ಈ ಸಾಫ್ಟ್‌ವೇರ್ ಎಂಜಿನಿಯರ್‌ಗಳು ಎಲ್ಲದಕ್ಕೂ ಆತ್ಮಹತ್ಯೆ ಮಾಡ್ಕತಾವಲ್ಲ?

 
ಈ ಸಾಫ್ಟ್‌ವೇರ್ ಎಂಜಿನಿಯರ್‌ಗಳು ಎಲ್ಲದಕ್ಕೂ ಆತ್ಮಹತ್ಯೆ ಮಾಡ್ಕತಾವಲ್ಲ. ಕೆಲ್ಸ ಸಿಗ್ಲಿಲ್ಲ ಅಂತಾ, ಕೆಲ್ಸದಿಂದ ತೆಗೆದರು ಅಂತಾ, ಹೇಣ್ತಿ ಬೈತಾಳೆ ಅಂತಾ, ಗಂಡ ಬೈತಾನೆ ಅಂತಾ, ಸಂಸಾರ ನಡ್ಸಕ್ ಆಗ್ತಿಲ್ಲ ಅಂತಾ. ಸಧ್ಯಕ್ಕಿರೋ ಅಪ್‌ಡೇಟ್ – ಮದ್ವೆ ಆಗಿಲ್ಲ ಅಂತಾ..!
 Bng Techie Narasimhan Chakravarthy Suicide In Mysore

ಚಿತ್ರ ಕೃಪೆ: ದಟ್ಸ್‌ಕನ್ನಡ.ಕಾಂ

ಒಂದು ರೀತಿಯಲ್ಲಿ ದುರಂತ. ಇನ್ನೊಂದು ರೀತಿಯಲ್ಲಿ ತಮಾಷೆ. ಇನ್ನೂ ಒಂದು ರೀತಿಯಲ್ಲಿ ನೋಡಿದರೆ ಪ್ರತಿಷ್ಠೆಯ ಪರಮಾವಧಿಯ ಪ್ರತೀಕ. ಒಂದು ಕಿರಾಣಿ ಅಂಗಡಿ ಇದೆ ಅಂದುಕೊಳ್ಳಿ. ಅಲ್ಲಿ ಒಬ್ಬ ಹುಡುಗ ಕೆಲಸಕ್ಕೆ ಇರ್ತಾನೆ. ಸರಿಯಾಗಿ ಕೆಲಸ ಮಾಡಲ್ಲ ಅಂತಲೋ, ಸೋಮಾರಿ ಅಂತಲೋ, ಜಾಸ್ತಿ ಮಾತಾಡ್ತಾನೆ ಅಂತಲೋ, ಸಿಟ್ಟು ಜಾಸ್ತಿ ಇದೆ ಅಂತಲೋ ಅವನನ್ನ ಅಂಗಡಿಯಿಂದ ಬಿಡಿಸಿದರೆ ಏನ್ ಮಾಡ್ತಾನೆ? ಹೊಸ ಕೆಲಸ ಹುಡುಕ್ತಾನೆ. ಕಿರಾಣಿ ಅಂಗಡಿಯಲ್ಲೇ ಕೆಲಸ ಸಿಗುತ್ತದೆ ಅಂತಾ ವಿಶ್ವಾಸವನ್ನೇನೂ ಆತ ಹೊಂದುವುದಿಲ್ಲ. ಬದುಕಲಿಕ್ಕೆ ಒಂದು ಕೆಲಸ ಬೇಕು ಅಷ್ಟೇ. ಅದೇ ಸಾಫ್ಟ್‌ವೇರ್ ಎಂಜಿನಿಯರ್ ಒಬ್ಬನನ್ನ ಕೆಲಸದಿಂದ ತೆಗೆದುಹಾಕಿ ನೋಡಿ. ಅದ್ಯಾಕೆ ಅಷ್ಟು ಡಿಪ್ರೆಷನ್ ಗೆ ಒಳಗಾಗುತ್ತಾರೆ? ಇದು ಕೀಳರಿಮೆಯ ಪ್ರತೀಕವಲ್ಲವೇ? ಸಾಫ್ಟ್‌ವೇರ್ ಅನ್ನೋದು ಪ್ರತಿಷ್ಟೆಯನ್ನ ಸೃಷ್ಟಿಸಿದೆ ಅಲ್ಲವೇ? ಆ ಪ್ರತಿಷ್ಟೆ ಎಂಬ ವರ್ತುಲದಿಂದ ಹೊರ ಬರಲಿಕ್ಕೆ ಆಗದಷ್ಟು ಅದರಲ್ಲಿ ಹೂತು ಹೋಗಿದ್ದಾರೆ. ಜಾವಾ, ಸಿ++, ಸ್ಯಾಪ್, ಡಾಟ್ ನೆಟ್ ಅಥವಾ ಇನ್ಯಾವುದೋ ಪ್ಲಾಟ್‌ಫಾರಂ‌ನಲ್ಲಿ ಕೆಲಸ ಮಾಡುತ್ತಿದ್ದರೆ ಅದೇ ಕೆಲಸ ಹುಡುಕುತ್ತಾರೆ. ಓಪನಿಂಗ್ಸ್ ಇಲ್ಲಾ ಅಂದರೆ ನಿರಾಶರಾಗುತ್ತಾರೆ. ಅಮೇರಿಕಾ ಬೈಯುತ್ತಾರೆ. ಗ್ಲೋಬಲ್ ಎಕಾನಮಿ ಬೈಯುತ್ತಾರೆ. ಅಂಗಡಿಯಲ್ಲಿರುವ ಹುಡುಗ ಹೊಸ ಕೆಲಸಕ್ಕೆ ಸೇರಿದ. ಸಾಫ್ಟ್‌ವೇರ್ ಎಂಜಿನಿಯರು ನೇಣಿನ ಹಗ್ಗ ಸೇರಿದ..!

ಫೇಸ್ ಬುಕ್ಕಿನಲ್ಲಿ ಬರೆದ ಈ ಸ್ಟೇಟಸ್ ಬರಹಕ್ಕೆ ಬಂದ ಪ್ರತಿಕ್ರಿಯೆಗಳನ್ನ ಇಲ್ಲಿ ನೀಡಿದ್ದೇನೆ. ನಿಮಗೇನು ಅನ್ನಿಸುತ್ತದೆ?

  • Prabhu Raj Harakangi dudidiro duddige indu bele barode maduve anno javabdari bandamele.. hogli bidapaaa..
  • Arunkumar Davangere “Techie Savu” Idu ontara media dalli fashionable statement aagide……!
    • Rakesh Shetty “ಪ್ರತಿಷ್ಟೆ” ಅನ್ನುವುದಕ್ಕಿಂತ “ಮನಸ್ಥಿತಿ” ಅನ್ನಬಹುದೇನೋ? ನಮ್ಮಲ್ಲೂ ಉಳಿದ ಕೆಲಸಗಳಂತೆಯೇ ತರೇವಾರಿ ಜನಗಳಿದ್ದಾರೆ.ಆದರೆ ಮೀಡಿಯಾಗಳ ಅತಿರಂಜಿತ ವರದಿಗಳಿಂದ ಸಾಮಾನ್ಯ ಜನತೆಯ ದೃಷ್ಟಿಯಲ್ಲಿ ನಮ್ಮನ್ನು ಅನ್ಯಗ್ರಹದ ಜೀವಿಗಳ ರೀತಿ ಮಾಡಹೊರಟಿದ್ದಾರೆ ಅನ್ನಿಸುತ್ತೆ.
    • Prabhu Raj Harakangi Doller to Rupee conversion.. is the main reason.. vasudhendra book odri ganesh.. innoo bhala maja situation bardaraa..

2010 : ಹೊಸ ವರ್ಷದ ಶುಭಾಶಯಗಳು. ನಿಮ್ಮ ಕಂಪ್ಯೂಟರ್ ಪರದೆಯ ಮೇಲೆ ಬೆಂಗಳೂರು ಪ್ರೆಸ್ ಕ್ಯಾಲೆಂಡರ್ ಇರಲಿ. ಹಬ್ಬ ಹರಿದಿನ, ರಜಾದಿನ ನೋಡೋದಕ್ಕ್ ಬರುತ್ತೆ. :-)

           ನಮ್ಮ ಕಂಪ್ಯೂಟರ್ ಪರದೆಯ ಮೇಲೆ ಯಾವ ದೇಶದ್ದೋ ಕ್ಯಾಲೆಂಡರ್ ಯಾಕಿರಬೇಕು. ನಮ್ಮ ಕನ್ನಡ ನಾಡಿನದ್ದೆ ಇದ್ದಾರೆ ಚೆಂದ. ಗೋಡೆಯ ಮೇಲೆ ಬೆಂಗಳೂರು ಪ್ರೆಸ್ ಕ್ಯಾಲೆಂಡರ್ ನೋಡಿದ್ದೇವೆ. ನಮ್ಮ ನಮ್ಮ ಗಣಕಗಳಲ್ಲೂ ಹಾಗೆ ಇದ್ದರೆ….
ಅದಕ್ಕಾಗಿಯೇ, ಬೆಂಗಳೂರು ಪ್ರೆಸ್ ಇ ಕ್ಯಾಲೆಂಡರ್ ಇದೆ. ಡೌನ್ಲೋಡ್ ಮಾಡಿಕೊಳ್ಳಿ. Download events for the months Jan – June  2010 for the  BANGALORE PRESS “E-Calendar”    ಇನ್ಸ್ಟಾಲ್ ಮಾಡಿದ ನಂತರ events ಅಂತ ಇರೋ ಕಡೆ, import ಮಾಡಿ, event  file ನ್ನ specify  ಮಾಡಿ. ನಿಮ್ಮ ಗಣಕ ಪರದೆಯ ಮೇಲೆ ಮುಂದಿನ ಹಬ್ಬ ಹರಿದಿನ, ರಜಾದಿನ(ಹೊಸ ವರ್ಷದಲ್ಲಿ ಅದನ್ನೇ ಮೊದಲು ನೋಡೋದ್ ತಾನೇ..!) ಎಲ್ಲ ಲಭ್ಯ.
 
ಅಂದ್ ಹಾಗೆ, ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು. ಸಧ್ಯಕ್ಕೆ ನನ್ನ ಎಂ.ಟೆಕ್. ಪರೀಕ್ಷೆಗಳು ನಡೆಯುತ್ತಿವೆ. ಜನವರಿ ೨ ರ ನಂತರ ಭೇಟಿಯಾಗುತ್ತೇನೆ.