ಎರಡು ಭಯಾನಕ ಐಡಿಯಾಗಳು. ಗೆಳೆಯ Lokesha ಹೇಳಿದ್ದು. ಇದನ್ನ ಅವರ ಊರವರು ಮಾಡ್ತಾರಂತೆ.
೧. ಕೆಂಪಗೆ ಬಾಯಲ್ಲಿರೋ ಜರ್ದಾ, ಪಾನನ್ನ ಸೀಟಿನ ಮೇಲೆ ಉಗಿದು ಹೋಗಿ. ಯಾವನೂ ಒರೆಸಿ ಕುಂತುಕೊಳ್ಳೋ ಯೋಚನೆ ಮಾಡಲ್ಲ. ನೀವು ಟವಲ್ ನಿಂದ ಒರೆಸೋ ವರೆಗೂ ಸೀಟ್ ನಿಮ್ಮದೇ.
೨. ಧೂಳು ಹಿಡಿದಿರೋ, ಕಸ ಕಡ್ಡಿ, ಕೆಸರು, ಮತ್ತಿನ್ನೇನೋ ಹತ್ತಿರೋ ಚಪ್ಪಲಿಗಳನ್ನ ನಿಮ್ಮ ಸೀಟಿನ ಮೇಲಿಡಿ. ನೀವ್ ಬರೋವರ್ಗೂ ಯಾವನಾರ ಮುಟ್ಟಿದ್ರೆ ಕೇಳಿ..! 🙂
Tag Archives: ಸ್ವಾರಸ್ಯ
‘ಕಾಳ್’ ಮಿ – ಇದು Virginal ವೃತ್ತಾಂತ..!
ಇತ್ತೀಚೆಗೆ ಭಾರತಕ್ಕೆ ಬಂದ ಹೊಸ ನೆಟ್‍ವರ್ಕ್ Virgin mobile ಎಲ್ಲ ಬಸ್‍ಸ್ಟ್ಯಾಂಡು, ಗೋಡೆ, ಪರದೆ, ಎಲ್ಲವುಗಳ ಮೇಲೆ ತನ್ನ ಆಗಮನದ ಮಾಹಿತಿಯನ್ನ, ಜಾಹೀರಾತನ್ನ ಹಾಕಿದೆ. ಈ ಬರಹದ ಜೊತೆ ಅದನ್ನೂ ಮೇಲೆ ಲಗತ್ತಿಸಿದ್ದೇನೆ. ಅದರಲ್ಲಿ ಕಾಲೇಜಿಗೆ ಹೋಗೋ ಥರ ಇರೋ ‘Virgin ಯುವತಿ’ ಪುಸ್ತಕಗಳನ್ನ(ಕಾಲೇಜಿನವು ಅಂದುಕೊಳ್ಳಬಹುದು) ಮಡಿಚಿದ ಸ್ಟೈಲಿಷ್ ಕೈಯ್ಯಲ್ಲಿ ಹಿಡಿದಿದ್ದಾಳೆ. ಇನ್ನೊಂದು ಕೈ ವರ್ಣಿಸೋಣ ಅಂದರೆ, ಅದು ಮೊಣಕೈವರೆಗೆ ಅಷ್ಟೇ ಇರೋದು. ಹಾಗಾಗಿ ಚಾನ್ಸ್ ಇಲ್ಲ..! ಈಗ ‘ನೇರವಾಗಿ’ ವಿಷಯಕ್ಕೆ ಬರೋಣ. ಈ ಮೊಬೈಲ್ ನೆಟ್‍ವರ್ಕನ್ನ ಪ್ರಮೋಟ್ ಮಾಡಲಿಕ್ಕೆ ಆಕೆ ಫೋನ್ ಮಾಡಲಿಕ್ಕೆ ಹೇಳಬೇಕಲ್ಲ ಈ ಜಾಹೀರಾತು ನೋಡಿದವರಿಗೆ..? ಫೋನ್ ನಂಬರ್ರು ಆಕೆ ಧರಿಸಿದ ಟೀ ಶರ್ಟ್ ಮೇಲಿದೆ. ಎಲ್ಲರೂ ಇಲ್ಲಿಗೆ ಫೋನಾಯಿಸಿ ಅಂತಾ Editorial(‘ಎದಿತೋರಿಯಲ್’..!??) ಬರೆದುಕೊಂಡಿದ್ದಾಳೆ. ಹುಡುಗರು ಜಾಹೀರಾತಲ್ಲಿ ಹುಡುಗಿ ಚಿತ್ರ ಹಾಕಿದ್ರೆ, ಮೊದಲು ಮುಖ ನೋಡ್ತಾರೋ ಇಲ್ವೋ ಆದ್ರೆ ಎಲ್ಲಿ ನೋಡ್ತಾರೋ ಅಲ್ಲಿನೇ ಫೋನ್ ನಂ. ಹಾಕಿದ್ದಾರೆ. ಇದೇ ಅಲ್ವಾ ಬಿಸಿನೆಸ್ಸು ಅಂದ್ರೆ..??
ಅಲ್ಲಿಗೆ ಹುಡುಗರನ್ನ ಸೆಳೆದಿದ್ದಾಯಿತು. ಇನ್ನ ಹುಡುಗಿಯರಿಗೆ ಈ ಹೆಸರೇ ಆಪ್ಯಾಯಮಾನವಾಗಿರುವಂತೆ ಇಟ್ಟಿದ್ದಾರೆ. ಹುಡುಗಿಯರಿಗೆ Virgin ಅಂದ್ರೆ ಏನೋ ಹೆಮ್ಮೆ, ಗೌರವ, ಆತ್ಮಾಭಿಮಾನ, ಇಲ್ಲಿಯವರೆಗೂ ಅಖಂಡ ಬ್ರಹ್ಮಚರ್ಯ(ಇಲ್ಲಿ ಬ್ರಹ್ಮನೇ ಯಾಕೆ..? ಸ್ತ್ರೀಲಿಂಗ ಇಲ್ವಾ?) ಪಾಲಿಸಿದ್ದರ ಧ್ಯೋತಕವಾದ virginal ಹೆಸರು. ಅಲ್ಲಿಗೆ ಹುಡುಗಿಯರಿಗೂ ಪ್ರೀತಿಪಾತ್ರವಾದ ಮೊಬೈಲಾಗುವ ಸಕಲ ಅರ್ಹತೆಗಳನ್ನೂ ಪಡೆದುಕೊಂಡಂತಾಯಿತು. ತಮಗೆ ‘Virgin ಹುಡುಗಿಯರೇ’ ಬೇಕೆಂದು ಬಯಸುವ ಹುಡುಗರಿಗೆ ಆಕಾಶಕ್ಕೆ ಒಂದು ನ್ಯಾನೋಮೀಟರ್ ಉಳೀತು ಅಷ್ಟೇ. ಇಬ್ಬಂದಿತನವೆಂದರೆ, Virginity is not a dignity. Its a loss of opportunity ಅಂತಾ ಛೇಡಿಸುವ ಹುಡುಗರೂ ‘ಕನ್ಯೆ’ಯರನ್ನೇ ಮದುವೆಯಾಗಬಯಸುತ್ತಾರೆ..!
ಸಾಮಾನ್ಯವಾಗಿ ಹುಡುಗರು ಹುಡುಗಿಯರಿಗೆ* ಫೋನಾಯಿಸುತ್ತಾರೆ. ತಮ್ಮ ಪ್ರಿಯತಮೆಯಾಗಿರಬಹುದು, ಗೆಳತಿಯಾಗಿರಬಹುದು, ಜತೆಗಾರ್ತಿಯಾಗಿರಬಹುದು ಅಥವಾ ಸಂಗಾತಿಯಾಗಿರಬಹುದು. ಗಮನಿಸತಕ್ಕ ಅಂಶವೆಂದರೆ, ಹುಡುಗರು ಹುಡುಗಿಯರಿಗೆ call ಮಾಡುವುದು ಹುಡುಗಿಯರು ಹುಡುಗರಿಗೆ ಫೋನಾಯಿಸುವುದಕ್ಕಿಂತ ಜಾಸ್ತಿ. ‘ಮೀಟರ್’ ಹಾಗಾಗಿ ಜಾಸ್ತಿ ಆಗ್ತಿರ್ತದೆ. ಇದನ್ನೇ ಗಮನಿಸಿ, ಮೊಬೈಲ್ ಕಂಪನಿಯವರು ತಾರುಣ್ಯಭರಿತ ಯುವತಿಯ ಜಾಹೀರಾತು ಹಾಕಿದ್ದಾರೆ. ಎಷ್ಟೇ ಆಗಲಿ ಅನ್ಯಲಿಂಗ ಆಕರ್ಷಣೆ ಇಲ್ಲದಿರುತ್ತದೆಯೇ? ಹುಡುಗರಂತೂ ಬಲೆಗೆ ಬೀಳ್ತಾರೆ ಅಂತಾ ಗೊತ್ತು. ಸ್ತ್ರೀ ದ್ವೇಷಿಗಳು, I mean ಒಬ್ಬ ಹುಡುಗಿಯನ್ನ ಕಂಡರೆ ಮತ್ತೊಬ್ಬ ಹುಡುಗಿಗಾಗುವುದಿಲ್ಲವಲ್ಲ ಅವರು, ಈ ಮೊಬೈಲನ್ನ ಖರೀದಿಸದೇ ಹೋಗಬಹುದು. ಇಲ್ಲಿ ಇನ್ನೊಂದು possibility ಇದೆ. ತಮಗೆ ‘Virgin’ ಹುಡುಗಿ ಬೇಕೆಂದು ಹಟ ಹಿಡಿಯುವ ಹುಡುಗರು, ತಮ್ಮ ಹುಡುಗಿಗೇ ಈ ಮೊಬೈಲನ್ನ ಕೊಡಿಸಿ virgin ಆಗಿಸಬಹುದು. ಮೊಬೈಲನ್ನ ಕೊಡಿಸಲು ಇನ್ನೊಂದು ಕಾರಣವೂ ಇದೆ. ಈ virgin mobile ಗೆ ಬರುವ ಒಳಬರುವ ಕರೆಗಳಿಗೆ ನಿಮಿಷಕ್ಕೆ 10ಪೈಸೆ ಬರುತ್ತದೆ. ಹಾಗಾಗಿ ಗಂಟೆಗಟ್ಟಲೇ ಮೀಟರ್ ಹೊಡೆದು ತಮ್ಮ ದುಡ್ಡು ಖರ್ಚು ಮಾಡಿಕೊಂಡು, ಪ್ರಣಯ ಸಲ್ಲಾಪ ನೆಡೆಸುವ ಯುವಕರು, ತಮ್ಮ incoming call ನಿಂದಾದರೂ ತಮ್ಮ ಹುಡುಗಿಯ ಮೊಬೈಲಿಗೆ ಹಣಸಂದಾಯವಾಗಲೆಂಬ ಮಹದಾಸೆ..! ಯಾಕಂದ್ರೆ, ಬಹಳ ಸಲ, ತಾವೇ ಕರೆನ್ಸಿ ಹಾಕಿಸಿಕೊಡಬೇಕಲ್ಲ..!!
(* conditions apply ಹುಡುಗಿಯರು ಗೊತ್ತಿದ್ದರೆ).
ಉಳಿದೆಲ್ಲ ನೆಟ್‍ವರ್ಕ್‍ಗಳಿಗೆ ಕನ್ನಡೀಕರಣ ಮಾಡಿದ ಹೆಸರುಗಳಿವೆ
Airtel – ಗಾಳಿದೂರವಾಣಿ
Spice – ಮಸಾಲೆ ದೂರವಾಣಿ
Vodaphone – ವಡೆ ದೂರವಾಣಿ
ಇಲ್ಲಿ ಗಂಭೀರ ಸಮಸ್ಯೆ ಎದುರಾಗಿರೋದು ಸದರಿ ಫೋನಿನ ಕನ್ನಡೀಕರಣದ್ದು. ಹಾಗಾಗಿ, ಎಲ್ಲ ಅಂತರ್ಜಾಲ ಕನ್ನಡಿಗರು, ಬ್ಲಾಗಮಂಡಲಾಧಿಪತಿಗಳು, ಕನ್ನಡ ‘ಪ್ರೇಮಿಗಳು’ ಇರುವ ಗಂಭೀರ ಚರ್ಚೆಗಳನ್ನೆಲ್ಲಾ ಇರುವಲ್ಲಿಯೇ ಬಿಟ್ಟು ಬರಬೇಕಿದೆ. ಇದಕ್ಕೆ ‘ಕನ್ಯಾ ದೂರವಾಣಿ’ ಎಂದು ಹೆಸರಿಸಬೇಕೋ ಇಲ್ಲಾ ‘ಕನ್ಯತ್ವ ದೂರವಾಣಿ’ ಅನ್ನಬೇಕೋ ತಿಳಿಯದಾಗಿದೆ. ಯಾಕೆಂದರೆ ಇದೊಂದು ರೀತಿ ಅನನ್ಯತೆ ಹೊಂದಿದೆ. ಹಾಗಾಗಿ ಕನ್ಯಾನನ್ಯ ದೂರವಾಣಿ ಎಂದು ನಾಮಕರಣ ಮಾಡಬಹುದೇನೋ ಎಂಬ ಬಗ್ಗೆ ಅನುಮಾನವಿದೆ. ಓದುಗರು suggest ಮಾಡಿದರೆ ಒಳ್ಳೇದು.
ಇಲ್ಲಿ ಇನ್ನೊಂದು ಸ್ವಾರಸ್ಯಕರ ಸಂಗತಿ ಇದೆ. Call me 09250362436 ಅಂತಾ ಎದೆಯ ಮೇಲೆ ಧರಿಸಿರುವ ಯುವತಿ, ಅಖಂಡ ಬ್ರಹ್ಮಚಾರಿಣಿ, ಕನ್ಯತ್ವ ಪರಿಭಾಷಿಣಿ ಹೀಗೆ ಒಮ್ಮಿಂದೊಮ್ಮೆಲೇ ‘ಕಾಳ್ ಮಿ’ ಎಂದರೆ ತುಂಟ ಹುಡುಗರು ‘ಕಾಳು ಹಾಕುವುದಕ್ಕೆ’ ಸಕಲ ತಯಾರಿ ಮಾಡಿಕೊಳ್ಳಲು ತಲೆ ಕೆರೆದುಕೊಳ್ಳುವಂತೆ ಮಾಡಿದ್ದೇಕೆ?