ರಾಜಶೇಖರ ರೆಡ್ಡಿ ಸಾವು. ಒಂದು ವಿಶ್ಲೇಷಣೆ.

ನಲ್ಲಮಲ್ಲ ಅಥವಾ ನಲ್ಲ ಮಲೈ ಎಂದು ಕರೆಯಲ್ಪಡುವ ಜ್ಯೋತಿರ್ಲಿಂಗವಿರುವ ಶ್ರೀಶೈಲದ ಬಳಿಯ ದಟ್ಟಾರಣ್ಯ. ಹೈದರಾಬಾದಿನಿಂದ ೩೩೦ ಕಿಮೀ. ನಮ್ಮ ಬಂಡೀಪುರ, ನಾಗರಹೊಳೆಯಷ್ಟು ದಟ್ಟವಾದ, ರಕ್ಷಿತ ಅರಣ್ಯವಲಯ.

ತಲುಪಬೇಕಾದ ಊರನ್ನ ಬಿಟ್ಟು ೧೪ ಕಿ.ಮೀ ದಾರಿ ತಪ್ಪಿದ ಹೆಲಿಕಾಪ್ಟರ್ ಕೊನೆಗೆ ಗಿರಿಶ್ರೇಣಿಯ ತುದಿಯೊಂದಕ್ಕೆ ಬಡಿದು, ಸ್ಫೋಟಗೊಂದು, ಒಳಗಿದ್ದವರೆಲ್ಲಾ ಸುಟ್ಟುಹೋದರು. ಹೆಲಿಕಾಪ್ಟರ್ ನ ಹಿಂಬದಿ ಮಾತ್ರ ಗುರುತಿಸಲು ಬರುವಂತಿದೆ. ಮುಂಭಾಗವೆಲ್ಲಾ ಅಪರಿಮಿತ ಚೂರುಗಳಾಗಿ ಗಿರಿಶ್ರೇಣಿಯಲ್ಲಿ ಹರಡಿಕೊಂಡಿದೆ. ೨ ಸೆಪ್ಟೆಂಬರ್ ಗೆ ಶುರುವಾದ ಹುಡುಕಾಟ ೩ಕ್ಕೆ ಕೊನೆಗೊಂಡು ಆಘಾತಕಾರಿ ಸುದ್ದಿಯನ್ನೇ ನೀಡಿದೆ

ಗುಲ್ಬರ್ಗಾ ವಿವಿ ಯಿಂದ ಮೆಡಿಕಲ್ ಸೈನ್ಸ್ ‍ನಲ್ಲಿ ಡಾಕ್ಟರೇಟ್ ಪದವಿ ಪಡೆದ ಮುಖ್ಯಮಂತ್ರಿ ರಾಜಶೇಖರ ರೆಡ್ಡಿ. ಅಕ್ಕಿಯ ಬೆಲೆ ಜಾಸ್ತಿಯಾದಾಗ, ೩೫ರ ಆಸುಪಾಸಿಗೆ ಹೋದಾಗ, ಕಡಿಮೆ ರೇಟಿನ ೧೫ರೂ ಅಕ್ಕಿ ಬಳಸಿ ಜನರಿಗೆ ಮಾದರಿಯಾದ ವ್ಯಕ್ತಿ.

ರೆಡ್ಡಿ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಕರ್ನೂಲ್ ಜಿಲ್ಲೆಯ ಅಟ್ಮಕೂರು ಬಳಿಯ ಅರಣ್ಯಭರಿತ ಗಿರಿಶ್ರೇಣಿಗೆ ಢಿಕ್ಕಿ ಹೊಡೆದಿರಬಹುದು. ಅತಿಯಾದ ಮಳೆ ಮತ್ತು ಪ್ರತಿಕೂಲವಾದ ವಾತಾವರಣ ಪೈಲಟ್ ಗೆ ಚಾಲನೆಗೆ ತೊಂದರೆಯೊಡ್ಡಿ, ದಿಕ್ಕು ತಪ್ಪಿಸಿರಬಹುದು. ಆದ್ರೆ, ಇಲ್ಲಿ ಬೆಲ್ ೪೩೦ ಹೆಲಿಕ್ಯಾಪ್ಟರ್ ನ ವಿಂಡ್ ಶೀಲ್ಡ್ ಬಿರುಕಿನಿಂದ ಕೂಡಿತ್ತು ಎಂಬುದು ಗಮನೀಯ ಸಂಗತಿ. ಇದು ತರಬೇತಿಗಾಗಿ ಮಾತ್ರ ಉಪಯೋಗಿಸಲು ಯೋಗ್ಯ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆಂದು ರೆಡಿಫ್ ವರದಿ ಮಾಡಿದೆ.

ಇಲ್ಲಿ ಒಂದು ಗಮನಿಸಬೇಕಾದ ಅಂಘವೆಂದರೆ ಅಖಂಡ ಭಾರತದಲ್ಲೆ ಅಭೂತಪೂರ್ವ ಶೋಧ ಕಾರ್ಯ ಕೈಗೊಂಡಿದ್ದರ ಬಗ್ಗೆ. ಬೇರೆ ಸಾಮಾನ್ಯ ವ್ಯಕ್ತಿ ಕಳೆದು ಹೋಗಿದ್ದರೆ ಇಷ್ಟೆಲ್ಲಾ ಮಾಡ್ತಿದ್ರಾ..? ಇರಲಿ. ಒಬ್ಬ ರಾಜಕೀಯ ನೇತಾರ ಅದೂ ಅಧಿಕಾರದಲ್ಲಿರುವಾತ ಕಣ್ಮರೆಯಾದರೆ, ಅದೂ ಜೊತೆಗೆ ತನ್ನೆಲ್ಲ ಉನ್ನತ ಮಟ್ಟದ ಅಧಿಕಾರಿಗಳೊಂದಿಗೆ, ಅರಾಜಕತೆ ತಾಂಡವವಾಡುತ್ತದೆ. ಮುಂದೆ ಅಧಿಕಾರಕ್ಕಾಗಿ ಕಚ್ಚಾಟ ಶುರುವಾಗುತ್ತದೆ. ಜೊತೆಗೆ ಹಿರಿಯ ಕಾಂಗ್ರೆಸಿಗ, ಆಂಧ್ರಪ್ರದೇಶದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಾತ, ಸೋನಿಯಾಗೆ ಆಪ್ತ ಎಂಬುದೆಲ್ಲವೂ ಅಭೂತಪೂರ್ವ ಶೋಧ ಕಾರ್ಯಾಚರಣೆಗೆ ಪ್ಲಸ್ ಪಾಯಿಂಟ್‍ಗಳು.

ಇದೆಲ್ಲ ಸರಿ. ೫೦೦೦ ಸಿ.ಆರ್.ಪಿ.ಎಫ್ ಯೋಧರು, ಇಂಡಿಯನ್ ಏರ್ ಫೋರ್ಸ್ ನ ೫ ವಿಮಾನಗಳು, ಸುಖೋಯ್ ವಿಮಾನಗಳು, ಇವೆಲ್ಲವೂ ಇದರಲ್ಲಿ ಪಾಲ್ಗೊಂಡಿದ್ದವು. ಈ ಸುಸಜ್ಜಿತ ಸುಖೋಯ್ ವಿಮಾನಗಳು ಗಾಳಿಯಲ್ಲೇ ಇಂಧನ ಮರುಪೂರಣ ಸೌಲಭ್ಯ ಹೊಂದಿರುವಂಥವು. ಜೊತೆಗೆ high clarity image ಗಳನ್ನ capture ಮಾಡಲಿಕ್ಕೆ ಸಶಕ್ತವಾದಂಥವು. ವಿಮಾನದ ಅಡಿಯಲ್ಲಿ ಜೋಡಿಸಿರುವ high resolution ಕ್ಯಾಮರಾಗಳು ಶೋಧ ಕಾರ್ಯದಲ್ಲಿದ್ದವು.

ಇಸ್ರೋ ಕೂಡಾ 41 image ಗಳನ್ನ ತೆಗೆದು ಸರಕಾರದೊಂದಿಗೆ ಹಂಚಿಕೊಂಡಿದೆ. ಆದರೆ, ಇಸ್ರೋನ ಭೂಸ್ಥಿರ ಉಪಗ್ರಹ(geo stationary satellite) 3 ಸೆಪ್ಟೆಂಬರ್ ನ ಬೆಳಗ್ಗೆ ಹೊತ್ತಿಗೆ ನಲ್ಲವಲ್ಲ ಕಾಡಿನ ಪ್ರದೇಶವನ್ನ ನೇರವಾಗಿ ದಿಟ್ಟಿಸಬಹುದು. ಹಾಗಾಗಿ ಅಲ್ಲಿಯವರೆಗು ಅದರ image ಗಳು ಅಲಭ್ಯವಾದವು. Metal Detector ಗಳನ್ನ ಕೂಡಾ ಹೊಂದಿರುವುದರಿಂದ, ಹೆಲಿಕಾಪ್ಟರ್ ಅವಶೇಶಗಳನ್ನ ಗುರುತಿಸಬಹುದಿತ್ತು. ಆದ್ರೆ, ಇದಕ್ಕೆಲ್ಲಾ ಶೋಧ ಕಾರ್ಯ ಶುರುವಾಗಿ ಸರಿಯಾಗಿ ೨೪ ತಾಸುಗಳು ಬೇಕು. ಇಸ್ರೋನ ಉಪಗ್ರಹದಿಂದ ಭೂಮಿಯ ಮೇಲಿರುವ ವಾಹನದ ನಂಬರ್ ಪ್ಲೇಟನ್ನೂ ಕೂಡಾ ಗುರುತಿಸಬಹುದು..! ನಮಗೆ ಕಾಣದ, ಸಾವಿರಾರು ಕಿಲೋ ಮೀಟರ್ ದೂರದಲ್ಲಿರುವ ಉಪಗ್ರಹವೊಂದು ನಮ್ಮ ಗಾಡಿ ನಂಬರನ್ನ ಹೇಳುತ್ತದೆಯೆಂದರೆ ಇದು ಸಾಮಾನ್ಯದ ಮಾತಲ್ಲ. ಆದರೆ, ಇಸ್ರೋನ ಉಪಗ್ರಹಗಳೂ ಕೂಡಾ ದಟ್ಟ ಅರಣ್ಯವಾದ್ದರಿಂದ ಕಾರ್ಯಾಚರಣೆಗೆ ಸಾಥ್ ನೀಡದಾದವು.

ಇಲ್ಲಿ ಇನ್ನೊಂದು ಸಾಮ್ಯತೆಯಿರುವ ಸಂಗತಿಯನ್ನೂ ಗಮನಿಸಬಹುದು. ಹೆಲಿಕಾಪ್ಟರ್ ಢಿಕ್ಕಿ ಹೊಡೆದದ್ದು ೨೫೦೦ ಮಿಲಿಯನ್ ವರ್ಷಗಳ ಹಿಂದೆ ನಿರ್ಮಿತವಾದ ಶಿಖರದ ತುದಿಗೆ. ಇವು ಕಬ್ಬಿಣಾಂಶಗಳನ್ನ ಹೊಂದಿರುತ್ತವೆ. ದಾರಿ ತಪ್ಪಿದ ಹೆಲಿಕಾಪ್ಟರ್ ಪ್ರತಿಕೂಲ ವಾತಾವರದ ಕಾರಣ ಮತ್ತು ಹೆಲಿಕಾಪ್ಟರ್ ದೋಷದಿಂದ ಇದಕ್ಕೆ ಢಿಕ್ಕಿ ಹೊಡೆದಿದೆ. ತೇಜಸ್ವಿಯವರ ಕಾದಂಬರಿಯಲ್ಲಿ ಬರುವ ಮ್ಯಾಗ್ನೆಟಿಕ್ ಶಿಲಾ ಶಿಖರವೊಂದು ಹೆಲಿಕಾಪ್ಟರ್,ವಿಮಾನಗಳನ್ನ ಆಕರ್ಷಿಸುವ ಶಕ್ತಿ ಹೊಂದಿರುವಂತೆ, ಇಲ್ಲಿ ಕೂಡಾ ಅದೇ ಆಗಿರಬಹುದಲ್ಲವಾ.. ಶಿಲಾ ಶಿಖರಗಳು ಹೆಮಟೈಟ್, ಮ್ಯಾಗ್ನಟೈಟ್ ಹೊಂದಿರುವುದರಿಂದ ಅದರ ಇನ್ನೊಂದು ರೂಪವಾಗಿ ಅಯಸ್ಕಾಂತವಾಗಿಯೇ ಏಕಿರಬಾರದು.

ತನಿಖೆಯಿಂದ ಮಾತ್ರ ತಿಳಿಯಬಹುದು.