‘ಮೊಗ್ಗಿನ ಮನಸು’ – ಫಸ್ಟ್ ಹಾಫ್ ತಗಡು; ಸೆಕೆಂಡ್ ಹಾಫ್‍ನಲ್ಲಿ “ಸ್ವಲ್ಪ” ಸೊಗಡು. – ಚಿತ್ರದ ಒನ್ ಲೈನ್ ವಿಮರ್ಶೆ..!

–  ಗಣೇಶ್.ಕೆ , 2ganesh@gmail.com

moggina manasu

moggina manasu

  ಫಸ್ಟ್ ಹಾಫ್ ತಗಡು; ಸೆಕೆಂಡ್ ಹಾಫ್‍ನಲ್ಲಿ “ಸ್ವಲ್ಪ” ಸೊಗಡು. – ‘ಮೊಗ್ಗಿನ ಮನಸು’ ಚಿತ್ರದ ಒನ್ ಲೈನ್ ವಿಮರ್ಶೆ..! 
 
   

    ಇದು ‘ಮೊಗ್ಗಿನ ಮನಸು’ ಚಿತ್ರದ ಒನ್ ಲೈನ್ ವಿಮರ್ಶೆ..! ಸೆನ್ಸಾರ್ ಮಂಡಳಿಯವರು ‘ಎ’ ಸರ್ಟಿಫಿಕೇಟು ಕೊಟ್ಟಿದ್ದ್ರು, ಅಪ್ರಬುದ್ಧರ ಪ್ರೇಮ ಅಪ್ರಾಪ್ತ ವಯಸ್ಕರ ಮೇಲೆ ಹಾನಿಕಾರಕ ಪರಿಣಾಮ ಬೀರಬಹುದೆಂದು. ದೆಹಲಿ ಟ್ರಿಬ್ಯೂನಲ್ ನಲ್ಲಿ ಅನುಮತಿ ಪಡೆದುಕೊಂಡು ‘ಯು/ಎ’  ಸರ್ಟಿಫಿಕೇಟಿನೊಂದಿಗೆ ಪ್ರದರ್ಶಿತವಾಗುತ್ತಿದೆ. ‘ಎ’ ಅಂತಾ ಕೊಟ್ಟಿದ್ದರಿಂದ ಪಡ್ಡೆ ಹುಡುಗರಲ್ಲಿ ಅತಿ ಕುತೂಹಲವಿತ್ತು..! ಸೆನ್ಸಾರ್ ಮಂಡಳಿಯವರು ಮೊದಲಾರ್ಧ ಕತ್ತರಿಸಿ ಒಗೆದಿದ್ದರೂ ಏನೂ ಪರಿಣಾಮ ಬೀರುತ್ತಿರಲಿಲ್ಲ. ಹಾಗಾದ್ರೂ ಪ್ರೇಕ್ಷಕರ ಅಮೂಲ್ಯ ಸಮಯ ಉಳಿಸಬಹುದಿತ್ತು. ಎಚ್ಚರಿಕೆ ಈ ಚಿತ್ರ ವೀಕ್ಷಿಸುವುದರಿಂದ ಹುಡುಗರ ಹೃದಯಕ್ಕೆ ಆಘಾತವಗಬಹುದು ಅಂತಾ ಪಂಚ್ ಲೈನ್ ಸರಿಯೆನಿಸುತ್ತೆ. ಯಾಕಂದ್ರೆ, ಮೊದಲರ್ಧ ಹುಡುಗರಿಗಲ್ಲ. ದ್ವಿತೀಯಾರ್ಧ ಗೋಳೋ ಎನ್ನುವ ಹುಡುಗಿಯರಿಗೆ. ಹಾಗಾಗಿ ದುಡ್ಡು ಇಸಗೊಂಡು ತಮ್ಮದಲ್ಲದ ಸಿನಿಮಾ ತೋರಿಸಿದರೆ ಹುಡುಗರಿಗೆ ಆಘಾತವಾಗದೇ ಇರುತ್ತಾ..??!! 

 
    ನಾಲ್ವರು ಹುಡುಗಿಯರಿಗೆ ಬಾಯ್ ಫ್ರೆಂಡ್‍ಗಳನ್ನ ಹುಡುಕಿಕೊಳ್ಳುವ ಬಯಕೆಯಾಗುತ್ತದೆ,

Moggina Manasu actresses

Moggina Manasu actresses

ಅನಿವಾರ್ಯವಾಗುತ್ತದೆ. ನಂತರ ದ್ವಿತೀಯಾರ್ಧದಲ್ಲಿ ಒಬ್ಬಾಕೆ ಆತ್ಮಹತ್ಯೆಮಾಡಿಕೊಳ್ಳುತ್ತಾಳೆ, ಉಳಿದವರಿಗೂ ಕಹಿ ಅನುಭವಗಳಾಗುತ್ತವೆ, ಒಬ್ಬಾಕೆ ಎಲ್ಲದರಿಂದ ತಟಸ್ಥಳಾಗಿಬಿಡುತ್ತಾಳೆ. ಆದರೆ, ನಿರ್ದೇಶಕ ಶಶಾಂಕ್ ಬಾಯ್ ಫ್ರೆಂಡ್‍ಮಾಡಿಕೊಳ್ಳುವ ಅವಶ್ಯಕತೆಯನ್ನ ತೋರಿಸಬೇಕಿತ್ತು. ಹಾಗಾಗಿ ಕಥೆ ಕಥೆಯೆನಿಸದೆ ಜಾಳು ಜಾಳಾಗಿ ಕಾಣುತ್ತದೆ. ಕೊನೆಯಲ್ಲಿ ಕಥೆ ಫ್ಲಾಷ್ ಬ್ಯಾಕ್‍ಗೆ ಹೋಗುವ ಸಂದರ್ಭ ಚೆನ್ನಾಗಿದೆ. ಆದರೆ, ಒಟ್ಟಾರೆಯಾಗಿ ಹೇಳುವುದಾದರೆ, ಸಿನಿಮಾ ಪರಿಣಾಮಕಾರಿಯಾಗಿ ಬರಬಹುದಿತ್ತು.

 

Radhika Pandit ರಾಧಿಕಾ ಪಂಡಿತ್

Radhika Pandit ರಾಧಿಕಾ ಪಂಡಿತ್

 ಇನ್ನು ನಟನೆ ವಿಷಯಕ್ಕೆ ಬಂದರೆ ರಾಧಿಕಾ ಪಂಡಿತ್ ಉತ್ತಮ. ಶುಭಾ ಪೂಂಜಾಗೆ ಅದರ ಗಂಧ ಗಾಳಿ ಗೊತ್ತಿಲ್ಲ. ಇನ್ನುಳಿದವರು ಅಷ್ಟಕಷ್ಟೇ. ರಾಧಿಕಾ ಪಂಡಿತ್ ಮತ್ತು ಶುಭಾ ಪೂಂಜಾ ಸಿನಿಮಾ ಪೋಸ್ಟರ್‍ಗಳಲ್ಲಿ ಕಾಣಿಸಿಕೊಂಡರೂ ಶುಭಾ ಪೂಂಜಾ ಪರಿಣಾಮಕಾರಿಯಲ್ಲ. ಉಳಿದ ನಾಲ್ಕು ಜನ ಬಾಯ್ ಫ್ರೆಂಡ್‍ಗಳ ಪೈಕಿ ಮೂವರ ಅಭಿನಯ ಅಷ್ಟಕಷ್ಟೇ. ಅದರೆ, ‘ಪ್ರೀತಿ ಇಲ್ಲದ ಮೇಲೆ’ ಧಾರಾವಾಹಿಯ ‘ಯಶ್’ ಚೆನ್ನಾಗಿ ಅಭಿನಯಿಸಿದ್ದಾನೆ. ರಾಧಿಕಾ ಪಂಡಿತ್ ಮತ್ತು ಯಶ್ ಇಬ್ಬರೇ ಸಿನಿಮಾದ ಹೈಲೈಟ್ ಆಗಿ ಚಿತ್ರಿಸಲಾಗಿದೆ. ಉಳಿದ ಪಾತ್ರ ಕಾಲಾವಕಾಶದ ಕೊರತೆಯಿಂದಲೋ, ಸಮರ್ಥ ನಿರ್ದೇಶನದ ಕೊರತೆಯಿಂದಲೋ ಪರಿಣಾಮಕಾರಿಯಾಗಿ ಮೂಡಿಬಂದಿಲ್ಲ.

 

 ಮನೋ ಮೂರ್ತಿ ಸಂಗೀತ ಸೂಪರ್. ಕೆಮ್ಮಂಗೇ ಇಲ್ಲ. ಮುಂಗಾರು ಮಳೆ ಕೃಷ್ಣಪ್ಪನವರು ಇನ್ನೊಂದು ಮುಂಗಾರು ಮಳೆಯ ಕನಸು ಒಂದಿಷ್ಟು ನನಸಾಗಿದ್ದರೂ ಅದು ಮನೋಮೂರ್ತಿಯವರಿಂದ. ಕ್ಯಾಮರಾ ವರ್ಕ್ ಚೆನ್ನಾಗಿದೆ. ಲೊಕೋಷನ್ ಸೆಲೆಕ್ಷನ್ ಚೆನ್ನಾಗಿದೆ. ಇನ್ನಷ್ಟು ಅನಗತ್ಯ ದೃಷ್ಯಗಳಿಗೆ ಕತ್ತರಿ ಹಾಕಿ, ಪರಿಣಾಮಕಾರಿ ಅಭಿನಯ ತೆಗೆಸಿದ್ದರೆ, ಹಾಡುಗಳನ್ನ ಅನಗತ್ಯವಾಗಿ ಸೇರಿಸದಿದ್ದರೆ ಚಿತ್ರ ಚೆನ್ನಾಗಿ ಬರಬಹುದಿತ್ತು.

     Anyway good luck Shashank.