ಕಲಾತ್ಮಕ ಮತ್ತು ಸಾಹಿತಿಕ ಪ್ರಕಾರಗಳಲ್ಲಿ ತಂತ್ರಜ್ಞಾನ – ಮುಂದೊಂದು ದಿನ ಇತಿಹಾಸದ ಪುಟ ಸೇರಿ ನಗು ತರಿಸಬಹುದೇ?

ಕಲಾತ್ಮಕ ಮತ್ತು ಸಾಹಿತಿಕ ಪ್ರಕಾರಗಳಲ್ಲಿ ತಂತ್ರಜ್ಞಾನ –  ಮುಂದೊಂದು ದಿನ ಇತಿಹಾಸದ ಪುಟ ಸೇರಿ ನಗು ತರಿಸಬಹುದೇ? 

ಒಂದಿಷ್ಟು ದಶಕಗಳ ಹಿಂದಿನ ಸಿನಿಮಾಗಳತ್ತ ಹೋಗೋಣ. ವಿಲನ್ನು ಬಂದವನೇ ಹೀರೋನ ಅಥವಾ ಹೀರೋಯಿನ್ನಿನ ಮನೆಗೆ ಬರುತ್ತಾನೆ. ಆಗ ಹೀರೋ/ಹೀರೋಯಿನ್ನು ಪೊಲೀಸರಿಗೆ ಫೋನು ಮಾಡಲು ಲ್ಯಾಂಡ್ ಲೈನ್ ಫೋನಿನ (ಫೋನಿನ ವಿವಿಧ ಪ್ರಕಾರಗಳು ಬಂದಾದಮೇಲೆ ಫೋನಿನ ಹಿಂದಿನ ಈ ವಿಶೇಷಣ ಬಂತು) ರಿಸೀವರ್ ಕೈಗೆತ್ತಿಕೊಳ್ಳುತ್ತಾನೆ/ಳೆ. ವಿಲನ್ನು ಟೆಲಿಫೋನಿನ ವಯರ್ ಕತ್ತರಿಸುತ್ತಾನೆ. ಆ ವಯರ್ ನಿಂದಲೇ ಕುತ್ತಿಗೆಗೆ ಬಿಗಿಯುತ್ತಾನೆ. ಈಗಿನ ವೈರ್ ಲೆಸ್ ಯುಗದಲ್ಲಿ ಟೆಲಿಫೋನಿಗೆ ವಯರ್‌ಗಳೂ ಇಲ್ಲ. ಕತ್ತರಿಸುವಂತೆಯೂ ಇಲ್ಲ. ಇನ್ನು ಮುಂದಿನ ಸಿನಿಮಾಗಳಲ್ಲಿ ಮೊಬೈಲ್ ಜಾಮರ್ ತಂದು ವಿಲನ್ ಹೀರೋಯಿನ್ನು, ಹೀರೋಗಳನ್ನ ಕೊಲ್ಲಬೇಕು..! ಓದನ್ನು ಮುಂದುವರೆಸಿ

Advertisements

ಲೋಕಪಾಲ್ – ಯಾರದೋ ಹೆಸರು ಯಾರದೋ ಬಸರು ಅನ್ನೋ ಹಂಗಾಯಿತು ಇದು.

ಯಾರದೋ ಹೆಸರು ಯಾರದೋ ಬಸರು ಅನ್ನೋ ಹಂಗಾಯಿತು ಇದು.
ಅಣ್ಣಾ ಹಜಾರೆ ಒಳ್ಳೇ ವ್ಯಕ್ತಿ. ಆದರೆ, ಅವರ ಒಳ್ಳೇತನವನ್ನ ಯಾರು ಹೆಂಗೆ ಬೇಕಾದರೂ ಬಳಸಬಹುದು ಅನ್ನುವುದಕ್ಕೆ ನಿನ್ನೆಯ ರಾಜ್ಯ ಸಭೆ, ಇವತ್ತಿನ ಲೋಕಸಭೆ ಮಸೂದೆ ಮಂಡನೆ, ನಂತರ ಹಜಾರೆಯವರ ಉಪವಾಸ ಅಂತ್ಯ.. ಇವೆಲ್ಲ ಸನ್ನಿವೇಶಗಳು ಪುಷ್ಟಿಕರಿಸುತ್ತವೆ.

ಅಣ್ಣಾ ಹಜಾರೆಯವರನ್ನ ಜೈಲಿಗೆ ತಳ್ಳಿದ್ದನ್ನ, ರಾಮದೇವ ಬಾಬಾರನ್ನ ವೇದಿಕೆಯ ಮೇಲೆ ಅಟ್ಟಾಡಿಸಿಕೊಂಡು ಹೋಗಿದ್ದನ್ನ ನೆನಿಸಿಕೊಳ್ಳಿ. ಎಲ್ಲಿದ್ದ ರಾಹುಲ ಗಾಂಧೀ? ಬಾಯಿ ಸತ್ತು ಹೋಗಿತ್ತಾ ಅವತ್ತು? ಮನೀಷ್ ತಿವಾರಿ “ಅಡಿಯಿಂದ ಮುಡಿಯವರೆಗೆ ನೀನೇ ಭ್ರಷ್ಟ” ಅಂತಾ ಅಣ್ಣಾ ಹಜಾರೆಯವರನ್ನೇ ಅವಮಾನಿಸಿದಾಗ ಎಲ್ಲಿ ಹೋಗಿದ್ದ ರಾಹುಲ ಗಾಂಧೀ? ನಿನ್ನೆ ಅಣ್ಣಾ ಹಜಾರೆಯವರು ರಾಹುಲಗಾಂಧಿಯನ್ನ ಕೊಂಡಾಡಿದ್ದೇನು ರಾಹುಲಗಾಂಧೀ ಅಣ್ಣಾ ಹಜಾರೆಯವರನ್ನ ಕೊಂಡಾಡಿದ್ದೇನು. ಇವೆಲ್ಲ ಕನಸಿನ ಚಿತ್ರಗಳಂತೆ ಕಣ್ಣ ಮುಂದೆ ಸರಿದು ಹೋದವು.

ಅಣ್ಣಾ ಹಜಾರೆಯವರು ಇಲ್ಲಿಯವರೆಗೂ ರಾಲೇಗಣ ಸಿದ್ಧಿಯಲ್ಲೇ ಉಪವಾಸ ಸತ್ಯಾಗ್ರಹಗಳನ್ನ ಮಾಡಿಕೊಂಡಿದ್ದರೆ ದೇಶಾದ್ಯಂತ ಸುದ್ದಿಯಾಗುತ್ತಿತ್ತೇ? ಯುವಕರನ್ನ ಸಂಘಟಿಸಲಾಗುತ್ತಿತ್ತೇ? ಸರ್ಕಾರದ ಮೇಲೆ ಒತ್ತಡ ನಿರ್ಮಿಸಲಾಗುತ್ತಿತ್ತೇ? ಅರವಿಂದ ಕೇಜ್ರಿವಾಲ್ ಅನ್ನೋ ವ್ಯಕ್ತಿ ಹಜಾರೆಯವರ ಹಿಂದಿನ ಎಲ್ಲ ಉಪವಾಸ ಸತ್ಯಾಗ್ರಹಗಳಲ್ಲಿ ಹಿಂದೆ ನಿಂತು ಸಂಘಟಿಸಿ, ದೇಶದಲ್ಲಿ ಸಂಚಲನ ಮೂಡಿಸಲಿಲ್ಲವೇ?

ಸೌಜನ್ಯಕ್ಕಾದರೂ ಕೇಜ್ರಿವಾಲ್ ಹೆಸರು ಹೇಳಿದ್ದರೂ ಅಣ್ಣಾ ಹಜಾರೆ ಇನ್ನೂ ದೊಡ್ಡವರಾಗುತ್ತಿದ್ದರು. ನಿಷ್ಪಕ್ಷಪಾತಿ ಅನ್ನಿಸಿಕೊಳ್ಳುತ್ತಿದ್ದರು.

ಮನುಶ್ರೀ – ಯೂ ದಿ ಎಂಡ್ ಎ – ಕನ್ನಡ ಸಿನೆಮಾ

ಪ್ರತಿಭಾನ್ವಿತ, ಕ್ರಿಯಾಶೀಲ ಗೆಳೆಯ ಮನುಶ್ರೀಯ ಸಂಗೀತ ನಿರ್ದೇಶನದ “ಯು ದಿ ಎಂಡ್ ಎ” ಸಿನೆಮಾದ ಹಾಡುಗಳು ರಿಲೀಸ್ ಆಗಿವೆ. ಸೂಪರ್ ಆದ ಹಾಡುಗಳು. ನೀನೆ ರಾಧೆ ಅಂತೂ ನನ್ನ ನೆಚ್ಚಿನ ಹಾಡು. ನಿಮಗೂ ಕೇಳಿಸುವ ಆಸೆ. ಎಲ್ಲ ಹಾಡುಗಳನ್ನೊಮ್ಮ ಕೇಳಿ.

ಮನುಶ್ರೀರವರೇ ನೀವು ನೀನೆ ನನ್ನ ರಾಧೆಯ ಹಾಡಿಗಾಗಿ ಗಿಟಾರ್ ನುಡಿಸಲಿಲ್ಲ. ಕನ್ನಡಿಗರ ಹೃದಯದ ಗಿಟಾರ್ ನುಡಿಸಿಬಿಟ್ರಿ 😉

ಮೊದಲನೆದು – ನೀನೆ ನನ್ನ ರಾಧೆ – ಕನ್ನಡ ಚಿತ್ರರಂಗಕ್ಕೊಂದು ಇಂಪಾದ ಹಾಡಿನ ಸೇರ್ಪಡೆ

ಎರಡೆನೆಯದು – ತಿರುಬೋಕಿ – ಪೊರ್ಕಿ ಹುಡುಗರ ವೇದವಾಕ್ಯವಾಗುವ ಸಂಭವ ಆದ್ರೆ ಪೂರ್ತಿ ಅರ್ಥ ಆಗಲ್ಲ. 😉

ಮೂರನೆಯದು – ಫಸ್ಟ್ ಟೈಮ್ ಹಾರ್ಟಲ್ಲಿ – ಮಜಾ ಕೊಡುವ ಪ್ರೇಮದಾರಂಭದ ಯುಗಳ ಗೀತೆ.

ನಾಲ್ಕನೆಯದು – ಬಾ ಸನಿಹ – ಕ್ಯಾಬರೆ ಸ್ಟೈಲಿನ ವಿರಹಗೀತೆ

ಐದನೆಯದು – ಮಾಯೆ ಈ ಜಗವು – ಸಿನಿಮಾದ ಒಳಹೂರಣವನ್ನ ತೆರೆದಿಡುವ ಹಾಡು.

ಆರನೆಯದು – ನೀನೆ ನನ್ನ ರಾಧೆ ಅನ್ ಪ್ಲಗ್ಡ್ – ಸ್ವತಃ ಮನುಶ್ರೀಯವರೇ ಹಾಡಿರುವ ಮತ್ತು ಗಿಟಾರ್ ಮತ್ತು ಪಿಯಾನೋ ಬಳಸಿರುವ ಮತ್ತು ಬಹಳ ಕಾಡುವ ಗೀತೆ.