ಲೈವ್ ಕಾರ್ಯಕ್ರಮದಲ್ಲಿ ನಿರೂಪಕಿಗೆ ಕರುಳಿನ ಕ್ಯಾನ್ಸರ್ ಬರಿಸಿದ ಡಾಕ್ಟರು..!

Udaya News programಅವತ್ತು ಬೆಳಗ್ಗೆ(ಜ ೧೫ ಇರಬೇಕು) ಉದಯ ನ್ಯೂಸ್ ಚಾನಲ್ ನಲ್ಲಿ 10.30am – 11.30am ವರೆಗೆ ವೈದ್ಯಕೀಯ ಲೈವ್ ಕಾರ್ಯಕ್ರಮ ವೀಕ್ಷಿಸುತ್ತಿದ್ದೆ. ಒಬ್ಬರು ಉದರ ರೋಗ ತಜ್ಞರು ಬಂದಿದ್ದರು. ಲೈವ್ ಕಾರ್ಯಕ್ರಮವಾದ್ದರಿಂದ ಬಹಳ ಜನ ಕೋಲಾನ್(ದೊಡ್ಡ ಕರುಳಿನ) ಕ್ಯಾನ್ಸರ್ ಬಗ್ಗೆ ಪ್ರಶ್ನೆಗಳನ್ನ ಕೇಳಿದರು. ಕರೆ ಮುಕ್ತಾಯವಾಯಿತು. ನಿರೂಪಕಿಯೊಂದಿಗೆ ಕೋಲಾನ್ ಕ್ಯಾನ್ಸರ್ ಬಗ್ಗೆ ಮಾಹಿತಿ ನೀಡಲು ಶುರು ಮಾಡಿದರು. “ನೋಡಿ, ನಿಮಗೆ ಈ ಕೋಲಾನ್ ಕ್ಯಾನ್ಸರ್ ಬಂತು ಅಂದ್ರೆ ಜನ ಯಾವ ಸ್ಟೇಜ್ ನಲ್ಲಿದೆ ಅಂತಾ ಕೇಳ್ತಾರೆ. ನಮಗೆ ಆಪರೇಟ್ ಮಾಡದೇ ಕೊಲನೋಸ್ಕೋಪಿ ಮಾಡದೇ ಕ್ಯಾನ್ಸರ್ ಯಾವ ಸ್ಟೇಜ್‌ನಲ್ಲಿದೆ ಅಂತಾ ಹೇಳಕ್ ಬರಲ್ಲ. ಜೊತೆಗೆ ಮಲವಿಸರ್ಜನೆಗೂ ತೊಂದರೆಯಾಗುತ್ತದೆ.”

ಪಾಪ ನಿರೂಪಕಿಗೆ ಯಾವಾಗ ಕೋಲಾನ್ ಕ್ಯಾನ್ಸರ್ ಬಂತು..?

*****************************************************************************************

ಕೆಲವರಿಗೆ ಇದು ಚಟ. ಪ್ರತಿಯೊಂದಕ್ಕೂ “ನಿಮಗೆ””ನೀವು” ಬಳಸೋದು. ಅದು ಬಹುವಚನವೇ ಇರಬಹುದು. ಆದರೆ, ಕು(ಸು-ಅಲ್ಲ)ಸಂದರ್ಭದಲ್ಲಿ ಬಳಸಿದರೆ ಅದಕ್ಕಿಂತ ಮರ್ಯಾದೆ ಕಳೆಯುವ ಸಂಭವವೇ ಹೆಚ್ಚು.

ಒಂದು ಸೋಫಾ ಅಂಗಡಿಗೆ ಹೋಗಿ. ಈ ಸೋಫಾಕ್ಕೆ ಎಷ್ಟಾಗುತ್ತೆ ಅಂತಾ ಕೇಳಿ. “ಸರ್, ಇದು ಬಂದ್ಬಿಟ್ಟು ನಿಮ್ಗೆ 25 ಸಾವಿರ ಆಗುತ್ತೆ”
ಹತ್ತು ಹದಿನೈದು ವರ್ಷದ ಹಿಂದೆ ಬೆಂಗಳೂರಿನ ಭಾಷೆ ಹೀಗಿರಲಿಲ್ಲ ಅಲ್ಲವಾ.

*****************************************************************************************

ಇನ್ನೊಂದು ಸಂದರ್ಭ.
ಒಬ್ಬರು ಮೇಷ್ಟರಿದ್ದರು. ಜೀವಶಾಸ್ತ್ರ ಪ್ರಾಧ್ಯಾಪಕರು. Sexually Transmitted Diseases(STDs) ಪಾಠ ಮಾಡ್ತಾ ಇದ್ರು.
“There are three STDs. Namely, Gonorrhea,Syphilis and AIDS. You will get one of them in exam.”

ಈ ಸಾಫ್ಟ್‌ವೇರ್ ಎಂಜಿನಿಯರ್‌ಗಳು ಎಲ್ಲದಕ್ಕೂ ಆತ್ಮಹತ್ಯೆ ಮಾಡ್ಕತಾವಲ್ಲ?

 
ಈ ಸಾಫ್ಟ್‌ವೇರ್ ಎಂಜಿನಿಯರ್‌ಗಳು ಎಲ್ಲದಕ್ಕೂ ಆತ್ಮಹತ್ಯೆ ಮಾಡ್ಕತಾವಲ್ಲ. ಕೆಲ್ಸ ಸಿಗ್ಲಿಲ್ಲ ಅಂತಾ, ಕೆಲ್ಸದಿಂದ ತೆಗೆದರು ಅಂತಾ, ಹೇಣ್ತಿ ಬೈತಾಳೆ ಅಂತಾ, ಗಂಡ ಬೈತಾನೆ ಅಂತಾ, ಸಂಸಾರ ನಡ್ಸಕ್ ಆಗ್ತಿಲ್ಲ ಅಂತಾ. ಸಧ್ಯಕ್ಕಿರೋ ಅಪ್‌ಡೇಟ್ – ಮದ್ವೆ ಆಗಿಲ್ಲ ಅಂತಾ..!
 Bng Techie Narasimhan Chakravarthy Suicide In Mysore

ಚಿತ್ರ ಕೃಪೆ: ದಟ್ಸ್‌ಕನ್ನಡ.ಕಾಂ

ಒಂದು ರೀತಿಯಲ್ಲಿ ದುರಂತ. ಇನ್ನೊಂದು ರೀತಿಯಲ್ಲಿ ತಮಾಷೆ. ಇನ್ನೂ ಒಂದು ರೀತಿಯಲ್ಲಿ ನೋಡಿದರೆ ಪ್ರತಿಷ್ಠೆಯ ಪರಮಾವಧಿಯ ಪ್ರತೀಕ. ಒಂದು ಕಿರಾಣಿ ಅಂಗಡಿ ಇದೆ ಅಂದುಕೊಳ್ಳಿ. ಅಲ್ಲಿ ಒಬ್ಬ ಹುಡುಗ ಕೆಲಸಕ್ಕೆ ಇರ್ತಾನೆ. ಸರಿಯಾಗಿ ಕೆಲಸ ಮಾಡಲ್ಲ ಅಂತಲೋ, ಸೋಮಾರಿ ಅಂತಲೋ, ಜಾಸ್ತಿ ಮಾತಾಡ್ತಾನೆ ಅಂತಲೋ, ಸಿಟ್ಟು ಜಾಸ್ತಿ ಇದೆ ಅಂತಲೋ ಅವನನ್ನ ಅಂಗಡಿಯಿಂದ ಬಿಡಿಸಿದರೆ ಏನ್ ಮಾಡ್ತಾನೆ? ಹೊಸ ಕೆಲಸ ಹುಡುಕ್ತಾನೆ. ಕಿರಾಣಿ ಅಂಗಡಿಯಲ್ಲೇ ಕೆಲಸ ಸಿಗುತ್ತದೆ ಅಂತಾ ವಿಶ್ವಾಸವನ್ನೇನೂ ಆತ ಹೊಂದುವುದಿಲ್ಲ. ಬದುಕಲಿಕ್ಕೆ ಒಂದು ಕೆಲಸ ಬೇಕು ಅಷ್ಟೇ. ಅದೇ ಸಾಫ್ಟ್‌ವೇರ್ ಎಂಜಿನಿಯರ್ ಒಬ್ಬನನ್ನ ಕೆಲಸದಿಂದ ತೆಗೆದುಹಾಕಿ ನೋಡಿ. ಅದ್ಯಾಕೆ ಅಷ್ಟು ಡಿಪ್ರೆಷನ್ ಗೆ ಒಳಗಾಗುತ್ತಾರೆ? ಇದು ಕೀಳರಿಮೆಯ ಪ್ರತೀಕವಲ್ಲವೇ? ಸಾಫ್ಟ್‌ವೇರ್ ಅನ್ನೋದು ಪ್ರತಿಷ್ಟೆಯನ್ನ ಸೃಷ್ಟಿಸಿದೆ ಅಲ್ಲವೇ? ಆ ಪ್ರತಿಷ್ಟೆ ಎಂಬ ವರ್ತುಲದಿಂದ ಹೊರ ಬರಲಿಕ್ಕೆ ಆಗದಷ್ಟು ಅದರಲ್ಲಿ ಹೂತು ಹೋಗಿದ್ದಾರೆ. ಜಾವಾ, ಸಿ++, ಸ್ಯಾಪ್, ಡಾಟ್ ನೆಟ್ ಅಥವಾ ಇನ್ಯಾವುದೋ ಪ್ಲಾಟ್‌ಫಾರಂ‌ನಲ್ಲಿ ಕೆಲಸ ಮಾಡುತ್ತಿದ್ದರೆ ಅದೇ ಕೆಲಸ ಹುಡುಕುತ್ತಾರೆ. ಓಪನಿಂಗ್ಸ್ ಇಲ್ಲಾ ಅಂದರೆ ನಿರಾಶರಾಗುತ್ತಾರೆ. ಅಮೇರಿಕಾ ಬೈಯುತ್ತಾರೆ. ಗ್ಲೋಬಲ್ ಎಕಾನಮಿ ಬೈಯುತ್ತಾರೆ. ಅಂಗಡಿಯಲ್ಲಿರುವ ಹುಡುಗ ಹೊಸ ಕೆಲಸಕ್ಕೆ ಸೇರಿದ. ಸಾಫ್ಟ್‌ವೇರ್ ಎಂಜಿನಿಯರು ನೇಣಿನ ಹಗ್ಗ ಸೇರಿದ..!

ಫೇಸ್ ಬುಕ್ಕಿನಲ್ಲಿ ಬರೆದ ಈ ಸ್ಟೇಟಸ್ ಬರಹಕ್ಕೆ ಬಂದ ಪ್ರತಿಕ್ರಿಯೆಗಳನ್ನ ಇಲ್ಲಿ ನೀಡಿದ್ದೇನೆ. ನಿಮಗೇನು ಅನ್ನಿಸುತ್ತದೆ?

  • Prabhu Raj Harakangi dudidiro duddige indu bele barode maduve anno javabdari bandamele.. hogli bidapaaa..
  • Arunkumar Davangere “Techie Savu” Idu ontara media dalli fashionable statement aagide……!
    • Rakesh Shetty “ಪ್ರತಿಷ್ಟೆ” ಅನ್ನುವುದಕ್ಕಿಂತ “ಮನಸ್ಥಿತಿ” ಅನ್ನಬಹುದೇನೋ? ನಮ್ಮಲ್ಲೂ ಉಳಿದ ಕೆಲಸಗಳಂತೆಯೇ ತರೇವಾರಿ ಜನಗಳಿದ್ದಾರೆ.ಆದರೆ ಮೀಡಿಯಾಗಳ ಅತಿರಂಜಿತ ವರದಿಗಳಿಂದ ಸಾಮಾನ್ಯ ಜನತೆಯ ದೃಷ್ಟಿಯಲ್ಲಿ ನಮ್ಮನ್ನು ಅನ್ಯಗ್ರಹದ ಜೀವಿಗಳ ರೀತಿ ಮಾಡಹೊರಟಿದ್ದಾರೆ ಅನ್ನಿಸುತ್ತೆ.
    • Prabhu Raj Harakangi Doller to Rupee conversion.. is the main reason.. vasudhendra book odri ganesh.. innoo bhala maja situation bardaraa..