ಧಾರವಾಡದ ಸಾಹಿತ್ಯ ಸಂಭ್ರಮ: ಸ್ವರಚಿತ ಕಾವ್ಯ ವಾಚನಕ್ಕೆ ಜನರೇ ಇಲ್ಲ..!

Dharawad sahitya sambhramaಮುಂದಿನ ಕಾರ್ಯಕ್ರಮ ಸ್ವರಚಿತ ಕಾವ್ಯ ವಾಚನ ಅಂತಾ ಪ್ರಕಟಣೆ ಹೊರಬಿದ್ದ ತಕ್ಷಣವೇ ತುಂಬಾ ಜನ ಸೀಟು ಖಾಲಿ ಮಾಡಿದರು. ಸ್ವರಚಿತ ಕಾವ್ಯ ವಾಚನ ಅನ್ನೋದು ವಾಕರಿಕೆಯ ಸಂಗತಿ ಆಗಿದೆಯಾ? ಪ್ರಶ್ನೆಗಳು ಮೂಡುತ್ತಿವೆ. ವಿಷ್ಣು ಶರ್ಮರವರ ಕವಿತೆ ಮನಮಿಡಿಯಿತು, ಚಪ್ಪಾಳೆ ಗಿಟ್ಟಿಸಿತು. ಬೋರು ಹೊಡಿಸಿದ್ದು ಮಾಲತಿ ಪಟ್ಟಣಶೆಟ್ಟಿಯವರದೇ. ಪಟ್ಟಣಶೆಟ್ಟಿ ಜನ ಸೇರಿದ್ದು ನೋಡಿ ಭಾಷಣ ಸುರು ಹಚ್ಚಿದರು. ಯಾರಿಗೂ ಭಾಷಣ ಕೇಳುವ ಮನಸ್ಥಿತಿ ಇರಲಿಲ್ಲ. ಇಡೀ ಧಾರವಾಡ ಸಾಹಿತ್ಯ ಸಂಭ್ರಮ ಭಾಷಣಗಳಿಂದ, ರಾಜಕಾರಣಿಗಳಿಂದ ದೂರವೇ ಉಳಿದಿದ್ದರಿಂದ ಮಾಲತಿಯವರು ನೇರವಾಗಿ ಕವಿತೆ ಓದಿದ್ದರೆ ಸಾಕಿತ್ತು. ವೆಂಕಟೇಶಮೂರ್ತಿಯವರು ನಮ್ಮ ಕವಿತೆಗಳನ್ನ ನಾವೇ ಓದಬೇಕೇಕೆ ಅಂತಾ ಪ್ರಶ್ನೆಯನ್ನ ಕೇಳಿದ್ದು ಹೊಸ ಸಾಧ್ಯತೆಗಳನ್ನ ಹುಡುಕಲಿಕ್ಕೆ ದಾರಿದೀಪವಾಗಬಹುದು. ಎರಡನೇ ದಿನ ರಾತ್ರಿ ವಿಮರ್ಶಕ ಎಸ್.ದಿವಾಕರ್ ಅವರೊಟ್ಟಿಗೆ ಮಾತನಾಡಬೇಕಾದರೆ ಅವರು ಜನರಿಗೆ ಪದ್ಯ ಓದುವುದನ್ನ ಕಲಿಸಬೇಕು. ಬೇಂದ್ರೆಯನ್ನ ಕವಿಗಳಷ್ಟೇ ಅಲ್ಲ ಓದಬೇಕಾಗಿರೋದು. ಸಾಮಾನ್ಯ ಜನ. ತಾವು ಯವನಿಕಾದಲ್ಲಿ ಬೇಂದ್ರೆ ಕಾವ್ಯ ವಾಚನ ಕಾರ್ಯಕ್ರಮ ಏರ್ಪಡಿಸಿದ್ದನ್ನ, ಖ್ಯಾತ ಕ್ರಿಕೆಟ್ ಪಟುಗಳು ಬೇಂದ್ರೆ ಕಾವ್ಯ ವಾಚಿಸಿದ್ದನ್ನ ಹೇಳಿದರು. ಹಾಗಾಗಿ ನನಗೆ ಅನ್ನಿಸಿದ್ದು ಜನರಿಂದ ಕಾವ್ಯ ಓದಿಸುವ ಕೆಲಸವಾಗಬೇಕು. ಈ interaction ಇಲ್ಲದ್ದರಿಂದಲೇ, ಸಹಭಾಗಿತ್ವವಿಲ್ಲದ್ದರಿಂದಲೇ ಸ್ವರಚಿತ ಕಾವ್ಯ ವಾಚನಗಳು ಕರ್ಣ ಕಠೋರವಾಗುತ್ತಿವೆ.