗಳಂತೆ ಇದೂ ಒಂದು ಲಿಸ್ಟಿನಲ್ಲಿ..!

1 thought on “ನಗರ ದೊಡ್ಡದಾಯಿತು. ಮಾತು ಕಡಿಮೆಯಾದವು. ಹೃದಯ ಚಿಕ್ಕದಾಯಿತು. ಬರೀ ಧಾವಂತ. ಸ್ವಾರ್ಥ ಕ್ರೌರ್ಯ.

  1. maanyare, ittittallagi idu nija. adarallu namma bengalurigaru yaarannu maatanaadisidare Enu sahaya kEluttaaro, athava Enu sahaya maadabEkaaguttado. emba tumula avarigiruttade. bahutEka uttara karnatakada jana tumba sambaavitaru. bengalurininda sarakari noukararu vargaavaneyaagi hOdare. vishesa Asakti vahisi. Enu sowlabya Beku endu kEli sahaya maaduttare. manege hodare maneya sadasyarante kaanuttaare. idu avara doddaguna. kelavaru idannu durupayOgapadisikolluttare. Bengalurigarige A buddi baruvudilla. pakkada maneyalli hena biddaru nOduvudilla. allave?

ತಮ್ಮ ಪ್ರತಿಕ್ರಿಯೆಯ ಅಭಿವ್ಯಕ್ತಿಗೆ ಧನ್ಯವಾದಗಳು. ಬ್ಲಾಗಿಗೆ ಗ್ರಾಹಕರಾಗಿ ಹೊಸ ಬರಹ ಬಂದಾಗ ಈಮೇಲ್‍ನಲ್ಲಿ ತಿಳಿಯಿರಿ.

Please log in using one of these methods to post your comment:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s