ಮುಂಬೈ ಸರಣಿ ಸ್ಫೋಟ : ಹಿನ್ನೋಟವಲ್ಲ. ಒಂದು “ಮುನ್ನೋಟ”

೧೩ ಜುಲೈ ೨೦೧೧

ಮುಂಬೈ ಮೇಲೆ ಉಗ್ರರ ಸರಣಿ ಬಾಂಬ್ ಧಾಳಿ

ಸತ್ತವರು (ಇಲ್ಲಿಯವರೆಗು) : ೨೧ ಜನ

ಅರ್ಧ ಸತ್ತವರು/ ಮುಕ್ಕಾಲು ಭಾಗ ಸತ್ತವರು (ಇಲ್ಲಿಯವರೆಗೂ) : ೧೪೦ ಜನ

Mumbai serial bomb blasts 2011

ಸರ್ಕಾರಗಳ ನಿರ್ವೀರ್ಯತೆಗೆ ಕೊನೆ ಎಂದು?

ಪಟ್ಟಿ ಮುಂದುವರಿಯುತ್ತದೆ. ನಿರೀಕ್ಷಿಸಿ.

Mumbai serial blasts July 2011

ಬಾಂಬ್ ನ ಭಯಾನಕತೆ. ಚಿತ್ರ ಕೃಪೆ : ಐಬಿಎನ್ ಲೈವ್.ಕಾಮ್

 ಬಾಂಬ್ ಸ್ಫೋಟವಾದಾಗಲೇ ತಕ್ಷಣವೇ ಸತ್ತುಬಿಡೋದೇ ಒಳ್ಳೆಯದು. ಆಮೇಲೆ ಆಸ್ಪತ್ರೆಲಿ ತಿಂಗಳು ಕಾಲ ಇದ್ದು ಸತ್ರೆ ಪತ್ರಿಕೇಲೂ ಸುದ್ದಿಯಾಗಲ್ಲ, ಟೀವಿಲೂ ಸುದ್ದಿಯಾಗಲ್ಲ. ಜನರ ಅನುಕಂಪವೂ ಸಿಗಲ್ಲ. ಎಂಥಾ ಬೇನಾಮಿ, ಬೇವರ್ಸಿ ಸಾವು..! ಸಾಯೋರ್ ಇದ್ರೆ ಬೇಗ ಅಟ್ಲೀಸ್ಟ್ ಬೇಗನಾದ್ರೂ ಸತ್ ಬಿಡ್ಲಿ. ಟೀವಿನಲ್ಲಾದ್ರೂ ಬರುತ್ತೆ. ಇಲ್ಲಾಂದ್ರೆ, ಅವರ ಸಾವಿಗೂ ಬೆಲೆಯಿರಲ್ಲ..! ಜನರ ಜೀವಕ್ಕೆ ಬೆಲೆ ಎಲ್ಲಿದೆ ಹೇಳಿ?

 ಅತಿ ದೊಡ್ಡ ಪ್ರಜಾಪ್ರಭುತ್ವ ನಮ್ಮದೇ. ಬಹುಶಃ ಅತಿ ಕೆಟ್ಟ ಪ್ರಜಾಪ್ರಭುತ್ವ ಮತ್ತು ಅತಿ ಭ್ರಷ್ಟ ರಾಜಕಾರಣಿಗಳು ಇರೋದೂ ನಮ್ ದೇಶದಲ್ಲೇ.

ಈ ಎಲ್ಲದಕ್ಕೂ ಕಾರಣ ಮುಸ್ಲೀಮರನ್ನ ಓಲೈಸುವುದಕ್ಕಾಗಿ ನಮ್ಮ ರಾಜಕಾರಣಿಗಳು ರೂಪಿಸುವ ನೀತಿಗಳು. ಎಲ್ಲ ಮುಸ್ಲೀಮರು ಕೆಟ್ಟವರಲ್ಲ. ಆದರೆ, ಇಂಥವರಿಂದ ಒಳ್ಳೆಯವರ ಸಾಧನೆಗಳೂ ಧರ್ಮದ ಕಾರಣಗಳಿಗಾಗಿ ಮಸುಕಾಗಬಾರದು.

ರಾಜಕೀಯ ಪರಿಣಾಮಗಳು ಏನಾಗಬಹುದು? ಮೋದಿಯ ಹಾದಿ ಸುಗಮವಾಗಬಹುದು

Mumbai terror attack July 2011

ಜೀವಕ್ಕೆ, ಕಣ್ಣೀರಿಗೆ ಬೆಲೆ ಇಲ್ಲವಾ? ಚಿತ್ರಕೃಪೆ : ಐಬಿಎನ್ ಲೈವ್.ಕಾಮ್

. ರಾಹುಲ ಗಾಂಧಿ ಎಂದೂ ಉಗ್ರವಾದದ ವಿರುದ್ಧ ಉಗ್ರವಾಗಿ ಮಾತಾಡಿಲ್ಲ. ಯುವ ಜನರಿಗೆ ರಾಹುಲಗಾಂಧಿಯಂಥಾ ಎಳಸುಗಳಿಗಿಂತ ಗಟ್ಟಿಯಾಗಿ ನಿಲ್ಲುವ ಮೋದಿ ಇಷ್ಟವಾಗಬಹುದು. ಉಗ್ರವಾದವನ್ನ ಮಟ್ಟ ಹಾಕಲಿಕ್ಕೆ ಮೋದಿಯೇ ಸರ್ವಶಕ್ತ ಎಂಬ ಮನೋಭಾವ ಮೂಡಬಹುದು. ಕಾಂಗ್ರೇಸ್ ವಿರೋಧಿ ಅಲೆ ಜೋರಾಗಬಹುದು. ಇವೆಲ್ಲದರ ಮಧ್ಯೆ ಒಂದಿಷ್ಟು ಜನರನ್ನ ಹಿಡಿದು ಇವರೇ ಸಂಚುಗಾರರು ಅಂತ ಪೊಲಿಸರು ನಾಕ್ ದಿವ್ಸ ತಿರ್ಗಾಡ್ಕಂಡ್ ಅಡ್ಡಾಡ್ತಾರೆ. ಆಮೇಲೆ ನೀವೂ ಮರೀತೀರ ಬಾಂಬ್ ಎಲ್ಲಿ ಸ್ಫೋಟ ಆಗಿತ್ತು ಅಂತಾ. ನಾವೂ ಮರೀತೀವಿ. Aishwarya Rai Pregnant photosಮಾಧ್ಯಮಗಳು ನಾಕ್ ದಿವ್ಸ ವರದಿ ಮಾಡ್ತವೆ. ಐದನೇ ದಿವ್ಸಕ್ಕೆ ಯಾನಾ ಗುಪ್ತಾ ಗುಪ್ತಾಂಗಗಳಿಗೆ ಪ್ಯಾಂಟಿ ಹಾಕಿಕೊಂಡು ಬಂದಿದ್ದು ಸುದ್ದಿಯಾಗುತ್ತೆ. ಇಲ್ಲವೇ ಐಶ್ವರ್ಯ ಯಾವ್ ಮಗು ಹಡೀತಾಳೇ ಅನ್ನೊದ್ ಸುದ್ದಿ. ಸರ್ಕಾರಗಳು ಬಾಂಬ್ ಸ್ಫೋಟದಲ್ಲಿ ಮಡಿದವರಿಗೆ, ಅಂಗಾಂಗ ಕಳೆದುಕೊಂಡವರಿಗೆ ಪರಿಹಾರ “ಘೋಷಣೆ “ಮಾಡ್ತವೆ. ಕೊಡಬೇಕು ಅಂತಾ ಏನೂ ರೂಲ್ಸ್ ಇಲ್ಲ.

Yana Gupta pantyless stunt

ಇನ್ನೊಂದ್ ವಾರ ಬಿಟ್ ನ್ಯೂಸ್ ಚಾನಲ್ ಗಳನ್ನ ನೋಡಿ. ಇಂಥಾ ಸುದ್ದಿ ಪ್ರೈಮ್ ಟೈಮ್ ನಲ್ಲಿ ಪ್ರಸಾರವಾಗದಿದ್ರೆ ಕೇಳಿ.

ಹಿಂಗೇ ಆಗುತ್ತೆ ಅಂತಾ ಕನಸಂತೂ ಬಿದ್ದಿಲ್ಲ. ಎಚ್ಚರವಾಗೇ ಇದ್ದೇನೆ. ಆದರೆ, ಹಿಂದೆ ನಡೆದ ಬಾಂಬುಗಳ ಸದ್ದುಗಳನ್ನ ಕೇಳಿದಾಗಲೆಲ್ಲಾ, ಟಿವಿ ಪತ್ರಿಕೆಗಳನ್ನ, ಹೇತ್ಲಾಂಡಿ ಪ್ರಧಾನಿಯನ್ನ ನೋಡಿದಾಗಲೆಲ್ಲಾ ಇದಕ್ಕಿಂತ ಇನ್ನೇನೂ ಘಟಿಸಲಿಕ್ಕೆ ಉಳಿದಿಲ್ಲ ಅನ್ನಿಸದೇ ಇರುತ್ತದೆಯೇ?

 ಹತಾಶೆ ಬಿಟ್ಟು ಇನ್ನೇನೂ ಹೇಳಕ್ ಉಳಿದಿಲ್ಲ.

ಉದಯವಾಣಿ ಹುಬ್ಬಳ್ಳಿ ಆವೃತ್ತಿ ಬಗ್ಗೆ ಉದಯವಾಣಿ ಗ್ರೂಪ್ ಎಡಿಟರ್ ರವಿ ಹೆಗಡೆಗೆ

ನನ್ನ ವಿರುದ್ಧ ಆರೋಪಗಳಿಗೆ ಇಗೋ ಸಮಾರೋಪ

ಈ ವರ್ಷ ಸಂಕ್ರಾಂತಿ ನನ್ನ ವೃತ್ತಿ ಜೀವನದಲ್ಲೂ ಸಂಕ್ರಾಂತಿಯ ಗಳಿಗೆ. ಆ ವೇಳೆಯಲ್ಲಿ ನಾನು ದಿಢೀರನೆ ಸುವರ್ಣ ನ್ಯೂಸ್ ಬಿಡುವ ನಿರ್ಧಾರ ಕೈಗೊಂಡಿದ್ದು, ಕನ್ನಡದ ಎರಡು ಪ್ರಮುಖ ಪತ್ರಿಕೆಗಳಲ್ಲಿ ಯಾವುದನ್ನು ಸೇರಲಿ ಎಂಬ ಆಯ್ಕೆಯ ಮುಂದೆ ಕುಳಿತು ಹಗಲೂ ರಾತ್ರಿ ಯೋಚಿಸಿದ್ದು, ನನ್ನ ಸಹೋದ್ಯೋಗಿಗಳೋಡನೆ ಈ ಕುರಿತು ಚರ್ಚಿಸಿದ್ದು, ನಂತರ ಉದಯವಾಣಿಯ ಗ್ರೂಪ್ ಎಡಿಟರ್ ಆದದ್ದು, ಯಾವುದೇ ತಯಾರಿ ಇಲ್ಲದೇ ಮೂರು ಬಜೆಟ್, ವಿಶ್ವಕಪ್ ಕ್ರಿಕೆಟ್ ಮುಂತಾದ ಪ್ರಮುಖ ದಿನಗಳ ಪತ್ರಿಕೆ ರೂಪಿಸಿದ್ದು, ದಿಢೀರನೆ ಹುಬ್ಬಳ್ಳಿ ಆವೃತ್ತಿ ಆರಂಭಿಸಿದ್ದು, ಪತ್ರಿಕೆಯ ಮುಂದಿನ 5 ವರ್ಷಗಳ ನೀಲನಕ್ಷೆ ರೂಪಿಸಲು ಕೈಹಾಕಿದ್ದು, ಮಂಗಳೂರು ಆವೃತ್ತಿಯ ವೃತ್ತಿಸೂಕ್ಷ್ಮಗಳನ್ನು ಅಭ್ಯಸಿಸಿದ್ದು, ಬೆಂಗಳೂರು ಆವೃತ್ತಿಯ ಮೂಲಸೌಕರ್ಯ ಹೆಚ್ಚಿಸಿಕೊಳ್ಳಲು ಅವಿರತ ಪ್ರಯತ್ನಿಸಿದ್ದು…. ಹೀಗೆ ಒಂದು ದಿನವೂ ಬಿಡುವಿಲ್ಲದೇ ಕಳೆದ 5 ತಿಂಗಳು ಅದು ಹೇಗೆ ಉರುಳಿತೋ ಗೊತ್ತಾಗುತ್ತಲೇ ಇಲ್ಲ.

ಉದಯವಾಣಿ ಹುಬ್ಬಳ್ಳಿ ಆವೃತ್ತಿ ಬಗ್ಗೆ ಉದಯವಾಣಿ ಗ್ರೂಪ್ ಎಡಿಟರ್ ರವಿ ಹೆಗಡೆ ಬರೆದಿದ್ದಾರೆ. ಅವರಿಗೆ ಪ್ರತಿಕ್ರಿಯೆ.

ಮೊದಲನೆಯದಾಗಿ ಉದಯವಾಣಿಯಲ್ಲಿ ಚಲನಶೀಲತೆಗೆ ಕೈಹಾಕಿರುವ ನಿಮಗೆ ಶುಭವಾಗಲಿ.

ಎರಡನೆಯದಾಗಿ ಮೀಡಿಯಾ strategy ಗಳ ಬಗ್ಗೆ ಬರೆದಿದ್ದೀರಿ. ಹಾಗಾಗಿ ಒಂದು ವಿಷಯವನ್ನ ಪ್ರಸ್ತಾಪಿಸಲಿಕ್ಕೆ ಇಚ್ಷಿಸುತ್ತೇನೆ. ಮೊನ್ನೆ ಮೊನ್ನೆ ಹುಬ್ಬಳ್ಳಿ ಆವೃತ್ತಿ ಬಿಡುಗಡೆ ಮಾಡಿದ್ದೀರಿ. ನೋಡಿದ್ದೇನೆ. ಕನ್ನಡದ ಬೇರಾವ ಪತ್ರಿಕೆಯಲ್ಲೂ ಇರದ ಪ್ರಿಂಟ್ ಕ್ವಾಲಿಟಿ ಉದಯವಾಣಿಗೆ ಇದೆ. ಹುಬ್ಬಳ್ಳಿ ಆವೃತ್ತಿ ಮೂಲಕ ಉದಯವಾಣಿ “ಕರಾವಳಿ” ಬ್ರಾಂಡಿನಿಂದ ಆಚೆಗೆ ಯೋಚಿಸಿದೆ. ಆದರೆ, ಹುಬ್ಬಳ್ಳಿ ಆವೃತ್ತಿಯಲ್ಲಿ ನಾನು ಗಮನಿಸಿದಂತೆ ಈ ಕಡೆಯ ಭಾಷಾ ಬಳಕೆ ನಡೆದಿಲ್ಲ. ಅಟ್ಲೀಸ್ಟ್ ದಿನಕ್ಕೆ ಒಂದೆರಡು ಪುಟ್ಟ ಲೇಖನಗಳು ಹುಬ್ಬಳ್ಳಿ ಭಾಷೆಯಲ್ಲಿ ಬರಬೇಕು. ಇದು ಜನರಿಗೆ ಆಪ್ತ ಮನೋಭಾವವನ್ನ ನೀಡಲು ಶಕ್ತವಾಗುತ್ತದೆ.

ಇನ್ನು ಉದಯವಾಣಿಯ ಅಂಕಣಕಾರರು ಕರಾವಳಿ ಭಾಗದವರು. ಇಲ್ಲಿನ ಜನರಿಗೆ ಫಾದರ್ ಅಂದ್ರೆ ತಿಳಿಯಲ್ಲ. ಇಲ್ಲಿನ ಪ್ರಿಯಾರಿಟಿಗಳೇ ಬೇರೆ. ಪ್ರಿಯಾರಿಟಿಗಳನ್ನ ಆಧರಿಸಿ ಮೀಡಿಯಾ strategy ಗಳು ಅನುಷ್ಟಾನಗೊಳ್ಳಬೇಕು. ನಮ್ ಕಡೆ ಪಾಟೀಲ, ಕಟ್ಟಿಮನಿ, ಅಂಗಡಿ ಮುಂತಾದ ಹೆಸರುಗಳು ಚಾಲ್ತಿಯಲ್ಲಿರುತ್ತವೆ. ಹಾಗಾಗಿ ಉತ್ತರ ಕರ್ನಾಟಕದ ಕಡೆಯ ಮಂದಿಯನ್ನೂ ಅಂಕಣಕಾರಿಕೆಗೆ ಸೇರಿಸಿಕೊಂಡರೆ ಈ ಕಡೆಯ ಪತ್ರಿಕೆ ಅನ್ನೋ ಭಾವ ಮೂಡಿಸಲಿಕ್ಕೆ ಸಹಕಾರಿಯಾಗಬಹುದು.

ಮೂರನೆಯದಾಗಿ, ಹುಬ್ಬಳ್ಳಿಯಲ್ಲಿ ಪ್ರಮುಖ ಬೀದಿಗಳಲ್ಲಿ, ಚನ್ನಮ್ಮನ ವೃತ್ತದಲ್ಲಿ ಹಾಕಿರುವ ಅಡ್ವರ್ಟೈಸ್ಮೆಂಟ್ ಗಳಲ್ಲಿ ಸ್ಥಳೀಯ ಸುದ್ದಿಗೆ ಪ್ರಾಧಾನ್ಯ ಕೊಡುವುದಾಗಿ ಹೇಳಿದ್ದೀರಿ. ಆದ್ರೆ, ಸ್ಥಳೀಯ ನಾಡಿ ಮಿಡಿತ ಅರಿಯುವಲ್ಲಿ ಇನ್ನೂ ಪ್ರಾವೀಣ್ಯ ಬೇಕಿದೆ ಅನ್ನಿಸುತ್ತದೆ. ಈಗಲೂ ಹುಬ್ಬಳ್ಳಿಯಲ್ಲಿ ಸಂಯುಕ್ತ ಕರ್ನಾಟಕ ಬಿಟ್ಟರೆ ಬೇರೆಯದಕ್ಕೆ ಪ್ರತಿಷ್ಠೆ ಕಡಿಮೆ. ಇದಕ್ಕೆ ಕಾರಣಗಳೂ ಇವೆ. ಅಜ್ಜ ಮುತ್ತಜ್ಜನ ಕಾಲದಿಂದ ಮನೆಗೆ ಬರುತ್ತಿದ್ದ ಪೇಪರ್ ನ್ನ ಬದಲಿಸಲಿಕ್ಕೆ ಮನಸ್ಸಾಗಿಲ್ಲ. ಆದ್ರೆ, ಸಂಯುಕ್ತ ಕರ್ನಾಟಕದ ಹಳೇ ತುಕ್ಕು ಹಿಡಿದ ನೀತಿಗಳು, strategy ಗಳು ಒಂದು ದಿನ ಪೇಪರ್ರನ್ನೇ ಮುಳುಗಿಸಿದರೆ ಆಶ್ಚರ್ಯವಿಲ್ಲ. ಆ ದಿನಗಳೂ ದೂರವಿಲ್ಲ.

ಹೊಸತನವನ್ನ ಬಯಸುವ ಯುವ ಜನತೆ ವಿಜಯ ಕರ್ನಾಟಕ, ಕನ್ನಡ ಪ್ರಭದತ್ತ ಮುಖ ಮಾಡಿದ್ದಾರೆ. ಅಂಥಾ ಯುವಜನತೆಯನ್ನ ಉದಯವಾಣಿಯತ್ತಲೂ ಒಲಿಸಿಕೊಳ್ಳಬೇಕಿದೆ. ಇದೆಲ್ಲದಕ್ಕೂ ಸ್ಥಳೀಯ ಭಾಷಾ ಸೊಗಡು ಸೇರಿದರೆ ಪತ್ರಿಕೆ ಉತ್ತರ ಕರ್ನಾಟಕದಲ್ಲೂ ಭದ್ರವಾಗಿ ಕಾಲೂರಬಹುದು.

ಶುಭವಾಗಲಿ.