ಲೈವ್ ಕಾರ್ಯಕ್ರಮದಲ್ಲಿ ನಿರೂಪಕಿಗೆ ಕರುಳಿನ ಕ್ಯಾನ್ಸರ್ ಬರಿಸಿದ ಡಾಕ್ಟರು..!

Udaya News programಅವತ್ತು ಬೆಳಗ್ಗೆ(ಜ ೧೫ ಇರಬೇಕು) ಉದಯ ನ್ಯೂಸ್ ಚಾನಲ್ ನಲ್ಲಿ 10.30am – 11.30am ವರೆಗೆ ವೈದ್ಯಕೀಯ ಲೈವ್ ಕಾರ್ಯಕ್ರಮ ವೀಕ್ಷಿಸುತ್ತಿದ್ದೆ. ಒಬ್ಬರು ಉದರ ರೋಗ ತಜ್ಞರು ಬಂದಿದ್ದರು. ಲೈವ್ ಕಾರ್ಯಕ್ರಮವಾದ್ದರಿಂದ ಬಹಳ ಜನ ಕೋಲಾನ್(ದೊಡ್ಡ ಕರುಳಿನ) ಕ್ಯಾನ್ಸರ್ ಬಗ್ಗೆ ಪ್ರಶ್ನೆಗಳನ್ನ ಕೇಳಿದರು. ಕರೆ ಮುಕ್ತಾಯವಾಯಿತು. ನಿರೂಪಕಿಯೊಂದಿಗೆ ಕೋಲಾನ್ ಕ್ಯಾನ್ಸರ್ ಬಗ್ಗೆ ಮಾಹಿತಿ ನೀಡಲು ಶುರು ಮಾಡಿದರು. “ನೋಡಿ, ನಿಮಗೆ ಈ ಕೋಲಾನ್ ಕ್ಯಾನ್ಸರ್ ಬಂತು ಅಂದ್ರೆ ಜನ ಯಾವ ಸ್ಟೇಜ್ ನಲ್ಲಿದೆ ಅಂತಾ ಕೇಳ್ತಾರೆ. ನಮಗೆ ಆಪರೇಟ್ ಮಾಡದೇ ಕೊಲನೋಸ್ಕೋಪಿ ಮಾಡದೇ ಕ್ಯಾನ್ಸರ್ ಯಾವ ಸ್ಟೇಜ್‌ನಲ್ಲಿದೆ ಅಂತಾ ಹೇಳಕ್ ಬರಲ್ಲ. ಜೊತೆಗೆ ಮಲವಿಸರ್ಜನೆಗೂ ತೊಂದರೆಯಾಗುತ್ತದೆ.”

ಪಾಪ ನಿರೂಪಕಿಗೆ ಯಾವಾಗ ಕೋಲಾನ್ ಕ್ಯಾನ್ಸರ್ ಬಂತು..?

*****************************************************************************************

ಕೆಲವರಿಗೆ ಇದು ಚಟ. ಪ್ರತಿಯೊಂದಕ್ಕೂ “ನಿಮಗೆ””ನೀವು” ಬಳಸೋದು. ಅದು ಬಹುವಚನವೇ ಇರಬಹುದು. ಆದರೆ, ಕು(ಸು-ಅಲ್ಲ)ಸಂದರ್ಭದಲ್ಲಿ ಬಳಸಿದರೆ ಅದಕ್ಕಿಂತ ಮರ್ಯಾದೆ ಕಳೆಯುವ ಸಂಭವವೇ ಹೆಚ್ಚು.

ಒಂದು ಸೋಫಾ ಅಂಗಡಿಗೆ ಹೋಗಿ. ಈ ಸೋಫಾಕ್ಕೆ ಎಷ್ಟಾಗುತ್ತೆ ಅಂತಾ ಕೇಳಿ. “ಸರ್, ಇದು ಬಂದ್ಬಿಟ್ಟು ನಿಮ್ಗೆ 25 ಸಾವಿರ ಆಗುತ್ತೆ”
ಹತ್ತು ಹದಿನೈದು ವರ್ಷದ ಹಿಂದೆ ಬೆಂಗಳೂರಿನ ಭಾಷೆ ಹೀಗಿರಲಿಲ್ಲ ಅಲ್ಲವಾ.

*****************************************************************************************

ಇನ್ನೊಂದು ಸಂದರ್ಭ.
ಒಬ್ಬರು ಮೇಷ್ಟರಿದ್ದರು. ಜೀವಶಾಸ್ತ್ರ ಪ್ರಾಧ್ಯಾಪಕರು. Sexually Transmitted Diseases(STDs) ಪಾಠ ಮಾಡ್ತಾ ಇದ್ರು.
“There are three STDs. Namely, Gonorrhea,Syphilis and AIDS. You will get one of them in exam.”