ಕಾಶ್ಮೀರಿ ಉಪ್ಚಾ..!

Kashmiri Noon Chai – Wikipedia

ಹೋದ ಡಿಸೆಂಬರ್ ನಲ್ಲಿ ಮೈಸೂರಿನಲ್ಲಿ ಕಾಗ್ನಿಷನ್ ಮತ್ತು ರೆಕಗ್ನಿಷನ್ ಕಾನ್ಫರೆನ್ಸ್ ಗೆ ಹೋದಾಗ ಒಬ್ಬ ಮಂಗಳೂರು ವಿವಿಯಲ್ಲಿ ಬಿಗ್ ಡೇಟಾ ಬಗ್ಗೆ ಸಂಶೋಧನೆಯಲ್ಲಿ ತೊಡಗಿದ ಕಾಶ್ಮೀರಿ ಸಂಶೋಧಕ ಪರಿಚಯವಾಗಿದ್ದ. ಕಾಶ್ಮೀರದ ಬಗ್ಗೆ ಕುತೂಹಲಕಾರಿಯಾಗಿ ಅಲ್ಲಿನ ಬೆಳಗಿನ ತಿಂಡಿ ಪೇಯಗಳ ಬಗ್ಗೆ ಕೇಳುತ್ತಿದ್ದಾಗ ಆತ “ನುನ್ ಚಾಯ್” ಬಗ್ಗೆ ಹೇಳಿದ್ದ. ನುನ್ ಅಂದ್ರೆ ಕಾಶ್ಮೀರಿ ಭಾಷೆಯಲ್ಲಿ ಉಪ್ಪು. ಚಾ ಗೂ ಉಪ್ಪಿಗೂ ಸಂಬಂಧವೇನು? 🙂 ಮಂಡ್ಯ ಕಡೆ ಮುದ್ದೆಗೆ ಮಾಡುವ ಸಾರಿಗೆ “ಉಪ್ಸಾರು” ಅಂದಂಗೆ ನಾವು ಇದನ್ನ “ಉಪ್ಚಾ” ಅನ್ಕಬೋದೇನೋ. ನನ್ನ ಕಾಶ್ಮೀರಿ ವಿದ್ಯಾರ್ಥಿನಿ ಒಬ್ಬಾಕೆ ಈ ಬಾರಿ ಊರಿಗೆ ಹೋದಾಗ ಈ ಚಹಾ ಪುಡಿ ತರುವುದಾಗಿ ಆಶ್ವಾಸನೆ ಕೊಟ್ಟಿದ್ದಾಳೆ.

ಹೀಗೇ ನುನ್ ಚಾ ಬಗ್ಗೆ ಕಣ್ಣಗಲಿಸಿ ಗೂಗಲಿಸಿದಾಗ ಸಿಕ್ಕ ಲಿಂಕನ್ನ, ವಿಕಿ ಹೌ ನಲ್ಲಿ ಸಿಕ್ಕ ಮಾಹಿತಿ, ವೀಡಿಯೋವನ್ನ ಶೇರ್ ಮಾಡುತ್ತಿದ್ದೇನೆ. ಉಪ್ಚಾಗೆ ಜೈ..!