ಹಂಪಿಗೆ ಸಿಕ್ಕ ಅಂತರರಾಷ್ಟ್ರೀಯ ಮಾನ್ಯತೆ, ಪ್ರಚಾರ ನಮ್ಮ ಚಿತ್ರದುರ್ಗಕ್ಕೇಕೆ ಇಲ್ಲ? ನಾನು ಕಂಡುಕೊಂಡ ಅಂಶಗಳು.
೧. ಅಂತರರಾಷ್ಟ್ರೀಯ ಮಟ್ಟದಲ್ಲಿ ಚಿತ್ರದುರ್ಗದ ಅದ್ಭುತ ಕೋಟೆ, ಗವಿಗಳ ಬಗ್ಗೆ ಮಾಹಿತಿ ಇಲ್ಲ.
೨. ಸರ್ಕಾರದಿಂದಲೂ ಈ ನಿಟ್ಟಿನಲ್ಲಿ ಪ್ರಯತ್ನಗಳು ನಡೆದಿಲ್ಲ.
೩. ಆನ್ ಲೈನ್ ಫೋರಂಗಳಲ್ಲಿ ಚಿತ್ರದುರ್ಗದ ಬಗ್ಗೆ ಚರ್ಚೆಯಾಗಿಲ್ಲ.

Chitradurga fort
ವಿದೇಶಿಯರಿಗೆ ಏನು ಬೇಕು?
೧. ಸ್ಥಳದ ಬಗ್ಗೆ ಸರಿಯಾದ ಮಾಹಿತಿ, ಆಸಕ್ತಿಕರ ಪ್ರೇಕ್ಷಣೀಯ ಅನ್ನಿಸುವಷ್ಟು ಯಾರಾದರೂ ಬರೆದ ಆಪ್ತ ಬರಹಗಳು ಮತ್ತು ಇತಿಹಾಸ.
೨. ಹತ್ತಿರದ ವಿಮಾನ ನಿಲ್ದಾಣದ ಮಾಹಿತಿ, ಬೆಂಗಳೂರಿನಿಂದ ಇರುವ ದೂರದ ಮಾಹಿತಿ, ಉತ್ತಮವಾದ ಊಟ ವಸತಿ ಸೌಕರ್ಯ, ಹೋಗಿ ಬರಲಿಕ್ಕೆ ತಗಲುವ ಸಮಯ.
೩. ಹತ್ತಿರದಲ್ಲಿ ಇರುವ ಇಂಟರ್ನೆಟ್ ಸೆಂಟರ್‌ಗಳ ಕುರಿತು ಮಾಹಿತಿ.
೪. ಬಸ್ ನಿಲ್ದಾಣ, ರೈಲ್ವೇ ನಿಲ್ದಾಣಗಳಲ್ಲಿ ಮಾಹಿತಿ ಕೇಂದ್ರಗಳು.
೫. ಇಂಟರ್ನೆಟ್ ನಲ್ಲಿ ಲಭ್ಯವಿರುವ ಇಂಗ್ಳೀಷ್‌ನಲ್ಲಿರುವ ಮಾಹಿತಿ ತುಂಬಾ ಕಡಿಮೆ, ಮತ್ತು ಅದನ್ನ ಪ್ರಸ್ತುತಪಡಿಸಿರುವ ರೀತಿ ಅನಾಕರ್ಷಕವಾಗಿದೆ. ಆಕರ್ಷಕ ವೆಬ್ ಸೈಟನ್ನ ನಿರ್ಮಿಸುವುದೂ ಕೂಡ ವಿದೇಶೀಯರನ್ನ ಚಿತ್ರದುರ್ಗಕ್ಕೆ ಬರಮಾಡಿಕೊಳ್ಳಲಿಕ್ಕೆ ಸಹಕಾರಿ.
ಸರ್ಕಾರ/ಸ್ಥಳೀಯ ಆಡಳಿತ ಏನು ಮಾಡಬೇಕು?
೧. ಚಿತ್ರದುರ್ಗದ ಬಗ್ಗೆ ಅದ್ಭುತವಾದ ಫೋಟೋಗಳನ್ನ ವಿಖ್ಯಾತ ಫೋಟೋಗ್ರಾಫರ್‌ಗಳಿಂಗ ತೆಗೆಸಿ ರಾಷ್ಟ್ರ ಮಟ್ಟದ ಪತ್ರಿಕೆಗಳಲ್ಲಿ ಜಾಹಿರಾತು ನೀಡಬೇಕು.
೨. ಚಿತ್ರದುರ್ಗದ ಕೋಟೆಯ ಕುರಿತು ಫೋಟೋಗ್ರಾಫಿ ಸ್ಪರ್ಧೆ ಏರ್ಪಡಿಸಬೇಕು. ಐವತ್ತು ಸಾವಿರದಿಂದ ಲಕ್ಷ ರೂಪಾಯಿ ಬಹುಮಾನವಿಟ್ಟು ಎಲ್ಲ ಫೋಟೋಗ್ರಫಿ ಮ್ಯಾಗಜೀನ್‌ಗಳಲ್ಲಿ ಜಾಹಿರಾತು/ಮಾಹಿತಿ ನೀಡಬೇಕು. ಸ್ಪರ್ಧೆಯಿಂದ ಬರುವ ಅತ್ಯುತ್ತಮ ಫೋಟೋಗಳನ್ನ ಜಾಹಿರಾತುಗಳಿಗೆ ಬಳಸಿಕೊಳ್ಳಬೇಕು.
೩. ಎಲ್ಲಕ್ಕಿಂತ ಮುಖ್ಯವಾಗಿ ವಿದೇಶೀಯರು ಬಂದಾಗ ಅವರೊಂದಿಗೆ ಹೇಗೆ ಸೌಜನ್ಯಯುತವಾಗಿ ವರ್ತಿಸಬೇಕು ಅನ್ನುವುದರ ಬಗ್ಗೆ ಎಲ್ಲ ಸರ್ಕಾರಿ ಅಧಿಕಾರಿಗಳಿಗೆ, ಮಾಹಿತಿ ಅಧಿಕಾರಿಗಳಿಗೆ, ಬಸ್ ಕಂಡಕ್ಟರುಗಳಿಗೆ ತರಬೇತಿ ನೀಡಬೇಕು.
೪. ಪ್ರಮುಖವಾಗಿ, ವಿದೇಶಿಯರ ಸುರಕ್ಷತೆಯ ಬಗ್ಗೆ ಕಾಳಜಿ ವಹಿಸಬೇಕು. ಸ್ಥಳೀಯ ಕಿಡಿಗೇಡಿಗಳಿಂದ, ದುಷ್ಕರ್ಮಿಗಳಿಂದ ಯಾವುದೇ ಕಿರಿಕಿರಿ ಅಥವಾ ದೌರ್ಜನ್ಯ ನಡೆಯದಂತೆ ಸೂಕ್ತ ಭದ್ರತೆ ಒದಗಿಸಬೇಕು.
ಜನತೆ ಏನು ಮಾಡಬೇಕು?
೧. ಭಾರತಕ್ಕೆ ಬರುವ ಪ್ರತಿ ವಿದೇಶಿ ಯಾತಿಕನ ಕೈಯಲ್ಲೂ ಲವ್ಲಿ ಪ್ಲಾನೆಟ್ ಡಾಟ್ ಕಾಂ(lovelyplanet.com) ಪ್ರಕಟಿಸಿದ ಭಾರತದ ಕುರಿತಾದ ಪುಸ್ತಕವಿರುತ್ತದೆ. ಅದರಲ್ಲಿ ಚಿತ್ರದುರ್ಗದ ಮಾಹಿತಿಯನ್ನ ಸೇರಿಸಲಿಕ್ಕೆ ಮನವಿ ಪತ್ರವನ್ನು ಕಳಿಸಬೇಕು. ಜೊತೆಗೆ ಫೋಟೊಗಳನ್ನು ಕಳಿಸಿಕೊಡಬೇಕು.
೨. ಆನ್ ಲೈನ್ ಫೋರಂಗಳಲ್ಲಿ ಚಿತ್ರದುರ್ಗದ ಬಗ್ಗೆ ಒಳ್ಳೆಯ ಮಾತುಗಳನ್ನ ಬರೆಯಬೇಕು. ಛಾಯಾಚಿತ್ರಗಳನ್ನ ಹಾಕಬೇಕು.
೩. ಫೇಸ್ ಬುಕ್ ಫೋರಂಗಳಲ್ಲಿ ಜನತೆ ಭಾಗವಹಿಸಿ ಚಿತ್ರದುರ್ಗದ ಅದ್ಭುತ ಫೋಟೋಗಳನ್ನ ಶೇರ್ ಮಾಡಬೇಕು.
ಇವೆಲ್ಲವುಗಳನ್ನ ಮಾಡಿದಲ್ಲಿ, ಪ್ರವಾಸೋದ್ಯಮದಿಂದ ಅತಿ ಹೆಚ್ಚಿನ ಹಣದ ಒಳಹರಿವು ಸಾಧ್ಯವಾಗುತ್ತದೆ. ಇದು ನಗರದ ಆರ್ಥಿಕತೆಯನ್ನ ಬಲಗೊಳಿಸುತ್ತದೆ. ಚಿತ್ರದುರ್ಗದ ಸಂಸದ, ಯುವ ರಾಜಕಾರಣಿ ಜನಾರ್ಧನ ಸ್ವಾಮಿ ಇದರ ಬಗ್ಗೆ ತುರ್ತಾಗಿ ಗಮನವಹಿಸಬೇಕಿದೆ.
ಶುಭಾಶಯಗಳೊಂದಿಗೆ,
ಗಣೇಶ್ ಕೆ.
ಸಹಾಯಕ ಪ್ರಾಧ್ಯಾಪಕರು,
ಹುಬ್ಬಳ್ಳಿ