ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಈ ತಾಂತ್ರಿಕ ಗೋಷ್ಠಿಗಳನ್ನ ಸೇರಿಸಿ.

ಗೆ : ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ ಪುಂಡಲೀಕ ಹಾಲಂಬಿಯವರು, ಕನ್ನಡ ಮತ್ತು ಸಂಸೃತಿ ಇಲಾಖೆ ಮತ್ತು ಕರ್ನಾಟಕ ರಾಜ್ಯ ಸರ್ಕಾರ.

ಫೆಬ್ರವರಿಯಲ್ಲಿ ನಡೆಯಲಿರುವ ಬಿಜಾಪುರ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಈ ಕೆಳಕಂಡ ಕನ್ನಡ ತಾಂತ್ರಿಕ ಗೋಷ್ಠಿಗಳನ್ನ ಸೇರಿಸಿ. ಕನ್ನಡದ ಅಭಿವೃದ್ಧಿಯ ದೃಷ್ಟಿಯಿಂದ ಇದು ಅತ್ಯವಶ್ಯಕ.
Image
ಸಧ್ಯದ ಮಾಹಿತಿಯ ಪ್ರಕಾರ ಈ ಬಾರಿಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಒಂದೇ ಒಂದು ತಾಂತ್ರಿಕ ಗೋಷ್ಟಿಯನ್ನ ಹಾಕಿಲ್ಲ. ಕನ್ನಡವೆಂದರೆ ಬರೀ ಹಳೆಗನ್ನಡ, ನಡುಗನ್ನಡ, ಆಧುನಿಕ ಕನ್ನಡ, ನವೋದಯ, ನವ್ಯ, ನವ್ಯೋತ್ತಗಳಷ್ಟೇನಾ? ನಿಮ್ಮ ಮೊಬೈಲುಗಳಲ್ಲಿ ಕನ್ನಡ ಸಾಹಿತ್ಯವನ್ನ ಓದಲಿಕ್ಕೆ, ಬರೆಯಲಿಕ್ಕೆ ಕನ್ನಡದ ಸಾಫ್ಟ್‌ವೇರುಗಳು, ಆಂಡ್ರಾಯ್ಡ್ App ಗಳು, ಕಂಪ್ಯೂಟರಿನಲ್ಲಿ, ಲ್ಯಾಪ್‌ಟಾಪಿನಲ್ಲಿ , ಟ್ಯಾಬ್ಲೆಟ್‌ನಲ್ಲಿ ಕನ್ನಡ ಬೇಡವಾ? ಕಂಪ್ಯೂಟರ್‌ನಲ್ಲಿ ಕನ್ನಡ ಬರೆಯುವ ಬಗ್ಗೆ ಜಾಗೃತಿ ಬೇಡವಾ? ಸ್ವತಃ ಕ.ಸಾ.ಪ ವೆಬ್ ಸೈಟೇ ಅಸ್ತಿತ್ವದಲ್ಲಿಲ್ಲ. http://www.kasapa.kar.nic.in/ ಯಾವುದೇ ಮಾಹಿತಿ ಇಲ್ಲ. ಕಂಪ್ಯೂಟರ್ ಯುಗದಲ್ಲಿರುವ ನಾವು ನಮ್ಮ ಭಾಷೆಗೆ ತಂತ್ರಜ್ಞಾನದ ನೆರವು ಪಡೆಯಬೇಕು.

ಕಸಾಪ ಅಧ್ಯಕ್ಷರಿಗೆ ಕೇಳಿದರೆ, ಈ ಬಾರಿ ಎಲ್ಲವೂ ಸಭೆಯಲ್ಲಿ ನಿರ್ಣಯಿಸಲಾಗಿದೆ ಸೇರಿಸಲಿಕ್ಕೆ ಸಾಧ್ಯವಿಲ್ಲ ಎಂದಿದ್ದಾರೆ. ಇನ್ನೂ ಬಹಳ ದಿನಗಳ ಸಮಯವಿದೆ. ಕನ್ನಡದ, ಕನ್ನಡಿಗರ ಶ್ರೇಯೋಭಿವೃದ್ಧಿಗಾಗಿ ಆಸಕ್ತಿವಹಿಸಬೇಕಾದ ಕ.ಸಾ.ಪ.ಗೇಕೆ ತಂತ್ರಾಂಶ, ತಂತ್ರಜ್ಞಾನದ ಬಗ್ಗೆ ಇಷ್ಟು ಅಸಡ್ಡೇ?

ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ ಪುಂಡಲೀಕ ಹಾಲಂಬಿಯವರಿಗೆ ಒಂದು ಸವಿನಯ ಮನವಿ. ಕನ್ನಡದ ಅಂತರ್ಜಾಲ ಪ್ರಪಂಚದಲ್ಲಿ ಸಕ್ರಿಯವಾಗಿರುವ ಸಾವಿರಾರು ಬ್ಲಾಗಿಗರು, ಕನ್ನಡ ವೆಬ್ ಡೆವಲಪರ್‌ಗಳು, ಓಪನ್ ಸೋರ್ಸ್ ಆಸಕ್ತರು, ಸಾಫ್ಟ್‌ವೇರ್ ಎಂಜಿನಿಯರುಗಳು, ಎಂಜಿನಿಯರಿಂಗ್ ಕಾಲೇಜಿನ ಪ್ರಾಧ್ಯಾಪಕರುಗಳು, ವಿದ್ಯಾರ್ಥಿಗಳನ್ನ ಸೇರಿಸುವ ಪ್ರಯತ್ನವಾಗಿ ಕೆಳಕಂಡ ಗೋಷ್ಟಿಗಳನ್ನ ಸೇರಿಸಿ. ಕನ್ನಡದ ತಾಂತ್ರಿಕ ಅಭಿವೃದ್ಧಿಯ ದೃಷ್ಟಿಯಿಂದ ಇದು ಅತ್ಯವಶ್ಯಕ.

೧. ಬ್ಲಾಗಿಗರ ಸಮ್ಮೇಳನ
೨. ಕನ್ನಡ ಡೆವಲಪರ್‌ಗಳ ಗೋಷ್ಠಿ
೩. ಕನ್ನಡ ಸಾಹಿತ್ಯ ಗಣಕೀಕರಣ
೪. ಅಂತರ್ಜಾಲ ಕನ್ನಡ ವಿಶ್ವಕೋಶಗಳು.
೫. ಇ-ಆಡಳಿತದಲ್ಲಿ ಕನ್ನಡ

ನಮ್ಮ ಒಕ್ಕೊರಲ ಮನವಿಯನ್ನ ನೀವು ಪರಿಗಣಿಸುತ್ತೀರಿ ಎಂಬ ವಿಶ್ವಾಸದಲ್ಲಿ ನಾವಿದ್ದೇವೆ.
ಬಿಜಾಪುರ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಈ ಕನ್ನಡ ತಾಂತ್ರಿಕ ಗೋಷ್ಠಿಗಳನ್ನ ಸೇರಿಸಲು ನೀವೂ ಮನವಿ ಮಾಡಿ.   ಆನ್ ಲೈನ್ ಪಿಟಿಷನ್ ಗೆ ಸಹಿ ಹಾಕಿ.

http://goo.gl/lLj2M

ತಮ್ಮ ಪ್ರತಿಕ್ರಿಯೆಯ ಅಭಿವ್ಯಕ್ತಿಗೆ ಧನ್ಯವಾದಗಳು. ಬ್ಲಾಗಿಗೆ ಗ್ರಾಹಕರಾಗಿ ಹೊಸ ಬರಹ ಬಂದಾಗ ಈಮೇಲ್‍ನಲ್ಲಿ ತಿಳಿಯಿರಿ.

Please log in using one of these methods to post your comment:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s