ಮಂಗಳೂರು ಮಂದಿ ಜೋಡಿ ಮಾತಾಡಕ್ ಒಂದು ಅಲ್ಗಾರಿದಂ :-)

ಭಾಳ್ ಮಂದಿ ಮಾತಾಡೂ ಮುಂದ Be specific, be specific ಅಂತಾರೆ. ಅದ್ರೆ, ಮಂಗ್ಳೂರ್ ಮಂದೀ ಜೋಡಿ ಮಾತಾಡು ಮುಂದ Don’t be specific 🙂 Be general..!

algorithm to talk with Mangalorians

ಒಂದು ಕ್ಯಾಂಟೀನ್.
“ವಿಜಯಕರ್ನಾಟಕ, ವಿಜಯವಾಣಿ, ಪ್ರಜಾವಾಣಿ  ಇದೆಯಾ?”
“ಇಲ್ಲ”
“ನ್ಯೂಸ್ ಪೇಪರ್ ಇದೆಯಾ? ”
“ಇಲ್ಲ.”
“ಊಟ ಇದೆಯಾ?”
“ಇಲ್ಲ”

ಎಲ್ಲ ಪ್ರಶ್ನೆಗಳಿಗೂ binary answer 🙂

ಅದೇ ನಮ್ ಉತ್ತರ ಕರ್ನಾಟಕದ ಮಂದೀ ಜೋಡಿ ಮಾತಾಡಿ ಅಂಗಡಿಯಾಗ್ ಪೇಪರ್ ಯಾವ್ದೈತಿ ಅಂತ ಕೇಳಿದ್ರೆ, ಇಡೀ ಬ್ರಹ್ಮಾಂಡದಾಗ್ ಇರೋ ಸುದ್ದೀನೆಲ್ಲಾ ಯಾವ ಸುದ್ದೀ ಚಾನೆಲ್ಗಿಂತನೂ ಕಡ್ಮಿ ಇಲ್ದಂಗ್ ಹೇಳ್ತಾರೆ..!

ಹಂಗಾದ್ರೆ, ಮಂಗಳೂರ್ ಮಂದಿ ಜೋಡಿ ಹೆಂಗ್ ಮಾತಾಡ್ಬೇಕು?
ನ್ಯೂಸ್ ಪೇಪರ್ ಬೇಕಾ ನಿಮಗೆ?
ಸರ್ ನೀವು ಪೇಪರ್ ತರಿಸ್ತೀರಾ? ಅಂತಾ ಕೇಳಬೇಕು. ಹೌದು ಅಂತಾ ಉತ್ತರ ಬಂದ್ರೆ, ಯಾವುದಿದೆ ಅಂತಾ ಕೇಳಿ. ಲಿಸ್ಟ್ ಹೇಳ್ತಾರೆ. ಬೇಕಾಗಿರೋದು ತೊಗೋರಿ.
ಹಸಿವಾಗಿದೆಯಾ?
ಸರ್, ತಿನ್ನೋಕ್ ಏನೇನಿದೆ? ಅಂತಾ ಕೇಳಬೇಕು. ಅವರು ಲಿಸ್ಟ್ ಹೇಳಿದ ಮೇಲೆ, ನಿಮಗೆ ಬೇಕಾದ್ದನ್ನ ತೊಗೋರಿ.

ಹಿಂಗೇ ಒಂದು binary tree ತರಹದ ಅಲ್ಗಾರಿದಂ ಅಭಿವೃದ್ಧಿಪಡಿಸಿದರೆ ಹೇಗೆ? 🙂