ಈ ಸಾಫ್ಟ್‌ವೇರ್ ಎಂಜಿನಿಯರ್‌ಗಳು ಎಲ್ಲದಕ್ಕೂ ಆತ್ಮಹತ್ಯೆ ಮಾಡ್ಕತಾವಲ್ಲ?

 
ಈ ಸಾಫ್ಟ್‌ವೇರ್ ಎಂಜಿನಿಯರ್‌ಗಳು ಎಲ್ಲದಕ್ಕೂ ಆತ್ಮಹತ್ಯೆ ಮಾಡ್ಕತಾವಲ್ಲ. ಕೆಲ್ಸ ಸಿಗ್ಲಿಲ್ಲ ಅಂತಾ, ಕೆಲ್ಸದಿಂದ ತೆಗೆದರು ಅಂತಾ, ಹೇಣ್ತಿ ಬೈತಾಳೆ ಅಂತಾ, ಗಂಡ ಬೈತಾನೆ ಅಂತಾ, ಸಂಸಾರ ನಡ್ಸಕ್ ಆಗ್ತಿಲ್ಲ ಅಂತಾ. ಸಧ್ಯಕ್ಕಿರೋ ಅಪ್‌ಡೇಟ್ – ಮದ್ವೆ ಆಗಿಲ್ಲ ಅಂತಾ..!
 Bng Techie Narasimhan Chakravarthy Suicide In Mysore

ಚಿತ್ರ ಕೃಪೆ: ದಟ್ಸ್‌ಕನ್ನಡ.ಕಾಂ

ಒಂದು ರೀತಿಯಲ್ಲಿ ದುರಂತ. ಇನ್ನೊಂದು ರೀತಿಯಲ್ಲಿ ತಮಾಷೆ. ಇನ್ನೂ ಒಂದು ರೀತಿಯಲ್ಲಿ ನೋಡಿದರೆ ಪ್ರತಿಷ್ಠೆಯ ಪರಮಾವಧಿಯ ಪ್ರತೀಕ. ಒಂದು ಕಿರಾಣಿ ಅಂಗಡಿ ಇದೆ ಅಂದುಕೊಳ್ಳಿ. ಅಲ್ಲಿ ಒಬ್ಬ ಹುಡುಗ ಕೆಲಸಕ್ಕೆ ಇರ್ತಾನೆ. ಸರಿಯಾಗಿ ಕೆಲಸ ಮಾಡಲ್ಲ ಅಂತಲೋ, ಸೋಮಾರಿ ಅಂತಲೋ, ಜಾಸ್ತಿ ಮಾತಾಡ್ತಾನೆ ಅಂತಲೋ, ಸಿಟ್ಟು ಜಾಸ್ತಿ ಇದೆ ಅಂತಲೋ ಅವನನ್ನ ಅಂಗಡಿಯಿಂದ ಬಿಡಿಸಿದರೆ ಏನ್ ಮಾಡ್ತಾನೆ? ಹೊಸ ಕೆಲಸ ಹುಡುಕ್ತಾನೆ. ಕಿರಾಣಿ ಅಂಗಡಿಯಲ್ಲೇ ಕೆಲಸ ಸಿಗುತ್ತದೆ ಅಂತಾ ವಿಶ್ವಾಸವನ್ನೇನೂ ಆತ ಹೊಂದುವುದಿಲ್ಲ. ಬದುಕಲಿಕ್ಕೆ ಒಂದು ಕೆಲಸ ಬೇಕು ಅಷ್ಟೇ. ಅದೇ ಸಾಫ್ಟ್‌ವೇರ್ ಎಂಜಿನಿಯರ್ ಒಬ್ಬನನ್ನ ಕೆಲಸದಿಂದ ತೆಗೆದುಹಾಕಿ ನೋಡಿ. ಅದ್ಯಾಕೆ ಅಷ್ಟು ಡಿಪ್ರೆಷನ್ ಗೆ ಒಳಗಾಗುತ್ತಾರೆ? ಇದು ಕೀಳರಿಮೆಯ ಪ್ರತೀಕವಲ್ಲವೇ? ಸಾಫ್ಟ್‌ವೇರ್ ಅನ್ನೋದು ಪ್ರತಿಷ್ಟೆಯನ್ನ ಸೃಷ್ಟಿಸಿದೆ ಅಲ್ಲವೇ? ಆ ಪ್ರತಿಷ್ಟೆ ಎಂಬ ವರ್ತುಲದಿಂದ ಹೊರ ಬರಲಿಕ್ಕೆ ಆಗದಷ್ಟು ಅದರಲ್ಲಿ ಹೂತು ಹೋಗಿದ್ದಾರೆ. ಜಾವಾ, ಸಿ++, ಸ್ಯಾಪ್, ಡಾಟ್ ನೆಟ್ ಅಥವಾ ಇನ್ಯಾವುದೋ ಪ್ಲಾಟ್‌ಫಾರಂ‌ನಲ್ಲಿ ಕೆಲಸ ಮಾಡುತ್ತಿದ್ದರೆ ಅದೇ ಕೆಲಸ ಹುಡುಕುತ್ತಾರೆ. ಓಪನಿಂಗ್ಸ್ ಇಲ್ಲಾ ಅಂದರೆ ನಿರಾಶರಾಗುತ್ತಾರೆ. ಅಮೇರಿಕಾ ಬೈಯುತ್ತಾರೆ. ಗ್ಲೋಬಲ್ ಎಕಾನಮಿ ಬೈಯುತ್ತಾರೆ. ಅಂಗಡಿಯಲ್ಲಿರುವ ಹುಡುಗ ಹೊಸ ಕೆಲಸಕ್ಕೆ ಸೇರಿದ. ಸಾಫ್ಟ್‌ವೇರ್ ಎಂಜಿನಿಯರು ನೇಣಿನ ಹಗ್ಗ ಸೇರಿದ..!

ಫೇಸ್ ಬುಕ್ಕಿನಲ್ಲಿ ಬರೆದ ಈ ಸ್ಟೇಟಸ್ ಬರಹಕ್ಕೆ ಬಂದ ಪ್ರತಿಕ್ರಿಯೆಗಳನ್ನ ಇಲ್ಲಿ ನೀಡಿದ್ದೇನೆ. ನಿಮಗೇನು ಅನ್ನಿಸುತ್ತದೆ?

 • Prabhu Raj Harakangi dudidiro duddige indu bele barode maduve anno javabdari bandamele.. hogli bidapaaa..
 • Arunkumar Davangere “Techie Savu” Idu ontara media dalli fashionable statement aagide……!
  • Rakesh Shetty “ಪ್ರತಿಷ್ಟೆ” ಅನ್ನುವುದಕ್ಕಿಂತ “ಮನಸ್ಥಿತಿ” ಅನ್ನಬಹುದೇನೋ? ನಮ್ಮಲ್ಲೂ ಉಳಿದ ಕೆಲಸಗಳಂತೆಯೇ ತರೇವಾರಿ ಜನಗಳಿದ್ದಾರೆ.ಆದರೆ ಮೀಡಿಯಾಗಳ ಅತಿರಂಜಿತ ವರದಿಗಳಿಂದ ಸಾಮಾನ್ಯ ಜನತೆಯ ದೃಷ್ಟಿಯಲ್ಲಿ ನಮ್ಮನ್ನು ಅನ್ಯಗ್ರಹದ ಜೀವಿಗಳ ರೀತಿ ಮಾಡಹೊರಟಿದ್ದಾರೆ ಅನ್ನಿಸುತ್ತೆ.
  • Prabhu Raj Harakangi Doller to Rupee conversion.. is the main reason.. vasudhendra book odri ganesh.. innoo bhala maja situation bardaraa..

2 thoughts on “ಈ ಸಾಫ್ಟ್‌ವೇರ್ ಎಂಜಿನಿಯರ್‌ಗಳು ಎಲ್ಲದಕ್ಕೂ ಆತ್ಮಹತ್ಯೆ ಮಾಡ್ಕತಾವಲ್ಲ?

 1. ಮಾನ್ಯರೇ, ಈ ಮೊದಲು ನೂರಕ್ಕೆ ಒಂದು ಅಥವಾ ಎರಡು ಜನ ಕಾಣದೆ ಆತ್ಮ ಹತ್ಯೆ ಮಾಡಿಕೊಳ್ಳುತ್ತಿದ್ದರು. ಈಗ ಯಾರೇ ನೋಡಿದರೂ ಕ್ಷುಲ್ಲಕ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಈ ಮೊದಲು ಯಾರೇ ಆಗಲಿ ತಮಗೆ ಮಾನಸಿಕವಾಗಿ ನೋವಾದಾಗ ಅಥವಾ ತೊಂದರೆಗೆ ಸಿಲಿಕಿದಾಗ ಅವರ ಅತ್ಮೀಯರಲ್ಲೋ ಅಥವಾ ಹಿರಿಯರಲ್ಲೋ ಕೊನೆಗೆ ಅತ್ಮೀಮೀಯ ಸ್ನೇಹಿತರಲ್ಲೋ ಹೇಳಿಕೊಲ್ಲುತ್ತಿದ್ದಾರು. ಅವರು ಆ ವ್ಯಕ್ತಿಗೆ ಬೇಕಾದ ಸಲಹೆ, ಸಹಕಾರ, ಮತ್ತು ಕೊನೆಗೆ ಸಹಾಯ ಮಾಡುತ್ತಿದ್ದರು.ಅವರೂ ಬದುಕುಳಿಯುತ್ತಿದ್ದರು. ಈಗ ಈ ಪ್ರಪಂಚದಲ್ಲಿ ಎಲ್ಲರೂ ಏಕಾಂತ. ಅದರಲ್ಲೂ ಯುವಕರು ಮೊದಲು ತಮ್ಮ ಹೆತ್ತ ತಂದೆ,ತಾಯಿ ಬಂಧುಗಳನ್ನು ತೊರೆಯುತ್ತಾರೆ.ಅವರು ವಯಸ್ಸಿಗೆ ಬಂದರೂ ಹಣ ಸಂಪಾದನೆ ಮಾಡುವುದನ್ನು ಬಿಟ್ಟರೆ, ಬೇರೇನು ಕಲಿತಿರುವುದಿಲ್ಲ. ಕೊನೆಗೆ ಸಿಕ್ಕಿದವಳನ್ನು/ನನ್ನು ಪ್ರೇಮ,ಪ್ರೀತಿ ಎಂಬ ಹೆಸರಿನಲ್ಲಿ ಮಧುವೆಯಾಗಿ, ಪರಸ್ಪರ ಅರಿವು ಇಲ್ಲದೆ, ಒಬ್ಬರ ಕಷ್ಟ ಒಬ್ಬರು ನೋಡದೆ,ಬದುಕುತ್ತಾರೆ ಅವಳ ಪಾಡು ಅವಳದು ಇವಳ ಪಾಡು ಇವಳದು. ಆತ್ಮೀಯವಾಗಿ ಒಬ್ಬರ ಕಷ್ಟ ಒಬ್ಬರು ಹೇಳಿಕೊಳ್ಳುವುದಿಲ್ಲ ಕೇಳುವುದು ಇಲ್ಲ. ಇವಳು ಮನೆಯಲ್ಲಿದ್ದರೆ ಅವನು ಕೆಲಸಕ್ಕೆ ಹೋಗಿರುತ್ತಾನೆ.ಅವಳು ಕೆಲಸಕ್ಕೆ ಹೋಗಿದ್ದರೆ ಇವನು ಕೆಲಸಕ್ಕೆ ಹೋಗಿರುತ್ತಾನೆ. ಮನುಷ್ಯತ್ವ ಕಳೆದುಕೊಂಡಿರುತ್ತಾರೆ. ಸಮಸ್ಯೆ ಬಂದಾಗ ಅವರಿಗೆ ಸಿಗುವ ದಾರಿ ಆತ್ಮಹತ್ಯೆ ಒಂದೇ. ಅದೇ ಒಬ್ಬ ಅವಿದ್ಯಾವಂತ ಅಥವಾ ಅಲ್ಪಸ್ವಲ್ಪ ಓದಿದವನು ಕೂಲಿ ಕಾರ್ಮಿಕನಾದರೂ ಬಡತನವಿದ್ದರೂ, ಅವರಿವರ ಸಲಹೆ ಸಹಕಾರದಿಂದ ಬದುಕುತ್ತಾನೆ, ಬಾಳುತ್ತಾನೆ ಸುಖಜೀವನ ನಡೆಸುತ್ತಾನೆ. ಅದೇ ಟೆಕ್ಕಿಗಳು ಹಣವೇ ಪ್ರಧಾನವೆಂದು ಹಣ ಸಂಪಾದನೆ ಒಂದೇ ಗುರಿ. ಇಲ್ಲವಾದರೆ ಬದುಕೇ ಇಲ್ಲ ಎಂದು ತಿಳಿದುಕೊಂಡಿರುತ್ತಾರೆ ಅಲ್ಲವೇ?

  • ನಂಜುಂಡರಾಜು ರವರೇ, ನಿಮ್ಮ ಮಾತು ಸತ್ಯ.
   ನಮ್ಮ ಸಮಾಜ ಕಾಸುಕೇಂದ್ರಿತ ಯಾವಾಗ ಆಗಲಿಕ್ಕೆ ಶುರುವಾಯಿತೋ ಆಗಿನಿಂದ ಈ ಸಮಸ್ಯೆಗಳು ಶುರುವಾದವು. ನಾನು ಸಾಫ್ಟ್‌ವೇರ್ ಎಂಜಿನಿಯರ್ ಪದವನ್ನ ದ್ವೇಷಿಸುತ್ತೇನೆ. ನಾನೂ ಎಂಜಿನಿಯರ್, ಅಲ್ಗಾರಿದಮ್ ಅಭಿವೃದ್ಧಿಪಡಿಸುತ್ತೇನೆ, ಪ್ರೋಗ್ರಾಮ್ ಬರೆಯುತ್ತೇನೆ. ಆದರೆ, ನಾವು ಪ್ರೊಫೆಸರುಗಳೆನಿಸಿಕೊಳ್ಳುತ್ತೇವೆ. ಅವರು ಮಾಡುವ ಕೆಲಸವೇನು? ಡೆವಲಪ್‌ಮೆಂಟ್/ಟೆಸ್ಟಿಂಗ್ ಬಿಟ್ಟು ಮತ್ತೇನಾದರೂ ಮಾಡುತ್ತಾರೆಯೇ? ಎಂಜಿನಿಯರ್‌ಗಳಿಗಿಲ್ಲದ ವಿಶೇಷ ಅರ್ಹತೆ ಈ ಸಾಫ್ಟ್‌ವೇರ್ ಎಂಜಿನಿಯರುಗಳಿರುತ್ತದೆ? ನನಗಿನ್ನೂ ಬಗೆಹರಿಯಲಾಗದ ಪ್ರಶ್ನೆ. ಮಾಧ್ಯಮಗಳಂತೂ ಅವರನ್ನ ಹೆಗಲಮೇಲೆ, ತಲೆಯಮೇಲೆ ಹೊತ್ತುಕೊಂಡು ಕುಣಿದಾಡಿದವು, ಕುಣಿದಾಡುತ್ತಿವೆ. ಏನ್ ಮಾಡಿದರೂ ಟೆಕ್ಕಿಗಳು ಹಿಂಗೆ, ಟೆಕ್ಕಿಗಳು ಹಿಂಗೆ. ಸುದ್ದಿಯೋ ಸುದ್ದಿ. ಸಾಮಾನ್ಯ ಮನುಷ್ಯರಿಗಿಲ್ಲದ ಹೊಸ ವಿಶೇಷ ಶಕ್ತಿಗಳೇನಾದರೂ ಇವರಲ್ಲಿದೆಯೇ? ಅಥವಾ ಮಾಧ್ಯಮಗಳು ಸೃಷ್ಟಿಸಿವೆಯೇ?

ತಮ್ಮ ಪ್ರತಿಕ್ರಿಯೆಯ ಅಭಿವ್ಯಕ್ತಿಗೆ ಧನ್ಯವಾದಗಳು. ಬ್ಲಾಗಿಗೆ ಗ್ರಾಹಕರಾಗಿ ಹೊಸ ಬರಹ ಬಂದಾಗ ಈಮೇಲ್‍ನಲ್ಲಿ ತಿಳಿಯಿರಿ.

Please log in using one of these methods to post your comment:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s