ಕಲಾತ್ಮಕ ಮತ್ತು ಸಾಹಿತಿಕ ಪ್ರಕಾರಗಳಲ್ಲಿ ತಂತ್ರಜ್ಞಾನ – ಮುಂದೊಂದು ದಿನ ಇತಿಹಾಸದ ಪುಟ ಸೇರಿ ನಗು ತರಿಸಬಹುದೇ?

ಕಲಾತ್ಮಕ ಮತ್ತು ಸಾಹಿತಿಕ ಪ್ರಕಾರಗಳಲ್ಲಿ ತಂತ್ರಜ್ಞಾನ –  ಮುಂದೊಂದು ದಿನ ಇತಿಹಾಸದ ಪುಟ ಸೇರಿ ನಗು ತರಿಸಬಹುದೇ? 

ಒಂದಿಷ್ಟು ದಶಕಗಳ ಹಿಂದಿನ ಸಿನಿಮಾಗಳತ್ತ ಹೋಗೋಣ. ವಿಲನ್ನು ಬಂದವನೇ ಹೀರೋನ ಅಥವಾ ಹೀರೋಯಿನ್ನಿನ ಮನೆಗೆ ಬರುತ್ತಾನೆ. ಆಗ ಹೀರೋ/ಹೀರೋಯಿನ್ನು ಪೊಲೀಸರಿಗೆ ಫೋನು ಮಾಡಲು ಲ್ಯಾಂಡ್ ಲೈನ್ ಫೋನಿನ (ಫೋನಿನ ವಿವಿಧ ಪ್ರಕಾರಗಳು ಬಂದಾದಮೇಲೆ ಫೋನಿನ ಹಿಂದಿನ ಈ ವಿಶೇಷಣ ಬಂತು) ರಿಸೀವರ್ ಕೈಗೆತ್ತಿಕೊಳ್ಳುತ್ತಾನೆ/ಳೆ. ವಿಲನ್ನು ಟೆಲಿಫೋನಿನ ವಯರ್ ಕತ್ತರಿಸುತ್ತಾನೆ. ಆ ವಯರ್ ನಿಂದಲೇ ಕುತ್ತಿಗೆಗೆ ಬಿಗಿಯುತ್ತಾನೆ. ಈಗಿನ ವೈರ್ ಲೆಸ್ ಯುಗದಲ್ಲಿ ಟೆಲಿಫೋನಿಗೆ ವಯರ್‌ಗಳೂ ಇಲ್ಲ. ಕತ್ತರಿಸುವಂತೆಯೂ ಇಲ್ಲ. ಇನ್ನು ಮುಂದಿನ ಸಿನಿಮಾಗಳಲ್ಲಿ ಮೊಬೈಲ್ ಜಾಮರ್ ತಂದು ವಿಲನ್ ಹೀರೋಯಿನ್ನು, ಹೀರೋಗಳನ್ನ ಕೊಲ್ಲಬೇಕು..! ಓದನ್ನು ಮುಂದುವರೆಸಿ

ಪತ್ರಕರ್ತ ಗೆಳೆಯರಿಗೆ ತಂತ್ರಜ್ಞಾನದ ಬರಹ/ವರದಿ ಬರೆವ ಬಗ್ಗೆ ಒಂದು ಚಿಕ್ಕ ಮನವಿ.

ಪತ್ರಕರ್ತ ಗೆಳೆಯರಿಗೆ ತಂತ್ರಜ್ಞಾನದ ಬರಹ/ವರದಿ ಬರೆವ ಬಗ್ಗೆ ಒಂದು ಚಿಕ್ಕ ಮನವಿ.
ಕಂಡುಹಿಡಿದಿದ್ದಾರೆ ಮತ್ತು ಅಭಿವೃದ್ಧಿಪಡಿಸಿದ್ದಾರೆ ಎಂಬ ಎರಡು ಶಬ್ಧಗಳಲ್ಲಿ ವ್ಯತ್ಯಾಸವಿದೆ. ಬಳಸುವಾಗ ನಿಗಾ ವಹಿಸಿ.
ಎರಡು ಕ್ರಿಯಾಪದಗಳಿವೆ.
ಮೊದಲನೆಯದು – ಕಂಡುಹಿಡಿದಿದ್ದಾರೆ.
ಎರಡನೆಯದು – ಅಭಿವೃದ್ಧಿಪಡಿಸಿದ್ದಾರೆ.

ಮೊದಲನೆಯದು ವಿಜ್ಞಾನಕ್ಕೆ ಸಂಬಂಧಪಟ್ಟಿದ್ದು.
ಉದಾ೧: ಅತಿ ಕಡಿಮೆ ವೋಲ್ಟೇಜ್ ಬಳಸಿ, ಹೆಚ್ಚು ಹೊತ್ತು ಬರುವ, ಹೆಚ್ಚು ಬೆಳಕು ಹೊರಸೂಸುವ ಎಲ್.ಇ.ಡಿ. ಗಳನ್ನು “ಕಂಡುಹಿಡಿಯಲಾಗಿದೆ”.
ಉದಾ೨: ಮಿಗ್ ೨೧ ವಿಮಾನ ವೈಫಲ್ಯದ ಕಾರಣಗಳನ್ನ “ಕಂಡುಹಿಡಿಯಲಾಗಿದೆ”

ಎರಡನೆಯದು ತಂತ್ರಜ್ಞಾನಕ್ಕೆ ಸಂಬಂಧಿಸಿದ್ದು.
ಉದಾ೧: ಮನೆಯನ್ನ ಬೀಗ ಹಾಕಿ ಪರವೂರಿಗೆ ಹೋದಾಗ ಕಳ್ಳರು ಬಂದಾಗ ಪೊಲೀಸರಿಗೆ ಮಾಹಿತಿ ರವಾನಿಸುವ ವ್ಯವಸ್ಥೆಯನ್ನ “ಅಭಿವೃದ್ಧಿಪಡಿಸಲಾಗಿದೆ”.
ಉದಾ೨: ಅಡಿಕೆ ಮರ ಹತ್ತಿ ಅಡಿಕೆ ಕೀಳುವ ಹೊಸ ರೋಬೋಟನ್ನು “ಅಭಿವೃದ್ಧಿಪಡಿಸಲಾಗಿದೆ”.

ಇದನ್ನೆಲ್ಲ ಯಾಕೆ ಹೇಳಬೇಕಾಗಿ ಬಂದಿತೆಂದರೆ, ಮೊನ್ನೆ ಮೊನ್ನೆ ಒಂದು ರಾಜ್ಯಮಟ್ಟದ ಪತ್ರಿಕೆಯಲ್ಲಿ ಸೇನೆಯಲ್ಲಿ ಬಳಸಬಹುದಾದ ಬಹೋಪಯೋಗಿ ರೋಬೋಟನ್ನು ಎಂಜಿನಿಯರಿಂಗ್ ವಿದ್ಯಾರ್ಥಿಗಳು “ಕಂಡುಹಿಡಿದಿದ್ದಾರೆ” ಅಂತಾ ಬಂದಿತ್ತು.

ವಿಜ್ಞಾನವು ಮೂಲವಾದುದ್ದು ಮತ್ತು ತತ್ವಗಳನ್ನು, ನಿಯಮಗಳನ್ನು ಹೇಳುವಂಥದ್ದು. ವಸ್ತುಗಳ ವರ್ತನೆಯನ್ನ ನಿಯಮೀಕರಿಸುವುದು.
ತಂತ್ರಜ್ಞಾನವು ವಿಜ್ಞಾನದ ಅತ್ಯಂತ ಕಡಿಮೆ ತತ್ವಗಳನ್ನ ಬಳಸಿ, ಜನೋಪಯೋಗಿ ಸಾಧನಗಳನ್ನ ತಯಾರಿಸುವುದು. ಸಮಸ್ಯೆಗಳಿಗೆ ಪರಿಹಾರ ಸೂಚಿಸುವುದು.