ಅನೈತಿಕತೆ vs ಭ್ರಷ್ಟತೆ?

ಜನರ ಕಣ್ಣಲ್ಲಿ ಭ್ರಷ್ಟತೆ ಅನ್ನೋದು ಸಾಮಾನ್ಯ ವಿಷಯ. ಅವನು ಅಷ್ಟ್ ದುಡ್ ತಗಂಡ ಅವನು ಅಷ್ಟ್ ಲಂಚ ಕೇಳಿದ ಅನ್ನೋದು ಜನರ ಕಣ್ಣಲ್ಲಿ ಸುದ್ದಿಯೇ ಅಲ್ಲ. (ಇನ್ಫಾರ್ಮೇಷನ್ ಥಿಯರಿ ಪ್ರಕಾರ ಅತಿ ಕಡಿಮೆ ಸಂಭವನೀಯತೆ ಇರುವ ವಿಚಾರ ಅತಿ ಹೆಚ್ಚಿನ ಸುದ್ದಿ ಹೊಂದಿರುತ್ತದೆ) ಅದು ರಂಜನೀಯವೂ ಅಲ್ಲ. ರಸವತ್ತಾಗಿ ಬಾಯ ಮೇಲೆ ನಲಿದಾಡುವಂಥದ್ದೂ ಅಲ್ಲ. ದುಡ್ಡು ಹೊಡೆದ ಹೊಡೆದ ಅಷ್ಟೇ. ಮುಗೀತು.

ಆದರೆ, ಅನೈತಿಕತೆಯ ವಿಷಯ ಹಾಗಲ್ಲ. ಅದು ಪ್ರತಿ ಕ್ಷಣಕ್ಕೂ ಹೊಸ ಹೊಸ ತಿರುವುಗಳನ್ನ ನೀಡುತ್ತ, ರಂಜನೆ, ಕುತೂಹಲ ಹುಟ್ಟಿಸುತ್ತದೆ ಜೊತೆಗೆ ಸುದ್ದಿಯಾಗುತ್ತದೆ. ಈ ಸುದ್ದಿ ಹೊಸ ಸುದ್ದಿಗಳಿಗೆ ಕಾರಣೀಭೂತವಾಗುತ್ತದೆ. ಜನರ ಬಾಯಲ್ಲಿ ಆಡಿಕೊಂಡು ನಗಲಿಕ್ಕೆ, ಹೀಯಾಳಿಸಲಿಕ್ಕೆ, ಜನ ಈ ಸುದ್ದಿ ಹೇಳುವಾಗ ತಾವೇನೋ ಸಾಚಾ ಎಂದು ಜಂಭ ಕೊಚ್ಚಿಕೊಳ್ಳಲೊಕ್ಕೂ ವೇದಿಕೆ ಒದಗಿಸುತ್ತದೆ.

ಹಾಗಾಗಿ, ಕೂಡ್ಲಿಗಿ ಡಿ.ವೈ.ಎಸ್.ಪಿ. ಅನುಪಮಾ ಶೆಣೈ ಪಿ.ಟಿ.ಪರಮೇಶ್ವರ ನಾಯ್ಕರ ವಿರುದ್ಧ ಭ್ರಷ್ಟತೆಯ, ಅಧಿಕಾರ ದುರುಪಯೋಗದ ಆರೋಪ ಮಾಡಿದ್ದರೆ ಆದು ಸುದ್ದಿಯೇ ಆಗುತ್ತಿರಲಿಲ್ಲ. ಯಾವಾಗ ಅದಕ್ಕೆ ಪರಮೇಶಿ ಪ್ರೇಮ ಪ್ರಸಂಗ, ವಾಷಿಂಗ್ ಪೌಡರ್ ನಿರ್ಮಾ ಅನ್ನೋ ಶೀರ್ಷಿಕೆಗಳು ಲಭಿಸಿದವೋ, ಅದೇ ಕ್ಷಣದಿಂದ ಒಂದು ಕೆಟ್ಟ ಕುತೂಹಲವನ್ನು ಕೋಟ್ಯಂತರ ಜನರ ಮನಸ್ಸಿನಲ್ಲಿ ಈ ಸುದ್ದಿ ಬಿತ್ತಿಬಿಟ್ಟಿದೆ. ಇನ್ನು ಏನೇ ಬೆಳವಣಿಗೆಗಳು ಈ ವಿಷಯವಾಗಿ ನಡೆದರೂ ಅದು ಸಾವಿರ ಅರ್ಥಗಳನ್ನ ಕಲ್ಪಿಸಿಕೊಳ್ಳುವಷ್ಟು ಪ್ರಬಲವಾಗಿ ಕೆಟ್ಟ ಕುತೂಹಲವನ್ನು ನಿರ್ಮಿಸಿಕೊಟ್ಟಿದೆ.

ಯಾವುದಕ್ಕೂ ಹೆದರದ ಭಂಡ, ಭ್ರಷ್ಟರು ಆನೈತಿಕತೆಯ ಕೆಟ್ಟ ಕುತೂಹಲಕ್ಕೆ ಬೆಚ್ಚಿ ಬೆದರಿರುವುದು ಒಂಥರಾ ಆಸಕ್ತಿಕರ ವಿಷಯ. ಜನರ ಸಾಮಾಜಿಕ ವರ್ತನೆ ಮತ್ತು ಕಾಲಕ್ಕೆ ತಕ್ಕಂತೆ ಅದರ ಪರಿವರ್ತನೆ ಅಭ್ಯಾಸಿಸುವವರಿಗಂತೂ ಸುಗ್ಗಿ ಕಾಲ.

ಲೈನ್ ಹೊಡೀಬೇಕಾದ್ರಂತೂ ಆಕೆಗೆ ಮುತ್ತು ಕೊಡಲಾಗಲಿಲ್ಲ. ಅಟ್ಲೀಸ್ಟ್…

http://www.freepik.com/free-vector/stock-illustrations-girl-flower-vector_521213.htm

Photo courtesy – freepik.com

ಗೆಳೆಯನೊಬ್ಬನನ್ನ ಮೊನ್ನೆ ಮದುವೆಗೆ ಕರ್ಕೊಂಡ್ ಹೋಗಿದ್ದೆ. ಆತ ಮದುವೆಗೆ ಬಂದಿದ್ದ 28ರ ಪ್ರಾಯದ ತನ್ನ ಹಳೆಯ ಸಹಪಾಠಿ ಗೆಳತಿಯ ಬಗ್ಗೆ ಹೇಳಿದ್ದನ್ನ ಯಥಾವತ್ತಾಗಿ ಇಡುತ್ತಿದ್ದೇನೆ.

8ನೇ ಕ್ಲಾಸಿನಲ್ಲಿ ಅವಳ ಹಿಂದೆ ದೊಡ್ಡ ಹುಡುಗರ ಹಿಂಡೇ ಬಿದ್ದಿತ್ತು. ಈಗ ಆಕೆಗೆ ಸುಮಾರು ಇಪ್ಪತ್ತೆಂಟು. ಈಗಲೂ ಅಷ್ಟೇ ಸೌಂದರ್ಯವತಿ. ಶ್ವೇತವರ್ಣೆ. ಆಕರ್ಷಕ ಮಂದಸ್ಮಿತ ಗುಂಡು ಮುಖ. ಸ್ವರ್ಗಕ್ಕೆ ಆಕೆಯ ಗಂಡ ಕಿಚ್ಚು ಹಚ್ಚಿದ್ದಾನೋ ಇಲ್ಲವೋ ಗೊತ್ತಿಲ್ಲ. ಆದರೆ, ಆತ ಕಿಚ್ಚು ಹಚ್ಚಿದ್ದಾನೆ ಅಂತಲೇ ಎಲ್ಲರೂ ನಂಬಿದ್ದಾರೆ..! 8ನೇ ಕ್ಲಾಸಿನಲ್ಲಿ ನಾನೂ ಅವಳ ಹಿಂದೆ ಬಿದ್ದಿದ್ದೆ. ಅವಳು ಒಬ್ಬರಿಗಲ್ಲ. ಎಲ್ಲರಿಗೂ ಲೈನ್ ಕೊಡುತ್ತಿದ್ದಳು. ಆಮೇಲೆ, ಎಲ್ಲರಿಗೂ ಟಾಟಾ ಮಾಡಿ, ಪಾಪಾ ಪಾಂಡು ಥರದೋನನ್ನ ಮದುವೆಯಾದಳು. ಲೈನ್ ಹೊಡೀಬೇಕಾದ್ರಂತೂ ಆಕೆಗೆ ಮುತ್ತು ಕೊಡಲಾಗಲಿಲ್ಲ. ಅಟ್ಲೀಸ್ಟ್ ಎರಡು ವರ್ಷದ ಆಕೆಯ ಮಗುವಿಗಾದ್ರೂ ಕೊಡೋಣಾ ಅಂತಾ ಅಂದುಕೊಂಡೆ. ಥತ್, ಯಾರೋ ಕರೆದರು ಅಂತಾ ನನ್ ಕೈಗ್ ಕೊಟ್ಟಿದ್ದ ಮಗು ಎತ್ಕೊಂಡ್ ಹೋದ್ಲು. ಜಸ್ಟ್ ಮಿಸ್..! ಬಡ್ಡೀಮಗಂದ್ ಲೈಫ಼್ ನಲ್ಲಿ ಎಂಥೆಂಥಾ ಟ್ವಿಸ್ಟ್‌ಗಳಪ್ಪಾ..?

🙂

ಲೈವ್ ಕಾರ್ಯಕ್ರಮದಲ್ಲಿ ನಿರೂಪಕಿಗೆ ಕರುಳಿನ ಕ್ಯಾನ್ಸರ್ ಬರಿಸಿದ ಡಾಕ್ಟರು..!

Udaya News programಅವತ್ತು ಬೆಳಗ್ಗೆ(ಜ ೧೫ ಇರಬೇಕು) ಉದಯ ನ್ಯೂಸ್ ಚಾನಲ್ ನಲ್ಲಿ 10.30am – 11.30am ವರೆಗೆ ವೈದ್ಯಕೀಯ ಲೈವ್ ಕಾರ್ಯಕ್ರಮ ವೀಕ್ಷಿಸುತ್ತಿದ್ದೆ. ಒಬ್ಬರು ಉದರ ರೋಗ ತಜ್ಞರು ಬಂದಿದ್ದರು. ಲೈವ್ ಕಾರ್ಯಕ್ರಮವಾದ್ದರಿಂದ ಬಹಳ ಜನ ಕೋಲಾನ್(ದೊಡ್ಡ ಕರುಳಿನ) ಕ್ಯಾನ್ಸರ್ ಬಗ್ಗೆ ಪ್ರಶ್ನೆಗಳನ್ನ ಕೇಳಿದರು. ಕರೆ ಮುಕ್ತಾಯವಾಯಿತು. ನಿರೂಪಕಿಯೊಂದಿಗೆ ಕೋಲಾನ್ ಕ್ಯಾನ್ಸರ್ ಬಗ್ಗೆ ಮಾಹಿತಿ ನೀಡಲು ಶುರು ಮಾಡಿದರು. “ನೋಡಿ, ನಿಮಗೆ ಈ ಕೋಲಾನ್ ಕ್ಯಾನ್ಸರ್ ಬಂತು ಅಂದ್ರೆ ಜನ ಯಾವ ಸ್ಟೇಜ್ ನಲ್ಲಿದೆ ಅಂತಾ ಕೇಳ್ತಾರೆ. ನಮಗೆ ಆಪರೇಟ್ ಮಾಡದೇ ಕೊಲನೋಸ್ಕೋಪಿ ಮಾಡದೇ ಕ್ಯಾನ್ಸರ್ ಯಾವ ಸ್ಟೇಜ್‌ನಲ್ಲಿದೆ ಅಂತಾ ಹೇಳಕ್ ಬರಲ್ಲ. ಜೊತೆಗೆ ಮಲವಿಸರ್ಜನೆಗೂ ತೊಂದರೆಯಾಗುತ್ತದೆ.”

ಪಾಪ ನಿರೂಪಕಿಗೆ ಯಾವಾಗ ಕೋಲಾನ್ ಕ್ಯಾನ್ಸರ್ ಬಂತು..?

*****************************************************************************************

ಕೆಲವರಿಗೆ ಇದು ಚಟ. ಪ್ರತಿಯೊಂದಕ್ಕೂ “ನಿಮಗೆ””ನೀವು” ಬಳಸೋದು. ಅದು ಬಹುವಚನವೇ ಇರಬಹುದು. ಆದರೆ, ಕು(ಸು-ಅಲ್ಲ)ಸಂದರ್ಭದಲ್ಲಿ ಬಳಸಿದರೆ ಅದಕ್ಕಿಂತ ಮರ್ಯಾದೆ ಕಳೆಯುವ ಸಂಭವವೇ ಹೆಚ್ಚು.

ಒಂದು ಸೋಫಾ ಅಂಗಡಿಗೆ ಹೋಗಿ. ಈ ಸೋಫಾಕ್ಕೆ ಎಷ್ಟಾಗುತ್ತೆ ಅಂತಾ ಕೇಳಿ. “ಸರ್, ಇದು ಬಂದ್ಬಿಟ್ಟು ನಿಮ್ಗೆ 25 ಸಾವಿರ ಆಗುತ್ತೆ”
ಹತ್ತು ಹದಿನೈದು ವರ್ಷದ ಹಿಂದೆ ಬೆಂಗಳೂರಿನ ಭಾಷೆ ಹೀಗಿರಲಿಲ್ಲ ಅಲ್ಲವಾ.

*****************************************************************************************

ಇನ್ನೊಂದು ಸಂದರ್ಭ.
ಒಬ್ಬರು ಮೇಷ್ಟರಿದ್ದರು. ಜೀವಶಾಸ್ತ್ರ ಪ್ರಾಧ್ಯಾಪಕರು. Sexually Transmitted Diseases(STDs) ಪಾಠ ಮಾಡ್ತಾ ಇದ್ರು.
“There are three STDs. Namely, Gonorrhea,Syphilis and AIDS. You will get one of them in exam.”

‘ಕಾಳ್’ ಮಿ – ಇದು Virginal ವೃತ್ತಾಂತ..!


    ಇತ್ತೀಚೆಗೆ ಭಾರತಕ್ಕೆ ಬಂದ ಹೊಸ ನೆಟ್‍ವರ್ಕ್ Virgin mobile ಎಲ್ಲ ಬಸ್‍ಸ್ಟ್ಯಾಂಡು, ಗೋಡೆ, ಪರದೆ, ಎಲ್ಲವುಗಳ ಮೇಲೆ ತನ್ನ ಆಗಮನದ ಮಾಹಿತಿಯನ್ನ, ಜಾಹೀರಾತನ್ನ ಹಾಕಿದೆ. ಈ ಬರಹದ ಜೊತೆ ಅದನ್ನೂ ಮೇಲೆ ಲಗತ್ತಿಸಿದ್ದೇನೆ. ಅದರಲ್ಲಿ ಕಾಲೇಜಿಗೆ ಹೋಗೋ ಥರ ಇರೋ ‘Virgin ಯುವತಿ’ ಪುಸ್ತಕಗಳನ್ನ(ಕಾಲೇಜಿನವು ಅಂದುಕೊಳ್ಳಬಹುದು) ಮಡಿಚಿದ ಸ್ಟೈಲಿಷ್ ಕೈಯ್ಯಲ್ಲಿ ಹಿಡಿದಿದ್ದಾಳೆ. ಇನ್ನೊಂದು ಕೈ ವರ್ಣಿಸೋಣ ಅಂದರೆ, ಅದು ಮೊಣಕೈವರೆಗೆ ಅಷ್ಟೇ ಇರೋದು. ಹಾಗಾಗಿ ಚಾನ್ಸ್ ಇಲ್ಲ..! ಈಗ ‘ನೇರವಾಗಿ’ ವಿಷಯಕ್ಕೆ ಬರೋಣ. ಈ ಮೊಬೈಲ್ ನೆಟ್‍ವರ್ಕನ್ನ ಪ್ರಮೋಟ್ ಮಾಡಲಿಕ್ಕೆ ಆಕೆ ಫೋನ್ ಮಾಡಲಿಕ್ಕೆ ಹೇಳಬೇಕಲ್ಲ ಈ ಜಾಹೀರಾತು ನೋಡಿದವರಿಗೆ..? ಫೋನ್ ನಂಬರ್ರು ಆಕೆ ಧರಿಸಿದ ಟೀ ಶರ್ಟ್ ಮೇಲಿದೆ. ಎಲ್ಲರೂ ಇಲ್ಲಿಗೆ ಫೋನಾಯಿಸಿ ಅಂತಾ Editorial(‘ಎದಿತೋರಿಯಲ್’..!??) ಬರೆದುಕೊಂಡಿದ್ದಾಳೆ. ಹುಡುಗರು ಜಾಹೀರಾತಲ್ಲಿ ಹುಡುಗಿ ಚಿತ್ರ ಹಾಕಿದ್ರೆ, ಮೊದಲು ಮುಖ ನೋಡ್ತಾರೋ ಇಲ್ವೋ ಆದ್ರೆ ಎಲ್ಲಿ ನೋಡ್ತಾರೋ ಅಲ್ಲಿನೇ ಫೋನ್ ನಂ. ಹಾಕಿದ್ದಾರೆ. ಇದೇ ಅಲ್ವಾ ಬಿಸಿನೆಸ್ಸು ಅಂದ್ರೆ..??

    ಅಲ್ಲಿಗೆ ಹುಡುಗರನ್ನ ಸೆಳೆದಿದ್ದಾಯಿತು. ಇನ್ನ ಹುಡುಗಿಯರಿಗೆ ಈ ಹೆಸರೇ ಆಪ್ಯಾಯಮಾನವಾಗಿರುವಂತೆ ಇಟ್ಟಿದ್ದಾರೆ. ಹುಡುಗಿಯರಿಗೆ Virgin ಅಂದ್ರೆ ಏನೋ ಹೆಮ್ಮೆ, ಗೌರವ, ಆತ್ಮಾಭಿಮಾನ, ಇಲ್ಲಿಯವರೆಗೂ ಅಖಂಡ ಬ್ರಹ್ಮಚರ್ಯ(ಇಲ್ಲಿ ಬ್ರಹ್ಮನೇ ಯಾಕೆ..? ಸ್ತ್ರೀಲಿಂಗ ಇಲ್ವಾ?) ಪಾಲಿಸಿದ್ದರ ಧ್ಯೋತಕವಾದ virginal ಹೆಸರು. ಅಲ್ಲಿಗೆ ಹುಡುಗಿಯರಿಗೂ ಪ್ರೀತಿಪಾತ್ರವಾದ ಮೊಬೈಲಾಗುವ ಸಕಲ ಅರ್ಹತೆಗಳನ್ನೂ ಪಡೆದುಕೊಂಡಂತಾಯಿತು. ತಮಗೆ ‘Virgin ಹುಡುಗಿಯರೇ’ ಬೇಕೆಂದು ಬಯಸುವ ಹುಡುಗರಿಗೆ ಆಕಾಶಕ್ಕೆ ಒಂದು ನ್ಯಾನೋಮೀಟರ್ ಉಳೀತು ಅಷ್ಟೇ. ಇಬ್ಬಂದಿತನವೆಂದರೆ, Virginity is not a dignity. Its a loss of opportunity ಅಂತಾ ಛೇಡಿಸುವ ಹುಡುಗರೂ ‘ಕನ್ಯೆ’ಯರನ್ನೇ ಮದುವೆಯಾಗಬಯಸುತ್ತಾರೆ..!


    ಸಾಮಾನ್ಯವಾಗಿ ಹುಡುಗರು ಹುಡುಗಿಯರಿಗೆ
* ಫೋನಾಯಿಸುತ್ತಾರೆ. ತಮ್ಮ ಪ್ರಿಯತಮೆಯಾಗಿರಬಹುದು, ಗೆಳತಿಯಾಗಿರಬಹುದು, ಜತೆಗಾರ್ತಿಯಾಗಿರಬಹುದು ಅಥವಾ ಸಂಗಾತಿಯಾಗಿರಬಹುದು. ಗಮನಿಸತಕ್ಕ ಅಂಶವೆಂದರೆ, ಹುಡುಗರು ಹುಡುಗಿಯರಿಗೆ call  ಮಾಡುವುದು ಹುಡುಗಿಯರು ಹುಡುಗರಿಗೆ ಫೋನಾಯಿಸುವುದಕ್ಕಿಂತ ಜಾಸ್ತಿ. ‘ಮೀಟರ್’ ಹಾಗಾಗಿ ಜಾಸ್ತಿ ಆಗ್ತಿರ್ತದೆ. ಇದನ್ನೇ ಗಮನಿಸಿ, ಮೊಬೈಲ್ ಕಂಪನಿಯವರು ತಾರುಣ್ಯಭರಿತ ಯುವತಿಯ ಜಾಹೀರಾತು ಹಾಕಿದ್ದಾರೆ. ಎಷ್ಟೇ ಆಗಲಿ ಅನ್ಯಲಿಂಗ ಆಕರ್ಷಣೆ ಇಲ್ಲದಿರುತ್ತದೆಯೇ? ಹುಡುಗರಂತೂ ಬಲೆಗೆ ಬೀಳ್ತಾರೆ ಅಂತಾ ಗೊತ್ತು.   ಸ್ತ್ರೀ ದ್ವೇಷಿಗಳು, I mean ಒಬ್ಬ ಹುಡುಗಿಯನ್ನ ಕಂಡರೆ ಮತ್ತೊಬ್ಬ  ಹುಡುಗಿಗಾಗುವುದಿಲ್ಲವಲ್ಲ ಅವರು, ಈ ಮೊಬೈಲನ್ನ ಖರೀದಿಸದೇ ಹೋಗಬಹುದು. ಇಲ್ಲಿ ಇನ್ನೊಂದು possibility ಇದೆ. ತಮಗೆ ‘Virgin’ ಹುಡುಗಿ ಬೇಕೆಂದು ಹಟ ಹಿಡಿಯುವ ಹುಡುಗರು, ತಮ್ಮ ಹುಡುಗಿಗೇ ಈ ಮೊಬೈಲನ್ನ ಕೊಡಿಸಿ virgin ಆಗಿಸಬಹುದು. ಮೊಬೈಲನ್ನ ಕೊಡಿಸಲು ಇನ್ನೊಂದು ಕಾರಣವೂ ಇದೆ. ಈ virgin mobile ಗೆ ಬರುವ ಒಳಬರುವ ಕರೆಗಳಿಗೆ  ನಿಮಿಷಕ್ಕೆ 10ಪೈಸೆ ಬರುತ್ತದೆ. ಹಾಗಾಗಿ ಗಂಟೆಗಟ್ಟಲೇ ಮೀಟರ್ ಹೊಡೆದು ತಮ್ಮ ದುಡ್ಡು ಖರ್ಚು ಮಾಡಿಕೊಂಡು, ಪ್ರಣಯ ಸಲ್ಲಾಪ ನೆಡೆಸುವ ಯುವಕರು, ತಮ್ಮ incoming call ನಿಂದಾದರೂ ತಮ್ಮ ಹುಡುಗಿಯ ಮೊಬೈಲಿಗೆ ಹಣಸಂದಾಯವಾಗಲೆಂಬ ಮಹದಾಸೆ..! ಯಾಕಂದ್ರೆ, ಬಹಳ ಸಲ, ತಾವೇ ಕರೆನ್ಸಿ ಹಾಕಿಸಿಕೊಡಬೇಕಲ್ಲ..!!
(* 
conditions apply ಹುಡುಗಿಯರು ಗೊತ್ತಿದ್ದರೆ).

 
    ಉಳಿದೆಲ್ಲ ನೆಟ್‍ವರ್ಕ್‍ಗಳಿಗೆ ಕನ್ನಡೀಕರಣ ಮಾಡಿದ ಹೆಸರುಗಳಿವೆ
    Airtel – ಗಾಳಿದೂರವಾಣಿ
    Spice – ಮಸಾಲೆ ದೂರವಾಣಿ
    Vodaphone – ವಡೆ ದೂರವಾಣಿ


    ಇಲ್ಲಿ ಗಂಭೀರ ಸಮಸ್ಯೆ ಎದುರಾಗಿರೋದು ಸದರಿ ಫೋನಿನ ಕನ್ನಡೀಕರಣದ್ದು. ಹಾಗಾಗಿ, ಎಲ್ಲ ಅಂತರ್ಜಾಲ ಕನ್ನಡಿಗರು, ಬ್ಲಾಗಮಂಡಲಾಧಿಪತಿಗಳು, ಕನ್ನಡ ‘ಪ್ರೇಮಿಗಳು’ ಇರುವ ಗಂಭೀರ ಚರ್ಚೆಗಳನ್ನೆಲ್ಲಾ ಇರುವಲ್ಲಿಯೇ ಬಿಟ್ಟು ಬರಬೇಕಿದೆ. ಇದಕ್ಕೆ ‘ಕನ್ಯಾ ದೂರವಾಣಿ’ ಎಂದು ಹೆಸರಿಸಬೇಕೋ ಇಲ್ಲಾ ‘ಕನ್ಯತ್ವ ದೂರವಾಣಿ’ ಅನ್ನಬೇಕೋ ತಿಳಿಯದಾಗಿದೆ. ಯಾಕೆಂದರೆ ಇದೊಂದು ರೀತಿ ಅನನ್ಯತೆ ಹೊಂದಿದೆ. ಹಾಗಾಗಿ ಕನ್ಯಾನನ್ಯ ದೂರವಾಣಿ ಎಂದು ನಾಮಕರಣ ಮಾಡಬಹುದೇನೋ ಎಂಬ ಬಗ್ಗೆ ಅನುಮಾನವಿದೆ. ಓದುಗರು suggest ಮಾಡಿದರೆ ಒಳ್ಳೇದು.
 

    ಇಲ್ಲಿ ಇನ್ನೊಂದು ಸ್ವಾರಸ್ಯಕರ ಸಂಗತಿ ಇದೆ. Call me 09250362436 ಅಂತಾ ಎದೆಯ ಮೇಲೆ ಧರಿಸಿರುವ ಯುವತಿ, ಅಖಂಡ  ಬ್ರಹ್ಮಚಾರಿಣಿ, ಕನ್ಯತ್ವ ಪರಿಭಾಷಿಣಿ ಹೀಗೆ ಒಮ್ಮಿಂದೊಮ್ಮೆಲೇ ‘ಕಾಳ್ ಮಿ’ ಎಂದರೆ ತುಂಟ ಹುಡುಗರು ‘ಕಾಳು ಹಾಕುವುದಕ್ಕೆ’ ಸಕಲ ತಯಾರಿ ಮಾಡಿಕೊಳ್ಳಲು ತಲೆ ಕೆರೆದುಕೊಳ್ಳುವಂತೆ ಮಾಡಿದ್ದೇಕೆ?